Elephant Kills Lanka Ground Staffs: ಆನೆ ದಾಳಿಗೆ ಕ್ರೀಡಾಂಗಣದ ಇಬ್ಬರು ಸಿಬ್ಬಂದಿ ಬಲಿ..!

Suvarna News   | Asianet News
Published : Dec 09, 2021, 09:39 AM IST
Elephant Kills Lanka Ground Staffs: ಆನೆ ದಾಳಿಗೆ ಕ್ರೀಡಾಂಗಣದ ಇಬ್ಬರು ಸಿಬ್ಬಂದಿ ಬಲಿ..!

ಸಾರಾಂಶ

* ಶ್ರೀಲಂಕಾದಲ್ಲಿ ಆನೆ ದಾಳಿಗೆ ಕ್ರಿಕೆಟ್ ಮೈದಾನದ ಇಬ್ಬರು ಸಿಬ್ಬಂದಿ ಬಲಿ * ಲಂಕಾ ಪ್ರೀಮಿಯರ್ ಲೀಗ್ ಫೈನಲ್‌ಗೆ ಮೈದಾನ ಸಜ್ಜು ಮಾಡುತ್ತಿದ್ದ ಸಿಬ್ಬಂದಿ * ಈ ಘಟನೆಯನ್ನು ಖಚಿತಪಡಿಸಿದ ಲಂಕಾ ಕ್ರಿಕೆಟ್ ಮಂಡಳಿ

ಕೊಲಂಬೊ(ಡಿ.09): ಹಂಬನ್‌ತೋಟಾದಲ್ಲಿರುವ ಮಹಿಂದಾ ರಾಜಪಕ್ಸಾ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದ (Mahinda Rajapaksa International Cricket Stadium) ಇಬ್ಬರು ಸಿಬ್ಬಂದಿ ಆನೆ ದಾಳಿಗೆ ಮೃತಪಟ್ಟಘಟನೆ ಮಂಗಳವಾರ ರಾತ್ರಿ ನಡೆದಿದೆ. ಘಟನೆಯನ್ನು ಶ್ರೀಲಂಕಾ ಕ್ರಿಕೆಟ್‌ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಕ್ರೀಡಾಂಗಣದಿಂದ ಸುಮಾರು 500 ಮೀ. ದೂರದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. 

ಲಂಕಾ ಪ್ರೀಮಿಯರ್‌ ಲೀಗ್‌ (Lanka Premier League) ಫೈನಲ್‌ಗಾಗಿ ಸಿಬ್ಬಂದಿ ಮೈದಾನ ಸಿದ್ಧಗೊಳಿಸಿ ಬೈಕ್ ಮೂಲಕ ಮನೆಗೆ ಹಿಂದಿರುಗುವಾಗ ಘಟನೆ ಸಂಭವಿಸಿದೆ. ಕ್ರೀಡಾಂಗಣವು ವನ್ಯಜೀವಿ ಅಭಯಾರಣ್ಯ ಹಾಗೂ ರಾಷ್ಟ್ರೀಯ ಉದ್ಯಾನವನದ ಸಮೀಪದಲ್ಲೇ ಇದೆ. ಇಬ್ಬರು ಮೃತಪಟ್ಟವರ ಪೈಕಿಗಳ ಪೈಕಿ ಓರ್ವ ವ್ಯಕ್ತಿ ಮೋಟರ್‌ ಸೈಕಲ್‌ ಬಳಿಯೇ ಮೃತಪಟ್ಟಿದ್ದರೇ, ಮತ್ತೋರ್ವ ವ್ಯಕ್ತಿಯ ಮೃತದೇಹ ಸಮೀಪದ ಪೊದೆಯಲ್ಲಿ ಪತ್ತೆಯಾಗಿದೆ.

ಮಹಿಂದಾ ರಾಜಪಕ್ಸಾ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ 2011ರಲ್ಲಿ ನಿರ್ಮಾಣ ಮಾಡಲಾಗಿತ್ತು. ಕ್ರೀಡಾಂಗಣವು ವನ್ಯಜೀವಿ ಅಭಯಾರಣ್ಯ ಹಾಗೂ ರಾಷ್ಟ್ರೀಯ ಉದ್ಯಾನವನದ ಸಮೀಪದಲ್ಲೇ ಇದ್ದು, ಹಲವು ಕಾಡುಪ್ರಾಣಿಗಳು ಸಂಚಾರ ನಡೆಸುತ್ತಾ ಇರುತ್ತವೆ. 2011ರ ಏಕದಿನ ವಿಶ್ವಕಪ್‌ (Cricket ODI World Cup) ಟೂರ್ನಿಗೆ ಮಹಿಂದಾ ರಾಜಪಕ್ಸಾ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ಆತಿಥ್ಯ ವಹಿಸಿದೆ. ಇನ್ನು ಕಳೆದ ವರ್ಷದ ಫೆಬ್ರವರಿಯಲ್ಲಿ ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯಕ್ಕೂ ಈ ಮೈದಾನ ಸಾಕ್ಷಿಯಾಗಿತ್ತು. 

ಟೆಸ್ಟ್‌: ಎರಡೇ ದಿನದಲ್ಲಿ ಪಾಕ್‌ಗೆ ಇನ್ನಿಂಗ್‌ ಜಯ!

ಢಾಕಾ: ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನ ಇನ್ನಿಂಗ್ಸ್‌ ಹಾಗೂ 8 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿದೆ. ಮೊದಲ 3 ದಿನ ಮಳೆಗೆ ಬಲಿಯಾಗಿದ್ದವು. 4ನೇ ದಿನ 4 ವಿಕೆಟ್‌ಗೆ 300 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿದ್ದ ಪಾಕಿಸ್ತಾನ, ದಿನದಂತ್ಯಕ್ಕೆ ಬಾಂಗ್ಲಾವನ್ನು 7 ವಿಕೆಟ್‌ಗೆ 76 ರನ್‌ಗೆ ನಿಯಂತ್ರಿಸಿತ್ತು. 

India Tour of South Africa: ಬಲಿಷ್ಠ ಭಾರತ ತಂಡ ಪ್ರಕಟ, ಏಕದಿನ ತಂಡಕ್ಕೂ ರೋಹಿತ್ ಕ್ಯಾಪ್ಟನ್‌..!

5ನೇ ಹಾಗೂ ಅಂತಿಮ ದಿನವಾದ ಬುಧವಾರ ಮೊದಲ ಇನ್ನಿಂಗ್ಸಲ್ಲಿ ಬಾಂಗ್ಲಾವನ್ನು 87 ರನ್‌ಗೆ ಆಲೌಟ್‌ ಮಾಡಿದ ಪಾಕಿಸ್ತಾನ, ಫಾಲೋ ಆನ್‌ ಹೇರಿ 2ನೇ ಇನ್ನಿಂಗ್ಸ್‌ನಲ್ಲಿ 205 ರನ್‌ಗೆ ಕಟ್ಟಿಹಾಕಿತು. ಕೊನೆ ವಿಕೆಟ್‌ಗೆ 6 ಓವರ್‌ ಹೋರಾಡಿದ ಬಾಂಗ್ಲಾ, ಪಂದ್ಯದಲ್ಲಿ 4 ಓವರ್‌ ಬಾಕಿ ಇರುವಂತೆ ಕೈಚೆಲ್ಲಿತು.

ಹರಾಜಿಗಿದೆ ಬ್ರ್ಯಾಡ್ಮನ್‌ 2 ತ್ರಿಶತಕ ಸಿಡಿಸಿದ್ದ ಬ್ಯಾಟ್‌

ಮೆಲ್ಬರ್ನ್‌: ಆಸ್ಪ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಸರ್‌ ಡಾನ್‌ ಬ್ರ್ಯಾಡ್ಮನ್‌ (Sir Don Bradman) ಅವರ ಬ್ಯಾಟೊಂದನ್ನು ಬೊವ್ರಾಲ್‌ನ ಬ್ರ್ಯಾಡ್ಮನ್‌ ಮ್ಯೂಸಿಯಂ ಹರಾಜು (Auction) ಹಾಕಲಿದೆ. 1934ರ ಆ್ಯಷಸ್‌ ಸರಣಿಯಲ್ಲಿ ಬ್ರ್ಯಾಡ್ಮನ್‌ ಅವರು ಈ ಬ್ಯಾಟ್‌ನಲ್ಲಿ 2 ತ್ರಿಶತಕ ಸಿಡಿಸಿದ್ದರು. ಅಲ್ಲದೇ, ಆರಂಭಿಕ ಆಟಗಾರ ಬಿಲ್‌ ಪೊನ್‌ಸ್ಪೊರ್ಡ್‌ ಜೊತೆ ದಾಖಲೆಯ 451 ರನ್‌ ಜೊತೆಯಾಟ ಆಡಲು ಇದೇ ಬ್ಯಾಟ್‌ ಬಳಸಿದ್ದರು. 

Ashes 2021: ಅನಿಲ್ ಕುಂಬ್ಳೆ, ಕರ್ಟ್ನಿ ವಾಲ್ಶ್ ಜೊತೆ ಅನನ್ಯ ದಾಖಲೆಯ ಪಟ್ಟಿಗೆ ಸೇರಿದ ಪ್ಯಾಟ್ ಕಮ್ಮಿನ್ಸ್

ಈ ಬ್ಯಾಟ್‌ ಅನ್ನು 1999ರಿಂದಲೂ ಇದೇ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಬ್ರ್ಯಾಡ್ಮನ್‌ ಬಳಸಿದ್ದ ಮತ್ತೊಂದು ಬ್ಯಾಟನ್ನು 2018ರಲ್ಲಿ 110,000 ಆಸ್ಪ್ರೇಲಿಯನ್‌ ಡಾಲರ್‌(ಅಂದಾಜು 60 ಲಕ್ಷ ರು.)ಗೆ ಹರಾಜಿನಲ್ಲಿ ಮಾರಾಟ ಮಾಡಲಾಗಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚೇರ್ ಮೇಲೆ ಕೂತು ಹೋಮ ಹವನ ಮಾಡಿದ ಶ್ರೇಯಸ್ ಅಯ್ಯರ್, ಸನಾತನಿಯೋ, ಅಲ್ವೋ ಚರ್ಚೆ!
ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?