ಕಳೆದ 25 ತಿಂಗಳಿಂದ ಜೋಫ್ರಾ ಆರ್ಚರ್ ಕ್ರಿಕೆಟ್​ ಬದುಕು ಬಲು ನರಕ..!

By Naveen KodaseFirst Published May 23, 2022, 3:48 PM IST
Highlights

* ಪದೇ ಪದೇ ಗಾಯಕ್ಕೊಳಗಾಗುತ್ತಿರುವ ವೇಗಿ ಜೋಫ್ರಾ ಆರ್ಚರ್‌

* 2019ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​​​ಗೆ ಪಾದಾರ್ಪಣೆ ಮಾಡಿರುವ ಇಂಗ್ಲೆಂಡ್ ವೇಗಿ

* 2021ರಲ್ಲಿ ಇಂಗ್ಲೆಂಡ್​ ಪರ ಕೊನೆಯ ಪಂದ್ಯವನ್ನಾಡಿರುವ ಜೋಫ್ರ ಆರ್ಚರ್‌

ಲಂಡನ್(ಮೇ.23)​: ಕ್ರಿಕೆಟ್​ ಆಟದಲ್ಲಿ ಎಲ್ಲರೂ ನೇಮ್​ ಆ್ಯಂಡ್​ ಫೇಮ್​ ಗಳಿಸ್ತಾರೆ. ಅದಕ್ಕೆ ಸುದೀರ್ಘ ಸಮಯ ಹಿಡಿಯುತ್ತೆ. ಆದ್ರೆ ಜೋಫ್ರಾ ಆರ್ಚರ್ ಅನ್ನೋ ರೈಟ್​​ ಆರ್ಮ್​ ಫಾಸ್ಟ್​ ಬೌಲರ್​​ ಅದಕ್ಕೆ ತದ್ದಿರುದ್ಧ. ಬಹಳ ಕಮ್ಮಿ ಅವಧಿಯಲ್ಲೇ ಪ್ರಖ್ಯಾತಿ ಗಳಿಸಿದ. 2019ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​​​ಗೆ ಪಾದಾರ್ಪಣೆ ಮಾಡಿ, ಇಂಗ್ಲೆಂಡ್​​ನ 3 ಫಾಮ್ಯಾಟ್​​ನ ಕಾಯಂ ಆಟಗಾರನಾಗಿ ಗುರುತಿಸಿಕೊಂಡ್ರು. ಇವರು 150 ಕಿ.ಮೀ ವೇಗದಲ್ಲಿ ಬೌಲಿಂಗ್​ ಮಾಡ್ತಿದ್ರೆ ಎಂತವರ ಎದೆ ಝಲ್​​ ಅನ್ನಿಸ್ತಿತ್ತು. ಅಂತಹ ಡೆಡ್ಲಿ ದಾಳಿಗಾರ ಈ ಇಂಗ್ಲೆಂಡ್ ವೇಗಿ.

ಆದರೆ ಈ ಶರವೇಗಿಗೆ ಗೊತ್ತಿರ್ಲಿಲ್ಲ. ಮುಂದೆ ತನ್ನ ಕ್ರಿಕೆಟ್​​ ಬದುಕಿನಲ್ಲಿ ಬಹುದೊಡ್ಡ ಗಾಯದ ಬಿರುಗಾಳಿ ಬೀಸುತ್ತೆ, ಬದುಕನ್ನ ಹಿಂಡಿ ಹಿಪ್ಪೆ ಮಾಡುತ್ತೆ ಅಂತ. ಜೋಫ್ರಾ ಅರ್ಚರ್​ ಸದ್ಯ ಇಂಜುರಿಯಿಂದ ಅಕ್ಷರಶಃ ಕಂಗೆಟ್ಟಿದ್ದಾರೆ. ಮೂರು ವರ್ಷದಲ್ಲಿ ಕ್ರಿಕೆಟ್ ಆಡಿದ್ದಕ್ಕಿಂತ ಗಾಯಕ್ಕೆ ತುತ್ತಾಗಿದ್ದೆ ಹೆಚ್ಚು. ಒಂದೂ ಸರಣಿ ಆಡಿದ್ರೆ 5 ಸರಣಿಯಿಂದ ದೂರ ಉಳಿಯುತ್ತಿದ್ದಾರೆ. ನಿಮಗೆ ಗೊತ್ತಿರಲಿ. ಜೋಫ್ರಾ ಆರ್ಚರ್​ 2021ರಲ್ಲಿ ಇಂಗ್ಲೆಂಡ್​ ಕ್ರಿಕೆಟ್‌ ತಂಡದ ಪರ ಆಡಿದ್ದೇ ಕೊನೆ. ಅಲ್ಲಿಂದ ಈ ತನಕ ಇಂಜುರಿ ಬೆನ್ನೇರಿದೆ. ಇನ್ನು ಈ ಯಂಗ್​​​ಬೌಲರ್​​​ ಕಳೆದ ಎರಡೂವರೆ ವರ್ಷದಲ್ಲಿ ಎಷ್ಟು ಬಾರಿ ಗಾಯಕ್ಕೆ ತುತ್ತಾಗಿದ್ದಾರೆ ಗೊತ್ತಾ..? ಕೇಳಿದ್ರೆ ನಿಜಕ್ಕೂ ನಿಮಗೂ ಅಚ್ಚರಿ ಅನ್ನಿಸುತ್ತೆ.

25 ತಿಂಗಳಲ್ಲಿ 12 ಬಾರಿ ಗಾಯ, 14 ತಿಂಗಳಲ್ಲಿ 3 ಬಾರಿ ಸರ್ಜರಿ:

ಈ ಒಂದು ಸ್ಟ್ಯಾಟ್ಸ್ ಸಾಕು. ಗಾಯ ಅನ್ನೋದು ಜೋಫ್ರಾ ಅರ್ಚರ್‌ಗೆ ಎಷ್ಟೆಲ್ಲಾ ಕಾಟ ಕೊಡ್ತಿದೆ ಅನ್ನೋದಕ್ಕೆ. 2020 ರಿಂದ ಇಲ್ಲಿಯವರೆಗೆ ಅಂದ್ರೆ ಒಟ್ಟು 25 ತಿಂಗಳ ಅವಧಿಯಲ್ಲಿ ಬರೋಬ್ಬರಿ 12 ಬಾರಿ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಬಿದ್ದಿದ್ದಾರೆ. ಇಂಗ್ಲೆಂಡ್ ತಂಡದ ಪರ ಆಡದೇ ಒಂದು ವರ್ಷವೇ ಕಳೆದಿವೆ. ಪ್ರಮುಖ ಟಿ20 ವಿಶ್ವಕಪ್​​​, ಆ್ಯಷಸ್​ ಸರಣಿಗಳನ್ನ ಆರ್ಚರ್ ಮಿಸ್​ ಮಾಡಿಕೊಂಡಿದ್ದಾರೆ. ಇನ್ನು 14 ತಿಂಗಳ ಅವಧಿಯಲ್ಲಿ ಮೂರು ಬಾರಿ ಸರ್ಜರಿಗೆ ಒಳಗಾಗಿದ್ದಾರೆ. ಒಮ್ಮೆ ಗಾಜಿನ ಚೂರಿನ ಶಸ್ತ್ರಚಿಕಿತ್ಸೆಗೆ ಒಳಗಾದ್ರೆ, ಇನ್ನೆರಡು ಬಾರಿ ಎಲ್​​ಬೋ ಇಂಜುರಿ ಸರ್ಜರಿ ಮಾಡಿಸಿಕೊಂಡಿದ್ದಾರೆ. 

2021ರ IPL ಟೂರ್ನಿಯಲ್ಲಿ ಅಬ್ಬರಿಸಿದ ಈ ನಾಲ್ವರು ಆಟಗಾರರು ಈ ಬಾರಿ ಫುಲ್ ಸೈಲೆಂಟ್‌..!

ಆರ್ಚರ್​ ನಂಬಿ ಕೆಟ್ಟ ಮುಂಬೈ ಇಂಡಿಯನ್ಸ್:

ಇನ್ನು ಆಕ್ಷನ್​​ನಲ್ಲಿ ಮುಂಬೈ ಇಂಡಿಯನ್ಸ್​ ಜೋಫ್ರಾ ಆರ್ಚರ್​ರನ್ನ ಬರೋಬ್ಬರಿ 8 ಕೋಟಿ ರೂಪಾಯಿಗೆ ಖರೀದಿಸಿತ್ತು. ಆದ್ರೆ ವರ್ಷಾರಂಭದಲ್ಲಿ ಜೋಫ್ರಾ ಆರ್ಚರ್ ಮತ್ತೆ ಗಾಯಕ್ಕೆ ತುತ್ತಾದ್ರು. ಪರಿಣಾಮ ಐಪಿಎಲ್​ನಿಂದ ಹೊರಬಿದ್ರು. ಮುಂಬೈ ಇಂಡಿಯನ್ಸ್‌ ಇವರನ್ನ ನಂಬಿ ಕೆಟ್ಟಿತು. ಅಲ್ಲದೇ ಗ್ರೂಪ್​ ಸ್ಟೇಜ್​ನಲ್ಲೇ ಹೊರಬಿದ್ದು  ತೀವ್ರ ಮುಖಭಂಗ ಅನುಭವಿಸಿತು. ಇನ್ನು ಈ ಸಲದ ಇಂಗ್ಲೀಷ್​ ಸಮ್ಮರ್​ನಿಂದಲೂ ಆರ್ಚರ್​ ಹೊರಬಿದ್ದಿದ್ದಾರೆ. ಸದ್ಯಕ್ಕೆ ಅವರ ಕಮ್​ಬ್ಯಾಕ್​ ಕಠಿಣ. ಪದೇ ಪದೇ ಗಾಯಕ್ಕೆ ತುತ್ತಾಗ್ತಿರೋ ಜೋಫ್ರಾ ಆರ್ಚರ್​ ಕ್ರಿಕೆಟ್ ಬದುಕು ಶಾರ್ಟ್​ ಟರ್ಮ್​ನಲ್ಲೇ ಅಂತ್ಯವಾದ್ರು ಅಚ್ಚರಿಯಿಲ್ಲ.
 

click me!