ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಮೊಯೀನ್ ಅಲಿ ಕೊರೋನಾ ಸೋಂಕಿಗೆ ತುತ್ತಾಗಿದ್ದು, 10 ದಿನಗಳ ಕಾಲ ಐಸೋಲೇಷನ್‌ಗೆ ಒಳಗಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕೊಲಂಬೊ(ಜ.05): ಟೆಸ್ಟ್ ಸರಣಿ ಆಡಲು ಭಾನುವಾರ ಶ್ರೀಲಂಕಾಕ್ಕೆ ಬಂದಿಳಿದ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಆಘಾತ ಎದುರಾಗಿದೆ. ಭಾನುವಾರ ನಡೆಸಿದ ಕೋವಿಡ್ ಪರೀಕ್ಷೆ ವೇಳೆ ಆಲ್ರೌಂಡರ್ ಮೋಯಿನ್ ಅಲಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಶ್ರೀಲಂಕಾ ಸರ್ಕಾರದ ನಿಯಮದ ಪ್ರಕಾರ ಅಲಿ 10 ದಿನಗಳ ಕಾಲ ಐಸೋಲೇಷನ್‌ನಲ್ಲಿ ಇರಲಿದ್ದು, ಚಿಕಿತ್ಸೆ ಪಡೆಯಲಿದ್ದಾರೆ. ಮತ್ತೊಬ್ಬ ಆಲ್ರೌಂಡರ್ ಕ್ರಿಸ್ ವೋಕ್ಸ್‌ರನ್ನು ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿ ಎಂದು ಗುರುತಿಸಿದ್ದು, ಅವರು ಸಹ ಐಸೋಲೇಷನ್‌ಗೆ ಒಳಪಡಲಿದ್ದಾರೆ.
undefined
ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಗಳು ಕೂಡಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಮೊಯೀನ್ ಅಲಿಗೆ ಕೊರೋನಾ ಸೋಂಕು ತಗುಲಿರುವ ವಿಚಾರವನ್ನು ಖಚಿತಪಡಿಸಿದೆ.
Wishing Moeen Ali, who has tested positive for COVID-19 in Sri Lanka, a speedy recovery! We can't wait to see you back out on the field and smashing them big, and bamboozling batsmen again soon! 🙏
— Royal Challengers Bangalore (@RCBTweets)ಬುಧವಾರ ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್
JUST IN: Moeen Ali has tested positive for COVID-19 on arrival in Sri Lanka, and will now observe 10 days of self-isolation.
Chris Woakes will also enter self-isolation having been deemed a possible close contact. pic.twitter.com/N7JwLUXcDL
ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿ ಆರಂಭಕ್ಕೆ ಸರಿಯಾಗಿ 10 ದಿನಗಳು ಬಾಕಿ ಇರುವಾಗಲೇ ಮೊಯೀನ್ ಅಲಿಗೆ ಸೋಂಕು ವಕ್ಕರಿಸಿದೆ. ಇನ್ನು ಎರಡನೇ ಟೆಸ್ಟ್ ಪಂದ್ಯ ಜನವರಿ 22 ರಿಂದ 26ರವರೆಗೆ ನಡೆಯಲಿದೆ.