ಭಾರತದ ಮೇಲಿನ ಸರಣಿ ಮೇಲೆ ಸಣ್ಣ ನಿರ್ಲಕ್ಷ್ಯ, ಇಂಗ್ಲೆಂಡ್‌ಗೆ ₹627 ಕೋಟಿ ಲಾಸ್

Published : Nov 08, 2026, 09:59 PM IST
England board fears losses up to Rs 627 crore in 2027 with no India tour

ಸಾರಾಂಶ

ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ECB) 2027ರ ವೇಳೆಗೆ 627 ಕೋಟಿ ರೂ. ಆರ್ಥಿಕ ನಷ್ಟ ಅನುಭವಿಸುವ ಆತಂಕದಲ್ಲಿದೆ. ಭಾರತದ ವಿರುದ್ಧ ತವರು ಸರಣಿ ಇಲ್ಲದಿರುವುದು ಮತ್ತು ಐಸಿಸಿ ಪ್ರಸಾರ ಪಾವತಿಯನ್ನು ತಡೆಹಿಡಿಯುತ್ತಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಇಂಗ್ಲೆಂಡ್ ಕ್ರಿಕೆಟ್‌ ಮಂಡಳಿ ದೊಡ್ಡ ಆರ್ಥಿಕ ಸುಳಿಕೆ ಸಿಲುಕುವ ಆತಂಕ ಎದುರಾಗಿದೆ. ಒಂದು ಅಂದಾಜಿನ ಪ್ರಕಾರ, ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ 2027 ಹಣಕಾಸು ವರ್ಷದಲ್ಲಿ ಬರೋಬ್ಬರಿ 50 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 627 ಕೋಟಿ ರೂಪಾಯಿಗಷ್ಟು ಆರ್ಥಿನಷ್ಟ ಅನುಭವಿಸಲಿದೆ ಎಂದು ಅಂದಾಜು ಮಾಡಲಾಗಿದೆ.

ಕೋಟಿ ಕೋಟಿ ನಷ್ಟಕ್ಕೆ ಎರಡು ಕಾರಣ

  • ಆ ಅವಧಿಯಲ್ಲಿ ಇಂಗ್ಲೆಂಡ್ ತಂಡವು ಭಾರತದ ವಿರುದ್ಧ ಯಾವುದೇ ತವರು ಸರಣಿ ನಿಗದಿಪಡಿಸಿಲ್ಲ.
  • ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಸದಸ್ಯ ಮಂಡಳಿಗಳಿಗೆ ನೀಡಬೇಕಾದ ಪ್ರಸಾರ ಪಾವತಿಯ ಒಂದು ಭಾಗ ತಡೆಹಿಡಿಯಲು ನಿರ್ಧರಿಸಿದೆ.

ದಿ ಗಾರ್ಡಿಯನ್‌ ವರದಿಯ ಪ್ರಕಾರ.. ECB ತನಗೆ ಆಗಲಿರುವ ನಷ್ಟಗಳ ಬಗ್ಗೆ 2025ರಲ್ಲಿಯೇ ಗುರುತಿಸಿಕೊಂಡಿತ್ತು. ಮಂಡಳಿಯ 2027 ರ ಲೆಕ್ಕಪತ್ರ ಅವಧಿಯು ಜನವರಿ 31, 2028 ರವರೆಗೆ ನಡೆಯಲಿದೆ. ಆ ಅವಧಿಯಲ್ಲಿ ನಡೆಯುವ ಈವೆಂಟ್‌ಗಳಿಂದ ಹೆಚ್ಚುವರಿ ಆದಾಯ ಗಳಿಸಲು ಕಟ್ಟುನಿಟ್ಟಿನ ಪ್ಲಾನ್ ಮಾಡಿಕೊಂಡಿದೆ.

ಆದರೆ ಐಸಿಸಿ ಕೊನೆಗೆ ಎಷ್ಟು ಹಣವನ್ನು ತಡೆ ಹಿಡಿಯುತ್ತದೆ ಅನ್ನೋದನ್ನು ಬಹಿರಂಗಪಡಿಸಿಲ್ಲ. ಅಂತಿಮಾಗಿ ಒಟ್ಟು 439 ಕೋಟಿ ರೂಪಾಯಿಗಳಗೆ ಇಳಿಸಬಹುದು ಎನ್ನಲಾಗುತ್ತಿದೆ. 2027ರ ಪ್ರಸಾರ ವಿತರಣೆಯಿಂದ ಐಸಿಸಿ ಎಷ್ಟು ಮೊತ್ತವನ್ನು ತಡೆಹಿಡಿಯುತ್ತದೆ ಅನ್ನೋದು ಇನ್ನೂ ದೃಢವಾಗಿಲ್ಲ. 2025ರಲ್ಲಿ 12.6 ಮಿಲಿಯನ್ ಲಾಭವನ್ನು ಗಳಿಸಿದೆ. ಇದು ಪ್ರವಾಸ ವೇಳಾಪಟ್ಟಿ ಮತ್ತು ICC ಪಾವತಿ ಸಮಯ ಅವಲಂಬಿಸಿ ಒಂದೇ ಚಕ್ರದಲ್ಲಿ ಹಣಕಾಸಿನ ಚಿತ್ರಣವು ಎಷ್ಟು ನಾಟಕೀಯವಾಗಿ ಬದಲಾಗಬಹುದು.

ಇಸಿಬಿಗೆ ಆಗಿದ್ದೇನು?

ಅಂತರರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ ಆಧಾರದ ಮೇಲೆ ಆರ್ಥಿಕ ಲಾಭ ನಷ್ಟದ ಲೆಕ್ಕಾಚಾರ ಅಡಗಿರುತ್ತದೆ. ಇಂಗ್ಲೆಂಡ್‌ಗೆ ಬೇಸಿಗೆಯಲ್ಲಿ ಯಾವ ತಂಡಗಳು ಇಂಗ್ಲೆಂಡ್‌ಗೆ ಭೇಟಿ ನೀಡುತ್ತವೆ ಅನ್ನೋದು ಮುಖ್ಯವಾಗುತ್ತದೆ. ಭಾರತದ ವಿರುದ್ಧದ ಸ್ವದೇಶಿ ಸರಣಿಯು ವಿಶ್ವ ಕ್ರಿಕೆಟ್‌ನಲ್ಲಿ ವಾಣಿಜ್ಯಿಕವಾಗಿ ಅತ್ಯಂತ ಮೌಲ್ಯಯುತ ಪಂದ್ಯಗಳಲ್ಲಿ ಒಂದಾಗಿದೆ. 2027ರಲ್ಲಿ ಒಂದು ಅನುಪಸ್ಥಿತಿಯು ಇಂಗ್ಲೆಂಡ್‌ಗೆ ದೊಡ್ಡ ಹೊಡೆತ ನೀಡಲಿದೆ.

ಐಸಿಸಿ ಪ್ರಸಾರ ಚಕ್ರದ ಅಂತಿಮ ವರ್ಷವು ಸದಸ್ಯರ ಮಂಡಳಿಗಳಿಗೆ ದೊಡ್ಡ ಪಾವತಿ ಹೊಂದಿರುತ್ತದೆ. ಏಕೆಂದರೆ ಇದು ಪುರುಷರ 50-ಓವರ್‌ಗಳ ವಿಶ್ವಕಪ್‌ನೊಂದಿಗೆ ಹೊಂದಿಕೆಯಾಗುತ್ತದೆ. 2027ರಲ್ಲಿ, ಐಸಿಸಿ ಮುಂದಿನ ಪ್ರಸಾರ ಒಪ್ಪಂದ ಚಕ್ರಕ್ಕೆ ಪರಿವರ್ತನೆಗೊಳ್ಳುವ ನಿರೀಕ್ಷೆಯಲ್ಲಿ ಆ ಪಾವತಿಗಳ ಒಂದು ಭಾಗವನ್ನು ತಡೆಹಿಡಿಯುತ್ತಿದೆ. 2028ರಲ್ಲಿ ಪ್ರಾರಂಭವಾಗಲಿದೆ. ತಡೆಹಿಡಿಯಲಾಗುತ್ತಿರುವ ನಿಖರವಾದ ಮೊತ್ತವನ್ನು ನಿರ್ಧರಿಸಲಾಗಿಲ್ಲ.

ಸೋನಿ ಪಿಕ್ಚರ್ಸ್ ಜೊತೆಗಿನ ಇಸಿಬಿಯ ಪ್ರಸ್ತುತ ಆರು ವರ್ಷಗಳಿಗೆ ಒಪ್ಪಂದ ಮಾಡಿಕೊಂಡಿದೆ. ಅದರ ಪ್ರಕಾರ, £185 ಮಿಲಿಯನ್ ಅಂದರೆ ಸರಿಸುಮಾರು ರೂ.2,323 ಕೋಟಿ ಮೌಲ್ಯದ್ದಾಗಿದೆ. ಇನ್ನು, ಈ ಒಪ್ಪಂದವು 2028 ರಲ್ಲಿ ಮುಕ್ತಾಯಗೊಳ್ಳಲಿದೆ. ಮೂಲಗಳು ಸೂಚಿಸುವಂತೆ ಮುಂದಿನ ಒಪ್ಪಂದವು ಅಸ್ತಿತ್ವದಲ್ಲಿರುವ ಸೋನಿ ಪಿಕ್ಚರ್ಸ್ ವ್ಯವಸ್ಥೆಗಿಂತ ಕಡಿಮೆ ಲಾಭದಾಯಕವಾಗಿರುತ್ತದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IND vs PAK: ಜೂನಿಯರ್ ಸೆಹ್ವಾಗ್-ದ್ರಾವಿಡ್ ಫ್ಲಾಪ್; ಆದ್ರೂ ಕ್ಯಾಪ್ಟನ್ ಬೇರೆಯವರ ತಲೆಗೆ ಕಟ್ಟಿದ್ರು ಸೋಲಿನ ಗಂಟೆ
ಇಶಾನ್ ಕಿಶನ್ ಮೇಲೆ ಸೇಡು ತೀರಿಸಿಕೊಂಡ ವಿರಾಟ್ ಕೊಹ್ಲಿ: ವಿಡಿಯೋ ವೈರಲ್