
ಎಡ್ಜ್‌ಬಾಸ್ಟನ್ (ಜು.04) ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ ಆರಂಭಿಕ 2 ದಿನ ಭಾರತ ಮೇಲುಗೈ ಸಾಧಿಸಿತ್ತು. ಆದರೆ ಮೂರನೇ ದಿನ ಹ್ಯಾರಿ ಬ್ರೂಕ್ ಹಾಗೂ ಜ್ಯಾಮಿ ಸ್ಮಿತ್ ಜೊತೆಯಾಟ ಟೀಂ ಇಂಡಿಯಾವನ್ನು ಇನ್ನಿಲ್ಲದಂತೆ ಕಾಡಿತ್ತು. ಫಾಲೋ ಆನ್ ಹೇರುವ ಖುಷಿಯಲ್ಲಿದ್ದ ಟೀಂ ಇಂಡಿಯಾಗೆ ಈ ಜೋಡಿಯ ಜೊತೆಯಾಟ ಲೆಕ್ಕಾಚಾರ ಉಲ್ಟಾ ಮಾಡಿತು. ಇಂಗ್ಲೆಂಡ್ ದಿಟ್ಟ ಹೋರಾಟದ ನಡುವೆಯೂ ಭಾರತ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿತ್ತು. ಇಂಗ್ಲೆಂಡ್ ತಂಡವನ್ನು 407 ರನ್‌ಗೆ ಭಾರತ ಕಟ್ಟಿ ಹಾಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್ ಮುನ್ನಡೆ ಪಡೆದುಕೊಂಡಿದೆ.
ಜ್ಯಾಮಿ ಸ್ಮಿತ್ ಹಾಗೂ ಹ್ಯಾರಿ ಬ್ರೂಕ್ ಬರೋಬ್ಬರಿ 300 ರನ್ ಜೊತೆಯಾಟ ಟೀಂ ಇಂಡಿಯಾ ಲೆಕ್ಕಾಚಾರ ಉಲ್ಟಾ ಮಾಡಿತ್ತು. ಇಂಗ್ಲೆಂಡ್ ತಂಡವನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡುವ ಲೆಕ್ಕಾಚಾರ ಕೈಗೂಡಲಿಲ್ಲ. ಹ್ಯಾರಿ ಸ್ಮಿತ್ ಹಾಗೂ ಬ್ರೂಕ್ ಅಬ್ಬರಿಸಿದರೆ, ಇತ್ತ ಮೊಹಮಮದ್ ಸಿರಾಜ್ ಸತತ ದಾಳಿ ಮೂಲಕ ಟೀಂ ಇಂಡಿಯಾ ಭರ್ಜರಿ ಮೇಲುಗೈ ತಂದುಕೊಟ್ಟಿದ್ದಾರೆ. ಸಿರಾಜ್ ಬರೋಬ್ಬರಿ 6 ವಿಕೆಟ್ ಕಬಳಿಸಿದರೆ, ಅಕಾಶ್ ದೀಪ್ 4 ವಿಕೆಟ್ ಕಬಳಿಸಿದರು. ಇಬ್ಬರು ಸೇರಿ 10 ವಿಕೆಟ್ ಕಬಳಿಸಿ ಇಂಗ್ಲೆಂಡ್ ಆಲೌಟ್ ಮಾಡಿದರು.
ಹ್ಯಾರಿ ಬ್ರೂಕ್, ಜ್ಯಾಮಿ ಸ್ಮಿತ್ ಸೆಂಚುರಿ
ಹ್ಯಾರಿ ಬ್ರೂಕ್ ಹಾಗೂ ಜ್ಯಾಮಿ ಸ್ಮಿತ್ ಜೊತೆಯಾಟ ಟೀಂ ಇಂಡಿಯಾವನ್ನು ಹೈರಾಣಾಗಿಸಿತ್ತು. ಇವರಿಬ್ಬರು ಬರೋಬ್ಬರಿ 300 ರನ್ ಜೊತೆಯಾಟ ನೀಡಿದ್ದರು. ಹ್ಯಾರಿ ಬ್ರೂಕ್ 158 ರನ್ ಸಿಡಿಸಿದರು. ಜ್ಯಾಮಿ ಸ್ಮಿತ್ ಕೊನೆಯವರೆಗೆ ಹೋರಾಟ ಮಾಡಿದರು. ಆದರೆ ಇತರ ವಿಕೆಟ್ ಕಳೆದುಕೊಂಡ ಕಾರಣ ಸ್ಮಿತ್ ಅಜೇಯ 184 ರನ್ ಸಿಡಿಸಿದರು. ಇಂಗ್ಲೆಂಡ್ ತಂಡ 84 ರನ್‌ಗೆ 5 ವಿಕೆಟ್ ಕಳೆದುಕೊಂಡಿತ್ತು. ಆದರೆ ಹ್ಯಾರಿ ಬ್ರೂಕ್ ಹಾಗೂ ಸ್ಮಿತ್ ಜೊತೆಯಾಟದಿಂದ 387 ರನ್‌ಗೆ 6ನೇ ವಿಕೆಟ್ ಕಳೆದುಕೊಂಡಿತ್ತು.
ಇವರಿಬ್ಬರನ್ನು ಹೊರತುಪಡಿಸಿದರೆ ಇನ್ನುಳಿದ ಆಟಗಾರರಿಂದ ನಿರೀಕ್ಷಿತ ರನ್ ಹರಿದು ಬರಲಿಲ್ಲ. ಇವರಿಬ್ಬರ ಜೊತೆಯಾಟದಿಂದ ಇಂಗ್ಲೆಂಡ್ ಫಾಲೋಆನ್ ಭೀತಿ ತಪ್ಪಿಸಿಕೊಂಡಿತ್ತು. ಇಷ್ಟೇ ಅಲ್ಲ ಭಾರಿ ಕುಸಿತವನ್ನು ತಪ್ಪಿಸಿಕೊಂಡಿತ್ತು. ಬ್ರೂಕ್ ಹಾಗೂ ಸ್ಮಿತ್ ಜೊತೆಯಾಟದಿಂದ ಭಾರತದ ಮುನ್ನಡೆ 180 ರನ್‌ಗೆ ಕುಸಿಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.