ಕಪಿಲ್ ದಾಖಲೆ ಮುರಿಯುವ ಹೊಸ್ತಿಲಲ್ಲಿ ಬುಮ್ರಾ..! ಸರ್ವಶ್ರೇಷ್ಠ ಫಾಸ್ಟ್ ಬೌಲರ್ ಆಗ್ತಾರಾ ಜಸ್ಪ್ರೀತ್..?

By Suvarna News  |  First Published Jan 7, 2024, 5:00 PM IST

ಸೌತ್ ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌ & ಆಸ್ಟ್ರೇಲಿಯಾ ದೇಶಗಳ ಕ್ರಿಕೆಟ್ ಪಿಚ್‌ಗಳು ಅಲ್ಲಿನ ವೇಗದ ಬೌಲರ್‌ಗಳಿಗೆ ಅನುಗುಣವಾಗಿ ಸಿದ್ದಪಡಿಸಲಾಗುತ್ತೆ. ಇಲ್ಲಿ ವಿದೇಶಿ ಬೌಲರ್ಸ್ ವಿಕೆಟ್ ಪಡೆಯೋಕೆ, ಬ್ಯಾಟರ್ಸ್ ರನ್ ಗಳಿಸೋಕೆ ಹರಸಾಹಸವೇ ಪಡಬೇಕು. ಆದ್ರೂ ಭಾರತೀಯ ಬ್ಯಾಟರ್ಸ್, ಸೆನಾ ರಾಷ್ಟ್ರದಲ್ಲಿ ರನ್ ಹೊಳೆಯನ್ನೇ ಹರಿಸಿದ್ದಾರೆ.


ಬೆಂಗಳೂರು(ಜ.07) ಜಸ್ಪ್ರೀತ್ ಬುಮ್ರಾ ಸೌತ್ ಆಫ್ರಿಕಾದಲ್ಲಿ ಮ್ಯಾನ್ ಆಫ್ ದ ಸಿರೀಸ್ ಪಡೆದ್ರು. ಈ ಮೂಲ್ಕ ಅವರು ಕಪಿಲ್ ದಾಖಲೆ ಮುರಿಯುವ ಹಾದಿಯಲ್ಲಿದ್ದಾರೆ. ಅಷ್ಟೇ ಅಲ್ಲ, ಭಾರತದ ದಿ ಬೆಸ್ಟ್ ಫಾಸ್ಟ್ ಬೌಲರ್ ಎನಿಸಿಕೊಳ್ಳುವತ್ತಲೂ ಹೆಜ್ಜೆ ಇಟ್ಟಿದ್ದಾರೆ. ಸೆನಾ ರಾಷ್ಟ್ರಗಳಲ್ಲಿ ಬುಮ್ರಾ ದಾಖಲೆಗಳ ಸರದಾರ.

ಸರ್ವಶ್ರೇಷ್ಠ ಫಾಸ್ಟ್ ಬೌಲರ್ ಆಗ್ತಾರಾ ಜಸ್ಪ್ರೀತ್..?

Tap to resize

Latest Videos

ಸೌತ್ ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌ & ಆಸ್ಟ್ರೇಲಿಯಾ ದೇಶಗಳ ಕ್ರಿಕೆಟ್ ಪಿಚ್‌ಗಳು ಅಲ್ಲಿನ ವೇಗದ ಬೌಲರ್‌ಗಳಿಗೆ ಅನುಗುಣವಾಗಿ ಸಿದ್ದಪಡಿಸಲಾಗುತ್ತೆ. ಇಲ್ಲಿ ವಿದೇಶಿ ಬೌಲರ್ಸ್ ವಿಕೆಟ್ ಪಡೆಯೋಕೆ, ಬ್ಯಾಟರ್ಸ್ ರನ್ ಗಳಿಸೋಕೆ ಹರಸಾಹಸವೇ ಪಡಬೇಕು. ಆದ್ರೂ ಭಾರತೀಯ ಬ್ಯಾಟರ್ಸ್, ಸೆನಾ ರಾಷ್ಟ್ರದಲ್ಲಿ ರನ್ ಹೊಳೆಯನ್ನೇ ಹರಿಸಿದ್ದಾರೆ. ಬೌಲರ್ಸ್ ವಿಕೆಟ್ ಬೇಟೆಯಾಡಿದ್ದಾರೆ. ಮೊನ್ನೆ ಮುಕ್ತಾಯವಾಗಿ ಟೆಸ್ಟ್ ಪಂದ್ಯಗಳು ನಡೆದ ಸೌತ್ ಆಫ್ರಿಕಾದ  ಸೆಂಚುರಿಯನ್ ಹಾಗೂ ಕೇಪ್ ಟೌನ್ ಪಿಚ್‌ಗಳು ಕೂಡ ಫಾಸ್ಟ್ ಬೌಲರ್ಸ್‌ಗೆ  ಹೆಚ್ಚು ನೆರವಾಗ್ತಿದ್ದವು. ಈ ಪಿಚ್‌ಗಳಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಜಸ್‌ಪ್ರೀತ್ ಬುಮ್ರಾ 5 ವಿಕೆಟ್ ಸಾಧನೆ ಮಾಡಿ ಗಮನ ಸೆಳೆದಿದ್ದರು. 

5 ತಿಂಗಳ ಮುಂಚೆಯೇ ವಿಶ್ವಕಪ್ ಆತಿಥ್ಯಕ್ಕೆ ಅಮೇರಿಕಾ ಸಿದ್ಧ..! USA ನಲ್ಲಿ ರಾರಾಜಿಸುತ್ತಿವೆ ಕೊಹ್ಲಿ ಕಟೌಟ್..!

ಬುಮ್ರಾ ಈಗ ಕಪಿಲ್ ದೇವ್ ದಾಖಲೆ ಮುರಿಯುವ ಹೊಸ್ತಿಲಿಗೆ ಬಂದು ನಿಂತಿದ್ದಾರೆ. ಸೇನಾ ರಾಷ್ಟ್ರದಲ್ಲಿ ಅತಿಹೆಚ್ಚು ಬಾರಿ ಐದಕ್ಕೂ ಅಧಿಕ ವಿಕೆಟ್ ಪಡೆದ ಸಾಧನೆಯನ್ನ ಕಪಿಲ್ ಮಾಡಿದ್ದಾರೆ. ಹೌದು, ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್, ಸೆನಾ ರಾಷ್ಟ್ರದಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಟೇಕರ್ ಕೂಡ. ಸೆನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು 5 ವಿಕೆಟ್ ಸಾಧನೆ ಮಾಡಿದ ಭಾರತೀಯ ಬೌಲರ್ಸ್ ಇಲ್ಲಿದ್ದಾರೆ ನೋಡಿ.

ಕಪಿಲ್ ದೇವ್ 8 ಸಲ ಐದಕ್ಕೂ ಅಧಿಕ ವಿಕೆಟ್

ಭಾರತಕ್ಕೆ ಮೊದಲ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಕ್ಯಾಪ್ಟನ್ ಎನಿಸಿಕೊಂಡಿರುವ ಕಪಿಲ್ ದೇವ್, ಸೆನಾ ರಾಷ್ಟ್ರಗಳಲ್ಲಿ ಅತಿಹೆಚ್ಚು ಬಾರಿ ಐದು ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಆಲ್ರೌಂಡರ್ ಕಪಿಲ್, 8 ಸಲ ಸೆನಾ ದೇಶದಲ್ಲಿ ಐದಕ್ಕೂ ಅಧಿಕ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ನಲ್ಲಿ 5 ಮತ್ತು ಆಸ್ಟ್ರೇಲಿಯಾದಲ್ಲಿ ಮೂರು ಬಾರಿ ಐದಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ. ಆದ್ರೆ ಕಪಿಲ್, ಆಫ್ರಿಕಾ ಹಾಗೂ ನ್ಯೂಜಿಲೆಂಡ್‌ನಲ್ಲಿ 5 ವಿಕೆಟ್ ಪಡೆದಿಲ್ಲ. 

ಕಪಿಲ್ ದಾಖಲೆ ಮುರಿಯಲು ಬುಮ್ರಾಗೆ ಬೇಕಿದೆ ಇನ್ನೈದು ವಿಕೆಟ್

ಕೇಪ್ ಟೌನ್ ಟೆಸ್ಟ್‌ನಲ್ಲಿ ಜಸ್ ಪ್ರೀತ್ ಬುಮ್ರಾ, 2ನೇ ಇನ್ನಿಂಗ್‌ನಲ್ಲಿ  6 ವಿಕೆಟ್ ಪಡೆಯೋ ಮೂಲಕ ಹರಿಣಗಳ ಬೇಟೆಯಾಡಿದ್ದರು. ಈ ಮೂಲಕ  ಸೆನಾ ರಾಷ್ಟ್ರಗಳಲ್ಲಿ 7 ಸಲ ಐದಕ್ಕೂ ಅಧಿಕ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಬುಮ್ರಾ, ಇಂಗ್ಲೆಂಡ್ ಹಾಗೂ ಆಫ್ರಿಕಾದಲ್ಲಿ ತಲಾ 3 ಪಂದ್ಯಗಳಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದರೆ, ಆಸ್ಟ್ರೇಲಿಯಾದಲ್ಲಿ ಒಂದು ಬಾರಿ ಈ ಸಾಧನೆ ಮಾಡಿದ್ದಾರೆ.

ಕಳವಾಗಿದ್ದ ಡೇವಿಡ್ ವಾರ್ನರ್‌ ‘ಬ್ಯಾಗಿ ಗ್ರೀನ್‌’ ಪತ್ತೆ!

SENA ರಾಷ್ಟ್ರದಲ್ಲಿ ಬೆಸ್ಟ್ ಸ್ಪಿನ್ನರ್ ಕುಂಬ್ಳೆ..! 

ಭಾರತೀಯ ಕ್ರಿಕೆಟ್‌ನ ಸರ್ವಶ್ರೇಷ್ಠ ಸ್ಪಿನ್ನರ್ ಕನ್ನಡಿಗ ಅನಿಲ್ ಕುಂಬ್ಳೆ ಭಾರತ ಹಾಗೂ ಉಪಖಂಡಗಳ ಪಿಚ್‌ಗಳಲ್ಲಿ ತಮ್ಮ ಸ್ಪಿನ್ ಮೋಡಿ ಮಾಡಿದ್ದಾರೆ. ಆದ್ರೂ ಸೆನಾ ರಾಷ್ಟ್ರಗಳಲ್ಲಿ 6 ಸಲ 5 ವಿಕೆಟ್ ಸಾಧನೆ ಮಾಡಿದ್ದಾರೆ. ಟೀಮ್ ಇಂಡಿಯಾ ಪರ ಅತಿ ಹೆಚ್ಚು ಬಾರಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ 3ನೇ ಬೌಲರ್, ಮೊದಲ ಸ್ಪಿನ್ನರ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಲೆಗ್ ಸ್ಪಿನ್ನರ್, ಆಸ್ಟ್ರೇಲಿಯಾದಲ್ಲಿ 4, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಪಿಚ್‌ಗಳಲ್ಲಿ ಒಂದು ಬಾರಿ 5 ವಿಕೆಟ್ ಸಾಧನೆ ಮಾಡಿದ್ದಾರೆ.

ಜಹೀರ್ ಖಾನ್ ಕಿವೀಸ್‌ನಲ್ಲಿ ಕಿಂಗ್

2011ರ ವಿಶ್ವಕಪ್ ವಿಜೇತ ಬೌಲರ್ ಜಹೀರ್ ಖಾನ್ ಸೆನಾ ರಾಷ್ಟ್ರಗಳಲ್ಲಿ 6 ಬಾರಿ 5 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಜಹೀರ್ ನ್ಯೂಜಿಲೆಂಡ್ನಲ್ಲಿ 4  ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನಲ್ಲಿ ತಲಾ ಒಂದು ಬಾರಿ 5 ವಿಕೆಟ್ ಸಾಧನೆ ಮೆರೆದಿದ್ದಾರೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!