ಪೆನ್‌ ಪಾಯಿಂಟ್‌ ಕ್ರಿಕೆಟ್‌: ಎಮಾರ್‌ ಸ್ಟ್ರೈಕರ್ಸ್‌ ಚಾಂಪಿಯನ್‌, ಅಟ್ಯಾಕರ್ಸ್‌ ರನ್ನರ್‌-ಅಪ್‌

Published : Jan 29, 2026, 09:08 AM IST
Pen Point Cricket Tournament

ಸಾರಾಂಶ

'ಪೆನ್‌ ಪಾಯಿಂಟ್‌ ಸ್ನೇಹ ವೇದಿಕೆ' ಆಯೋಜಿಸಿದ್ದ 5ನೇ ಆವೃತ್ತಿಯ ಕ್ರಿಕೆಟ್‌ ಫೆಸ್ಟ್‌ನಲ್ಲಿ ಎಮಾರ್‌ ಸ್ಟ್ರೈಕರ್ಸ್‌ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಕಾಸರಗೋಡಿನ ಲಾರ್ಡ್ಸ್‌ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ, ಅಟ್ಯಾಕರ್ಸ್‌ ತಂಡವನ್ನು ಸೋಲಿಸಿ ಎಮಾರ್‌ ಸ್ಟ್ರೈಕರ್ಸ್‌ ಚಾಂಪಿಯನ್ ಆಯಿತು.

ಕಾಸರಗೋಡು: ಸಾಮಾಜಿಕ ಹೋರಾಟ, ಕಾರ್ಯಾಗಾರ, ಬಡವರಿಗೆ ವೈದ್ಯಕೀಯ ಹಾಗೂ ಶೈಕ್ಷಣಿಕ ಕ್ಷೇತ್ರದ ಆರ್ಥಿಕ ಸಹಾಯ ಸೇರಿದಂತೆ ವಿವಿಧ ಸಮಾಜ ಸೇವೆಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ‘ಪೆನ್‌ ಪಾಯಿಂಟ್‌ ಸ್ನೇಹ ವೇದಿಕೆ’ ಆಯೋಜಿಸಿದ 5ನೇ ಆವೃತ್ತಿಯ ಕ್ರಿಕೆಟ್‌ ಫೆಸ್ಟ್‌ನಲ್ಲಿ ಎಮಾರ್‌ ಸ್ಟ್ರೈಕರ್ಸ್‌ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಅಟ್ಯಾಕರ್ಸ್‌ ತಂಡ ರನ್ನರ್‌-ಅಪ್‌ ಸ್ಥಾನ ಪಡೆದುಕೊಂಡಿತು.

ಕೇರಳದ ಕಾಸರಗೋಡು ಜಿಲ್ಲೆಯ ಲಾರ್ಡ್ಸ್‌ ಮೈದಾನದಲ್ಲಿ ಈ ಬಾರಿ ಟೂರ್ನಿ ನಡೆಯಿತು. ನ್ಯಾಯವಾದಿ ಅಶ್ರಫ್‌ ಕನ್ಯಾರಕೋಡಿ ಮಾಲಕತ್ವದ, ಸಾಬಿತ್‌ ಕುಂಬ್ರ ನಾಯಕತ್ವದ ಎಮಾರ್‌ ಸ್ಟ್ರೈಕರ್ಸ್‌ ತಂಡ ಟೂರ್ನಿಯುದ್ದಕ್ಕೂ ಪ್ರಾಬಲ್ಯ ಸಾಧಿಸಿ, ಅಧಿಕಾರಯುತವಾಗಿ ಕಿರೀಟ ಮುಡಿಗೇರಿಸಿಕೊಂಡಿತು. ಈ ಹಿಂದಿನ ಆವೃತ್ತಿಗಳಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದ್ದ ಹಕೀಮ್‌ ಪದಡ್ಕ ಮಾಲಕತ್ವದ, ರಾಝಿಕ್ ಬಿ.ಎಂ. ನಾಯಕತ್ವದ ಅಟ್ಯಾಕರ್ಸ್‌ ತಂಡ ಈ ಬಾರಿ ಅತ್ಯಾಕರ್ಷಕ ಆಟದ ಮೂಲಕ ಗಮನ ಸೆಳೆಯುವುದರ ಜೊತೆಗೆ, ಫೈನಲ್‌ ಕೂಡಾ ಪ್ರವೇಶಿಸಿತು. ಆದರೆ ಫೈನಲ್‌ನಲ್ಲಿ ಎಮಾರ್‌ ತಂಡದ ವಿರುದ್ಧ ವೀರೋಚಿತ ಸೋಲು ಕಂಡು ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ರೋಚಕ ಸೆಣಸಾಟ:

ಟೂರ್ನಿಯಲ್ಲಿ ಈ ಬಾರಿ ಒಟ್ಟು 6 ತಂಡಗಳು ಪಾಲ್ಗೊಂಡವು. ಎಮಾರ್‌ ಸ್ಟ್ರೈಕರ್ಸ್‌, ಅಟ್ಯಾಕರ್ಸ್‌ ಜೊತೆಗೆ ಅಶ್ರಫ್‌ ನಟ್ಟಿಬೈಲ್‌ ಮಾಲಿಕತ್ವದ ಗೋಲ್ಡನ್‌ ಯಾರ್ಕರ್ಸ್‌, ಕಳೆದೆರಡು ಬಾರಿ ಚಾಂಪಿಯನ್‌ ಆಗಿದ್ದ ಉದ್ಯಮಿ ಇರ್ಫಾನ್‌ ಕನ್ಯಾರಕೋಡಿ ಮಾಲಿಕತ್ವದ ಬ್ಲೂ ಹಂಟರ್ಸ್‌, ಅಶ್ರಫ್ ಕಟ್ಟದಪಡ್ಪು ಮಾಲಕತ್ವದ ಚಾಲೆಂಜರ್ಸ್‌, ನೂರುದ್ದೀನ್‌ ಬಪ್ಪಳಿಗೆ ಒಡೆತನದ ಸ್ಪೋರ್ಟ್ಸ್‌ವರ್ಲ್ಡ್‌ ಕಿಂಗ್ಸ್‌ ತಂಡಗಳ ನಡುವೆ ರೋಚಕ ಪೈಪೋಟಿ ಏರ್ಪಟ್ಟಿತು.

ರನ್ನರ್ ಅಪ್ ತಂಡ: ಅಟ್ಯಾಕರ್ಸ್‌

ಲೀಗ್‌ ಹಂತದಲ್ಲಿ ಎಮಾರ್‌ ಅಗ್ರಸ್ಥಾನಿಯಾದರೆ, ಅಟ್ಯಾಕರ್ಸ್‌ 2ನೇ ಸ್ಥಾನ ಪಡೆದುಕೊಂಡಿತು. ಚಾಲೆಂಜರ್ಸ್‌, ಬ್ಲೂ ಹಂಟರ್ಸ್‌ ಕ್ರಮವಾಗಿ 3 ಮತ್ತು 4ನೇ ಸ್ಥಾನ ಪಡೆದುಕೊಂಡಿತು. ಯಾರ್ಕರ್ಸ್‌ ತಂಡ 5ನೇ, ಸ್ಪೋರ್ಟ್ಸ್‌ವರ್ಲ್ಡ್‌ ಕಿಂಗ್ಸ್‌ 6ನೇ ಸ್ಥಾನಕ್ಕೆ ತೃಪ್ತಿಪಟ್ಟು ಗುಂಪು ಹಂತದಲ್ಲೇ ಹೊರಬಿದ್ದವು.

ಎಮಾರ್‌ ಸ್ಟ್ರೈಕರ್ಸ್‌ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಲು ಪ್ರಮುಖ ಪಾತ್ರ ವಹಿಸಿದ ಸ್ಟಾರ್‌ ಆಟಗಾರ ಶಬೀರ್‌ ರೆಂಜ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಫೈನಲ್‌ನ ಪಂದ್ಯಶ್ರೇಷ್ಠ ಪ್ರಶಸ್ತಿ ಸಾಬಿತ್‌ ಕುಂಬ್ರ ಪಾಲಾಯಿತು.

ವೈಯಕ್ತಿಕ ಪ್ರಶಸ್ತಿಗಳ ಪಟ್ಟಿ:

ಸರಣಿ ಶ್ರೇಷ್ಠ: ಶಬೀರ್‌ ರೆಂಜ

ಶ್ರೇಷ್ಠ ಆಲ್ರೌಂಡರ್‌: ಶಿಹಾಬ್‌ ಉಬಾರ್‌

ಶ್ರೇಷ್ಠ ಬ್ಯಾಟ್ಸ್‌ಮನ್‌: ಜಮಾಲ್‌ ಕಲ್ಲಡ್ಕ

ಆರೆಂಜ್‌ ಕ್ಯಾಪ್‌: ಸಿಯಾಬ್‌ ಪಟ್ನ

ಶ್ರೇಷ್ಠ ಬೌಲರ್‌: ಸಾಬಿತ್‌ ಕುಂಬ್ರ

ಪರ್ಪಲ್‌ ಕ್ಯಾಪ್‌: ಅಲ್ಫಾನ್‌ ಅಹ್ಮದ್‌

ಶ್ರೇಷ್ಠ ಕ್ಯಾಚ್‌: ಸರ್ಫು ವಳಾಲ್‌

ಶ್ರೇಷ್ಠ ಫೀಲ್ಡರ್‌: ಶರೀಫ್ ಕಡಬ

ಶ್ರೇಷ್ಠ ವಿಕೆಟ್‌ ಕೀಪರ್‌: ತನ್ಸೀಫ್‌ ಬಿ.ಎಂ.

ಫೈನಲ್‌ನ ಪಂದ್ಯಶ್ರೇಷ್ಠ: ಸಾಬಿತ್‌ ಕುಂಬ್ರ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

HPL Season 05: ಟ್ರೋಫಿ ಗೆದ್ದ ಸಮನ್ವಯ ಸ್ಟಾರ್ಸ್; ಫೈನಲ್‌ನಲ್ಲಿ ಕಲ್ಲೂರು ಕಲಿಗಳಿಗೆ ನಿರಾಸೆ!
ಟ್ರೋಲ್ ಆಗ್ತಿದೆ ಪಲಾಶ್ ಮುಚ್ಚಲ್ ನಡಿಗೆ: ಮಹಿಳಾ ಕ್ರಿಕೆಟರ್ಸ್ ನಡೆಯಕ್ಕೂ ಆಗದಂಗೆ ಥಳಿಸಿದ್ರಾ ಕೇಳಿದ ನೆಟ್ಟಿಗರು