ಇಂಗ್ಲೆಂಡ್ ನಿರ್ಲಕ್ಷ್ಯ; ಅಮೆರಿಕ ತಂಡಕ್ಕೆ ಆಡಲು ನಿರ್ಧರಿಸಿದ ವಿಶ್ವಕಪ್ ಕ್ರಿಕೆಟಿಗ!

By Suvarna NewsFirst Published Jun 2, 2020, 6:26 PM IST
Highlights

2019ರ ವಿಶ್ವಕಪ್ ಟೂರ್ನಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಇಂಗ್ಲೆಂಡ್ ವೇಗಿ ಲಿಯಾಮ್ ಪ್ಲಂಕೆಟ್ ಬಳಿಕ ನಾಪತ್ತೆಯಾಗಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಪ್ಲಂಕೆಟ್ ಕಡೆಗಣಿಸಿದೆ. ಇದೀಗ ಪ್ರತಿ ಬಾರಿ ನಿರ್ಲಕ್ಷ್ಯಿಸಿದ ಕಾರಣ ಅಮೆರಿಕ ತಂಡಕ್ಕೆ ಆಡಲು ಚಿಂತನೆ ನಡೆಸಿದ್ದಾರೆ.

ಲಂಡನ್(ಜೂ.02): ಕ್ರಿಕೆಟ್ ಜನಕರಾಗಿರುವ ಇಂಗ್ಲೆಂಡ್ 2019ರಲ್ಲಿ ವಿಶ್ವಕಪ್ ಟ್ರೋಫಿ ಗೆದ್ದುಕೊಂಡು ಹಲವು ವರ್ಷಗಳ ಕೊರಗನ್ನು ನೀಗಿಸಿಕೊಂಡಿತು. ಇಂಗ್ಲೆಂಡ್ ವಿಶ್ವಕಪ್ ಟ್ರೋಫಿ ಗೆಲುವಿನಲ್ಲಿ ವೇಗಿ ಲಿಯಾಮ್ ಪ್ಲಂಕೆಟ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದ್ದರು. ಆದರೆ 35 ವರ್ಷದ ಪ್ಲಂಕೆಟ್ ವಿಶ್ವಕಪ್ ಟೂರ್ನಿ ಬಳಿಕ ಇಂಗ್ಲೆಂಡ್ ತಂಡದಲ್ಲಿ ಕಾಣಿಸಿಕೊಂಡಿಲ್ಲ.

ಶಮಿ ಜತೆಗಿನ ಅರೆನಗ್ನ ಚಿತ್ರ ಹಂಚಿಕೊಂಡ ಹಸೀನಾ; ಕಿಡಿಕಾರಿದ ಫ್ಯಾನ್ಸ್..!.

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಸಿಡಿಲಿಕೆ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ 55 ಕ್ರಿಕೆಟಿಗರನ್ನು ತರಬೇತಿ ಶಿಬಿರಕ್ಕೆ ಆಯ್ಕೆ ಮಾಡಿದೆ. ಇದರಲ್ಲೂ ಪ್ಲೆಂಕೆಟ್ ಹೆಸರಿಲ್ಲ. ಇದರಿಂದ ಬೇಸರಗೊಂಡಿರುವ ಪ್ಲಂಕೆಟ್, ಇನ್ನೂ ಇಂಗ್ಲೆಂಡ್ ತಂಡ ಕಡೆಗಣಿಸಿದರೆ ತಾನು ಅಮೆರಿಕಾ ಆಡುವ ಕುರಿತು ಚಿಂತಿಸುತ್ತೇನೆ ಎಂದಿದ್ದಾರೆ.

ಮದುವೆಗೂ ಮುನ್ನ ನತಾಶಾ ಪ್ರಗ್ನೆಂಟ್: ಮಾಜಿ ಬಾಯ್‌ಫ್ರೆಂಡ್ ಕೊಟ್ಟ ರಿಯಾಕ್ಷನ್ ಏನು..?.

ಲಿಯಾಮ್ ಪ್ಲಂಕೆಟ್ ಅಮೆರಿಕಾ ಮೂಲದವರು. ಮದುವೆಯಾದ ಬಳಿಕ ಹೆಚ್ಚಿನ ಸಮಯ ಅಮೆರಿಕದಲ್ಲಿ ಕೆಳೆಯುತ್ತಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡದಲ್ಲಿ ಅವಕಾಶ ಸಿಗದಿದ್ದರೆ ತಾನು ಅಮೆರಿಕ ತಂಡಕ್ಕೆ ಆಡಲು ಸಿದ್ದ ಎಂದಿದ್ದಾರೆ. 2019ರಲ್ಲಿ ಐಸಿಸಿ, ಅಮೆರಿಕ ತಂಡಕ್ಕೆ ಏಕದಿನ ಮಾನ್ಯತೆ ನೀಡಲಾಗಿದೆ. 

ನನ್ನ ಮಕ್ಕಳು ಬಹುಷ ಅಮೆರಿಕಾ ಪೌರತ್ವ ಪಡೆಯಲಿದ್ದಾರೆ. ಹೀಗಾಗಿ ನಾನು ಇಂಗ್ಲೆಂಡ್ ಹಾಗೂ ಅಮೆರಿಕಾ ಎರಡು ತಂಡಕ್ಕೆ ಆಡಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಪ್ಲಂಕಟ್ ಅಮೆರಿಕ ತಂಡಕ್ಕೆ ಆಡಲು ಕನಿಷ್ಠ 3 ವರ್ಷ ಅಮೆರಿಕದಲ್ಲಿ ನೆಲಸಬೇಕಿದೆ. 

click me!