150ನೇ ಟೆಸ್ಟ್‌ ಪಂದ್ಯ ಆಡಲು ರೆಡಿಯಾದ ಜೇಮ್ಸ್ ಆ್ಯಂಡರ್‌ಸನ್‌

Suvarna News   | Asianet News
Published : Dec 26, 2019, 12:55 PM IST
150ನೇ ಟೆಸ್ಟ್‌ ಪಂದ್ಯ ಆಡಲು ರೆಡಿಯಾದ ಜೇಮ್ಸ್ ಆ್ಯಂಡರ್‌ಸನ್‌

ಸಾರಾಂಶ

ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಆ್ಯಂಡರ್‌ಸನ್ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿದ್ದು, ದಿಗ್ಗಜರ ಸಾಲಿಗೆ ಸೇರ್ಪಡೆಯಲಾಗಿದ್ದಾರೆ. ಜಿಮ್ಮಿ ಪಾತ್ರರಾಗಲಿರುವ ದಾಖಲೆ ಯಾವುದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

ಸೆಂಚುರಿಯನ್‌(ಡಿ.26): ಇಂಗ್ಲೆಂಡ್‌ನ ವೇಗದ ಬೌಲರ್‌ ಜೇಮ್ಸ್‌ ಆ್ಯಂಡರ್‌ಸನ್‌, ಗುರುವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಮೂಲಕ 150 ಟೆಸ್ಟ್‌ಗಳ ಮೈಲಿಗಲ್ಲು ತಲುಪಲಿದ್ದಾರೆ. 150 ಟೆಸ್ಟ್‌ ಆಡಿದ ವಿಶ್ವದ 9ನೇ ಕ್ರಿಕೆಟಿಗ ಎನ್ನುವ ಹಿರಿಮೆಗೆ ಅವರು ಪಾತ್ರರಾಗಲಿದ್ದಾರೆ.

ಎದೆ ಮುಟ್ಟಿಕೊಂಡು ಹೇಳುತ್ತೇನೆ, ನಾನು ಅಂಪೈರ್‌ಗೆ ಹಾಗೆ ಹೇಳಿಲ್ಲ: ಬೆನ್ ಸ್ಟೋಕ್ಸ್

ಈ ಮೊದಲು ಸಚಿನ್‌ ತೆಂಡುಲ್ಕರ್‌, ರಿಕಿ ಪಾಂಟಿಂಗ್‌, ಸ್ಟೀವ್‌ ವಾ, ಜಾಕ್‌ ಕಾಲಿಸ್‌, ಶಿವನಾರಾಯಣ್‌ ಚಂದ್ರಪಾಲ್‌, ರಾಹುಲ್‌ ದ್ರಾವಿಡ್‌, ಅಲಿಸ್ಟರ್‌ ಕುಕ್‌ ಹಾಗೂ ಆಲನ್‌ ಬಾರ್ಡರ್‌ 150ಕ್ಕೂ ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಆ್ಯಂಡರ್‌ಸನ್‌ 149 ಪಂದ್ಯಗಳಿಂದ 575 ವಿಕೆಟ್‌ ಕಬಳಿಸಿ, ಇಂಗ್ಲೆಂಡ್‌ ಪರ ಟೆಸ್ಟ್‌ನಲ್ಲಿ ಅತಿಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್‌ ಎನ್ನುವ ದಾಖಲೆ ಹೊಂದಿದ್ದಾರೆ.

ದ.ಆಫ್ರಿಕಾ-ಇಂಗ್ಲೆಂಡ್‌ ಮೊದಲ ಟೆಸ್ಟ್‌ ಇಂದಿನಿಂದ

ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್‌ ಗುರುವಾರ ಇಲ್ಲಿ ಆರಂಭಗೊಳ್ಳಲಿದೆ. 4 ಪಂದ್ಯಗಳ ಸರಣಿ ಇದಾಗಿದ್ದು, ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ವ್ಯಾಪ್ತಿಗೆ ಸೇರಲಿದೆ. ಈ ನಿಟ್ಟಿನಲ್ಲಿ ಎರಡೂ ತಂಡಗಳಿಗೆ ಈ ಸರಣಿ ಮಹತ್ವದೆನಿಸಿದೆ. ಪ್ರತಿ ಗೆಲುವಿಗೆ 30 ಅಂಕ ದೊರೆಯಲಿದೆ. 

ಕೇವಲ 40 ನಿಮಿಷದಲ್ಲಿ ಹೃದಯ ಗೆದ್ದ ನಾಯಕ; ಗಂಗೂಲಿ ಹೊಗಳಿದ ಪಾಕ್ ದಿಗ್ಗಜ!

5 ಪಂದ್ಯಗಳಲ್ಲಿ 2 ಗೆಲುವು, 2 ಸೋಲು, 1 ಡ್ರಾದೊಂದಿಗೆ 56 ಅಂಕ ಗಳಿಸಿರುವ ಇಂಗ್ಲೆಂಡ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ದ.ಆಫ್ರಿಕಾ ತಂಡ ಭಾರತ ವಿರುದ್ಧ ಆಡಿದ ಮೂರೂ ಪಂದ್ಯಗಳಲ್ಲಿ ಸೋಲುಂಡ ಕಾರಣ, ಇನ್ನೂ ಖಾತೆ ತೆರೆದಿಲ್ಲ. 9 ತಂಡಗಳ ಪೈಕಿ ದ.ಆಫ್ರಿಕಾ ಕೊನೆ ಸ್ಥಾನದಲ್ಲಿದ್ದು, ಮೊದಲ ಗೆಲುವಿಗಾಗಿ ಕಾತರಿಸುತ್ತಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?