ಕೊರೋನಾ ಟೆಸ್ಟ್‌ ಪಾಸಾದ ಇಂಗ್ಲೆಂಡ್‌, ಪಾಕ್‌ ಕ್ರಿಕೆ​ಟಿ​ಗ​ರು

Published : Jul 01, 2020, 05:42 PM ISTUpdated : Jul 01, 2020, 05:43 PM IST
ಕೊರೋನಾ ಟೆಸ್ಟ್‌ ಪಾಸಾದ ಇಂಗ್ಲೆಂಡ್‌, ಪಾಕ್‌ ಕ್ರಿಕೆ​ಟಿ​ಗ​ರು

ಸಾರಾಂಶ

ಕೊರೋನಾ ಭೀತಿಯ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗುತ್ತಿವೆ. ಇಂಗ್ಲೆಂಡ್-ಪಾಕಿಸ್ತಾನ ಸರಣಿಗೂ ಮುನ್ನ ನಡೆದ ಕೊರೋನಾ ಪರೀಕ್ಷೆಯನ್ನು ಉಭಯ ದೇಶಗಳ ಆಟಗಾರರು ಯಶಸ್ವಿಯಾಗಿ ಪೂರೈಸಿದ್ದು, ವರದಿ ನೆಗೆಟಿವ್ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಸೌಥಾಂಪ್ಟನ್(ಜು.01)‌: ಇಂಗ್ಲೆಂಡ್‌ ಹಾಗೂ ಪಾಕಿ​ಸ್ತಾನ ಕ್ರಿಕೆ​ಟಿ​ಗರು ಇತ್ತೀ​ಚೆಗೆ ನಡೆದ ಕೊರೋನಾ ಪರೀಕ್ಷೆಯಲ್ಲಿ ಪಾಸಾ​ಗಿ​ದ್ದಾರೆ ಎಂದು ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇ​ಸಿ​ಬಿ) ಮಂಗ​ಳ​ವಾರ ತಿಳಿ​ಸಿದೆ. 

ಪಾಕಿ​ಸ್ತಾ​ನದ ಎಲ್ಲಾ 20 ಆಟ​ಗಾ​ರರು ಹಾಗೂ 11 ಸಹಾ​ಯ​ಕ ಸಿಬ್ಬಂದಿಯ ವರದಿ ನೆಗೆ​ಟಿವ್‌ ಬಂದಿದೆ. ಇದೇ ವೇಳೆ ಮೊಹ​ಮಹ್‌ ಹಫೀಜ್‌ ಸೇರಿ ಪಾಕಿ​ಸ್ತಾ​ನದ 6 ಸೋಂಕಿತ ಕ್ರಿಕೆ​ಟಿ​ಗರಿಗೆ ಕಳೆದ 3 ದಿನ​ಗ​ಳಲ್ಲಿ 2 ಬಾರಿ ಪರೀಕ್ಷೆ ನಡೆ​ಸಿದ್ದು, ಎರ​ಡು ವರ​ದಿ​ಯಲ್ಲೂ ನೆಗೆ​ಟಿವ್‌ ಬಂದಿದೆ. ಹೀಗಾಗಿ ಸದ್ಯ​ದಲ್ಲೇ 6 ಮಂದಿ ಇಂಗ್ಲೆಂಡ್‌ಗೆ ತೆರ​ಳ​ಲಿ​ದ್ದಾರೆ.

ಮನೋ​ವೈ​ದ್ಯರ ಮೊರೆ ಹೋದ ವೇಗಿ ಸ್ಟುವರ್ಟ್ ಬ್ರಾಡ್‌!

ಲಾಕ್‌ಡೌನ್ ಬಳಿಕ ಕ್ರಿಕೆಟ್ ಸರಣಿ ಆರಂಭವಾಗಲು ದಿನಗಣನೆ ಆರಂಭವಾಗಿವೆ. ಇದೇ ಜುಲೈ 08ರಿಂದ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ಜರುಗಲಿದೆ. ಇದಾದ ಬಳಿಕ ಜುಲೈ 30ರಿಂದ ಪಾಕಿಸ್ತಾನ ತಂಡವು 3 ಟೆಸ್ಟ್ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ ವಿರುದ್ಧ ಆಡಲಿದೆ. 

ಅಭ್ಯಾಸ ಆರಂಭಿ​ಸಿದ ದ.ಆ​ಫ್ರಿಕಾ ಕ್ರಿಕೆ​ಟರ್ಸ್

ಜೋಹಾನ್ಸ್‌ಬರ್ಗ್‌: ಕೊರೋನಾ ಸೋಂಕಿ​ನಿಂದಾಗಿ ಮಾ.15ರಿಂದ ಕ್ರಿಕೆಟ್‌ ಚಟು​ವ​ಟಿಕೆಗಳನ್ನು ಸ್ಥಗಿತಗೊಳ್ಳ​ಲಿದ್ದ ದಕ್ಷಿಣ ಆಫ್ರಿಕಾ ಕ್ರಿಕೆ​ಟಿ​ಗರು ಮಂಗ​ಳ​ವಾರದಿಂದ ಅಭ್ಯಾಸ ಆರಂಭಿ​ಸಿ​ದ್ದಾರೆ. 

ದೇಶದ ಕ್ರೀಡಾ ಸಚಿ​ವಾ​ಲಯ ಅನು​ಮತಿ ನೀಡಿದ ಬಳಿಕ, ಕ್ವಿಂಟನ್‌ ಡಿ ಕಾಕ್‌ ನೇತೃತ್ವದಲ್ಲಿ 44 ಕ್ರಿಕೆ​ಟಿ​ಗರು ಅಭ್ಯಾಸ ಪುನಾ​ರಂಭಿ​ಸಿ​ದರು. ತಮ್ಮ ತಮ್ಮ ಊರು​ಗ​ಳಲ್ಲೇ ಮಾನ್ಯತೆ ಹೊಂದಿ​ರುವ ಕೋಚ್‌ಗಳ ಸಹಾ​ಯ​ದೊಂದಿಗೆ ಸಣ್ಣ ಸಣ್ಣ ಗುಂಪು​ಗ​ಳಲ್ಲಿ ಆಟ​ಗಾ​ರರು ಅಭ್ಯಾಸ ನಡೆ​ಸ​ಲಿ​ದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಸಂಸ್ಥೆ ತಿಳಿ​ಸಿದೆ.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IND vs SL; ಮೊದಲ ಹೆಜ್ಜೆಯಲ್ಲೇ ಎಡವಿದ್ರಾ ಕ್ಯಾಪ್ಟನ್‌ ? ತಿಲಕ್ ವರ್ಮಾ ಲೆಕ್ಕಾಚಾರ ಉಲ್ಟಾ ಆಗಿದ್ದೇಗೆ?
IND vs SL; ಭಾರತದ ಹೊಸ 'ಸಂಕಟಮೋಚಕ' ಇವರೇ! 10 ವರ್ಷಗಳ ಹಿಂದೆಯೇ ಈ ಪ್ರತಿಭೆ ಗುರುತಿಸಿದ್ದ ಸೌರವ್ ಗಂಗೂಲಿ!