
ಲಾಹೋರ್(ಮೇ.18): ಭರ್ತಿಯಾದ ಕ್ರೀಡಾಂಗಣ, ಸಿಕ್ಸರ್ ಸಿಡಿಸುವಾಗ ಒಂದು ತಂಡದ ಅಭಿಮಾನಿಗಳ ಚಪ್ಪಾಳೆ. ವಿಕೆಟ್ ಕಬಳಿಸಿದಾಗ ಮತ್ತೊಂದು ತಂಡದ ಅಭಿಮಾನಿಗಳ ಚೀರಾಟ ಇವೆಲ್ಲ ಕ್ರಿಕೆಟ್ ಪಂದ್ಯದ ಪ್ರಮುಖ ಅಂಶಗಳು. ಈ ಅಭಿಮಾನಿಗಳೇ ಇಲ್ಲದೆ ಕ್ರಿಕೆಟ್ ಆಡಲು ಸಾಧ್ಯವೇ? ಆದರೆ ಅನಿವಾರ್ಯತೆ ಎದುರಾಗಿದೆ. ಕೊರೋನಾ ವೈರಸ್ ಕಾರಣ ಹಲವು ಕ್ರಿಕೆಟ್ ಮಂಡಳಿಗಳು ಅಭಿಮಾನಿಗಳಿಲ್ಲದೆ ಪಂದ್ಯ ಆಯೋಜಿಸಿ ನಷ್ಟ ತಗ್ಗಿಸಲು ಚಿಂತಿಸುತ್ತಿದೆ.
ಫುಟ್ಬಾಲ್ ಪಂದ್ಯ ವೀಕ್ಷಣೆಗೆ ಹಾಟ್ ಬೆಡಗಿಯರು?: ನೋ ಸೆಕ್ಸ್ ಡಾಲ್ಸ್!
ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಯೋಜನೆಗೆ ಕ್ರಿಕೆಟಿಗರ ವಿರೋಧವಿದೆ. ಇಷ್ಟು ದಿನ ಭರ್ತಿಯಾಗ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಚಿಯರ್ ಅಪ್‌ನಲ್ಲಿ ಅಡಿದ್ದ ಕ್ರಿಕೆಟಿಗರಿಗೆ ಊಹಿಸಲು ಅಸಾಧ್ಯವಾಗಿದೆ. ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಕ್ತರ್ ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ರೀತಿ ಕ್ರಿಕೆಟ್ ವಧುವಿಲ್ಲದೆ ಮದೆಯಾದಂತೆ ಎಂದಿದ್ದಾರೆ.
ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್: ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್?.
ಮದುವೆಯಲ್ಲಿ ವಧು ಮುಖ್ಯ. ವಧುವೇ ಇಲ್ಲದೆ ಮದುವೆಯಾದರೆ ಹೇಗಿರುತ್ತೆ? ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಿದರೆ ಇದೀ ರೀತಿ ಆಗುತ್ತದೆ ಎಂದು ಅಕ್ತರ್ ಹೇಳಿದ್ದಾರೆ. ಇದಕ್ಕಿಂತ ಇನ್ನೂ ಸ್ವಲ್ಪ ದಿನ ಕಾಯಬೇಕು. ಕೊರೋನಾ ವೈರಸ್ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ ಈ ವರ್ಷ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ. ಹೀಗಾದಲ್ಲಿ ಎಂದಿನಂತೆ ಮತ್ತೆ ಕ್ರಿಕೆಟ್ ಪುನರ್ ಆರಂಭಗೊಳ್ಳಲಿದೆ. ಆದರೆ ಅವರಸ ಮಾಡಿ ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಉತ್ತಮವಲ್ಲ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.