Root to Spider Camera : ಚಡ್ಡಿ ಚೇಂಜ್ ಮಾಡೋದು ತೋರಿಸ್ಬೇಕಾ!

Suvarna News   | Asianet News
Published : Dec 20, 2021, 12:04 AM IST
Root to Spider Camera : ಚಡ್ಡಿ ಚೇಂಜ್ ಮಾಡೋದು ತೋರಿಸ್ಬೇಕಾ!

ಸಾರಾಂಶ

ಅಡಿಲೇಡ್ ಟೆಸ್ಟ್ ನ ನಾಲ್ಕನೇ ದಿನದ ಪಂದ್ಯದ ವೇಳೆ ಘಟನೆ ಬಾಕ್ಸರ್ ಬದಲಾಯಿಸುವಾಗ ಸ್ಪೈಡರ್ ಕ್ಯಾಮೆರಾಗೆ ಸೈಡ್ ಗೆ ಹೋಗು ಎಂದ ರೂಟ್ ಕ್ರಿಕೆಟ್ ಅಭಿಮಾನಿಗಳಿಗೆ ನಗು ತರಿಸಿದ ಕ್ಷಣ

ಅಡಿಲೇಡ್ (ಡಿ.19): ಹೈವೋಲ್ಟೇಜ್  ಆ್ಯಷಸ್ ( Ashes ) ಟೆಸ್ಟ್ ಸರಣಿಯ 2ನೇ ಪಂದ್ಯ ಕೊನೆಯ ದಿನಕ್ಕೆ ತಲುಪಿದೆ. ಇಂಗ್ಲೆಂಡ್ ತಂಡಕ್ಕೆ ಸೋಲು ತಪ್ಪಿಸಿಕೊಳ್ಳುವ ಹೋರಾಟದಲ್ಲಿದ್ದರೆ,ಆಸ್ಟ್ರೇಲಿಯಾ ಸರಣಿಯ ಮುನ್ನಡೆಯನ್ನು 2 ಪಂದ್ಯಕ್ಕೆ ಏರಿಸುವ ವಿಶ್ವಾಸದಲ್ಲಿದೆ. ಅಡಿಲೇಡ್ ಓವಲ್ ನಲ್ಲಿ (Adelaide Oval ) ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ (Pink Ball Test) ಪಂದ್ಯ ನಾಲ್ಕನೇ ದಿನ ಎರಡೂ ತಂಡಗಳ ನಡುವೆ ಜದ್ದಿಗೆ ಬಿದ್ದಂತೆ ಹೋರಾಟ ದಾಖಲಾಯಿತು. ಇದರ ನಡುವೆ ಮಿಚೆಲ್ ಸ್ಟಾರ್ಕ್ (Mitchell Starc) ಎಸೆದ ಒಂದು ಭಯಂಕರ ಎಸೆತ ರೂಟ್ ಅವರ ಗಾರ್ಡ್ ಗೆ ಬಡಿದಿತ್ತು. ಈ ವೇಳೆ ತಮ್ಮ ಗಾರ್ಡ್ ಅನ್ನು ಪರಿಶೀಲಿಸಿ ಬಾಕ್ಸರ್ ಬದಲಾಯಿಸುವ ವೇಳೆ ಇದೆಲ್ಲವನ್ನು ವಿಡಿಯೋ ಮಾಡುತ್ತಿದ್ದ ಸ್ಪೈಡರ್ ಕ್ಯಾಮೆರಾಗೆ ಸೈಡ್ ಗೆ ಹೋಗು ಎಂದು ಹೇಳಿದ್ದು ಸಾಕಷ್ಟು ವೈರಲ್ ಆಗಿದೆ.

ದಿನದಾಟ ಕೊನೆಯ ಹಂತದಲ್ಲಿದ್ದ ವೇಳೆ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರ ವೇಗದ ಎಸೆತವೊಂದು ಜೋ ರೂಟ್ ರ (Joe Root) ಡಿಫೆನ್ಸ್ ಬೇಧಿಸಿದ್ದು ಮಾತ್ರವಲ್ಲದೆ ನೇರವಾಗಿ ಅವರ ಗಾರ್ಡ್ ಗೆ ಬಡಿಯಿತು. ಚೆಂಡು ಬಿದ್ದ ರಭಸಕ್ಕೆ ಮೈದಾನದಲ್ಲಿಯೇ ಕೆಲ ಹೊತ್ತು ಕುಸಿದು ಬಿದ್ದು, ನೋವಿನಿಂದ ನರಳಿದ ರೂಟ್, ಆಮೇಲೆ ಚೇತರಿಸಿಕೊಂಡರು. ಈ ಹಂತದಲ್ಲಿ ಟೀಮ್ ಫಿಸಿಯೋ ಕೂಡ ಸ್ಥಳಕ್ಕೆ ಆಗಮಿಸಿ ರೂಟ್ ಅವರ ಗಾಯದ ಪರಿಶೀಲನೆ ಮಾಡಿದರು.

ಗಾರ್ಡ್ ಪರಿಶೀಲನೆ ಮಾಡುವ ವೇಳೆ ತಾನು ಮೈದಾನದಲ್ಲಿದ್ದೇನೆ ಎನ್ನುವುದನ್ನು ಅರಿವಿಗೆ ತಂದುಕೊಂಡ ರೂಟ್, ತನ್ನ ತಲೆಯ ಮೇಲೆ ತಿರುಗಾಡುತ್ತಿದ್ದ ಸ್ಫೈಡರ್ ಕ್ಯಾಮೆರಾ ( Spider Camera) ಹತ್ತಿರ ನೋಡಿ ದೂರ ಸರಿಯುವಂತೆ ಸನ್ನೆ ಮಾಡಿದರು.
 


ಗಾರ್ಡ್ ಪರಿಶೀಲನೆ ಮಾಡಿ ಬಾಕ್ಸರ್ ಬದಲಾಯಿಸಿ ರೂಟ್ ಆಡಲು ಇಳಿದರಾದರೂ, ದಿನದ ಕೊನೆಯ ಓವರ್ ನಲ್ಲಿ ಔಟಾಗಿ ನಿರಾಸೆ ಮೂಡಿಸಿದರು. ಒಟ್ಟಾರೆ ಈ ಘಟನೆ ನಾಲ್ಕನೇ ದಿನದಾಟವನ್ನು ವೀಕ್ಷಿಸಿದ ಕ್ರಿಕೆಟ್ ಅಭಿಮಾನಿಗಳಿಗೆ ತಮಾಷೆ ಎನಿಸಿತ್ತು. ನೋವಿನಿಂದ ನರಳುತ್ತಿದ್ದರೂ, ಆ ಸಂದರ್ಭದಲ್ಲಿ ಮೈದಾನದಲ್ಲಿ ಏನಾಗುತ್ತಿದೆ ಎನ್ನುವುದನ್ನು ಅರಿವಿಗೆ ತಂದುಕೊಂಡ ರೂಟ್ ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
 


ಲಬುಶೇನ್ ಹಾಗೂ ಸ್ಮಿತ್ ರಿಂದ ಕಲಿತುಕೊಳ್ಳಿ: ಇನ್ನು ಏಕಾಗ್ರತೆಗೆ ಸಂಬಂಧಪಟ್ಟಂತೆ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ (Ricky Ponting) ಜೋ ರೂಟ್ ಗೆ ಹೇಳಿರುವ ಮಾತುಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆಟದ ಬಗ್ಗೆ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಜೋ ರೂಟ್, ಆಸೀಸ್ ಬ್ಯಾಟ್ಸ್ ಮನ್ ಗಳಾದ ಸ್ಟೀವನ್ ಸ್ಮಿತ್ ( Steve Smith) ಹಾಗೂ ಮಾರ್ನಸ್ ಲಬುಶೇನ್ (Marnus Labuschagne )ಅವರಿಂದ ಕಲಿತುಕೊಳ್ಳಬೇಕು ಎಂದು ಹೇಳಿದ್ದಾರೆ.

Ashes 2021 : ಇಂಗ್ಲೆಂಡ್ ಹೋರಾಟ, ಗೆಲುವಿನ ಸನಿಹದಲ್ಲಿ ಆಸ್ಟ್ರೇಲಿಯಾ
"ರೂಟ್ ಔಟಾಗಿರುವ ರೀತಿ ಮಾನಸಿಕವಾಗಿ ಸಂಬಂಧಪಟ್ಟಿರುವಂತೆ ಕಾಣುತ್ತದೆ. ಅವರು ಕಳೆದ ಎರಡೂ ಬಾರಿಯೂ ಔಟಾಗಿರುವ ರೀತಿಯಲ್ಲಿ ಯಾವುದೇ ತಾಂತ್ರಿಕ ದೋಷಗಳಿಲ್ಲ. ತಮ್ಮ ಬಳಿಗೆ ಬರುವ ಚೆಂಡನ್ನು ಯಾವ ರೀತಿ ಅಂದಾಜಿಸಿ ಬಾರಿಸಬೇಕು ಎನ್ನುವುದರಲ್ಲಿ ಗೊಂದಲದಲ್ಲಿದ್ದಾರೆ. ತುಂಬಾ ಸಮಯದವರೆಗೂ ಮೈದಾನದಲ್ಲಿ ಏಕಾಗ್ರತೆಯಿಂದ ಇರುವ ನಿಟ್ಟಿನಲ್ಲಿ ಮಾರ್ನಸ್ ಲಬುಶೇನ್ ಹಾಗೂ ಸ್ಟೀವನ್ ಸ್ಮಿತ್ ಅವರಿಂದ ರೂಟ್ ಕಲಿತುಕೊಳ್ಳಬೇಕು ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

ರೂಟ್ ತಮ್ಮ ಮೇಲಿನ ಒತ್ತಡ ಹಾಗೂ ಆಟದ ಮೇಲಿನ ಏಕಾಗ್ರತೆಯ ಬಗ್ಗೆ ಈಗಲೇ ಗಮನ ನೀಡಬೇಕು, ಇಲ್ಲದೇ ಮುಂಬರುವ ದಿನ ಹಾಗೂ ವಾರಗಳು ಅವರ ಪಾಲಿಗೆ ಬಹಳ ಕಠಿಣವಾಗಿರಲಿದೆ ಎಂದು ಪಾಂಟಿಂಗ್ ಎಚ್ಚರಿಸಿದ್ದಾರೆ. ಬ್ಯಾಟಿಂಗ್ ಗೆ ಬರುವ ಮುನ್ನ ಜೋ ರೂಟ್ ಬಹುತೇಕ ಮೂರು ಅವಧಿಯಲ್ಲೂ ಫೀಲ್ಡಿಂಗ್ ಮಾಡಿದ್ದರು. ಬಹಳ ಹೊತ್ತು ಮೈದಾನದಲ್ಲಿ ಕಳೆದು ಮತ್ತೆ ಬ್ಯಾಟಿಂಗ್ ಗೆ ಇಳಿದಾಗ ಏಕಾಗ್ರತೆ ನೀಡಲು ಸಾಧ್ಯವಾಗುವುದಿಲ್ಲ ಎಂದು ಪಾಂಟಿಂಗ್ ತಿಳಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?