ದುಲೀಪ್ ಟ್ರೋಫಿ: ಸ್ಯಾಮ್ಬನ್ ಅಬ್ಬರದ ಆಟ, ಭಾರತ 'ಡಿ' ಮೊದಲ ದಿನ 306/5

By Kannadaprabha News  |  First Published Sep 20, 2024, 9:45 AM IST

ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಅನಂತಪುರ: ಇಲ್ಲಿ ನಡೆಯುತ್ತಿರುವ ಭಾರತ 'ಬಿ' ವಿರುದ್ಧದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಕೊನೆ ಪಂದ್ಯದಲ್ಲಿ ಭಾರತ 'ಡಿ' ತಂಡ ಮೊದಲ ದಿನವೇ ಉತ್ತಮ ಮೊತ್ತ ಗಳಿಸಿದೆ. ನಾಲ್ವರು ಬ್ಯಾಟರ್‌ಗಳ ಅರ್ಧಶತಕದ ನೆರವಿನಿಂದ ತಂಡ ದಿನದಾಟದಂತ್ಯಕ್ಕೆ 5 ವಿಕೆಟ್‌ಗೆ 306 ರನ್ ಗಳಿಸಿದೆ.

ಟಾಸ್ ಸೋತ 'ಬಿ' ತಂಡ ಫೀಲಿಂಗ್ ಆಯ್ಕೆ ಮಾಡಿಕೊಂಡಿತು. ಡಿ ತಂಡಕ್ಕೆ ದೇವದತ್‌ ಪಡಿಕ್ಕಲ್ ಹಾಗೂ ಶ್ರೀಖರ್ ಭರತ್ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ಜೋಡಿ 105 ರನ್ ಸೇರಿಸಿತು. 50 ರನ್ ಗಳಿಸಿದ್ದ ಪಡಿಕ್ಕಲ್‌ರನ್ನು ನವದೀಪ್ ಸೈನಿ ಪೆವಿಲಿಯನ್‌ಗೆ ಅಟ್ಟಿದರು. 52 ರನ್ ಗಳಿಸಿದ್ದ ಭರತ್‌ಗೆ ಮುಕೇಶ್ ಕುಮಾರ್ ಪೆವಿಲಿಯನ್ ಹಾದಿ ತೋರಿದರು. 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಿಕ್ಕಿ ಭುಯಿ ಕೂಡಾ 'ಬಿ' ತಂಡ ಬೌಲರ್‌ಗಳನ್ನು ಚೆಂಡಾಡಿದರು. ಅವರು 87 ಎಸೆತಗಳಲ್ಲಿ 56 ರನ್ ಸಿಡಿಸಿ ರಾಹುಲ್ ಚಹರ್ ಬೌಲಿಂಗ್‌ನಲ್ಲಿ ಸೈನಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

Latest Videos

undefined

ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್‌: ಕುಸಿದ ಭಾರತವನ್ನು ಮೇಲೆತ್ತಿದ ಅಶ್ವಿನ್‌-ಜಡೇಜಾ

ಭಾರತ ತಂಡದ ಕದ ತಟ್ಟುತ್ತಿರುವ ನಾಯಕ ಶ್ರೇಯಸ್ ಅಯ್ಯರ್ 5 ಎಸೆತಗಳನ್ನು ಎದುರಿಸಿದರೂ ರನ್ ಖಾತೆ ತೆರೆಯಲು ವಿಫಲರಾದರು. ಒಂದು ಹಂತದಲ್ಲಿ 5 ವಿಕೆಟ್‌ಗೆ 216 ರನ್ ಗಳಿಸಿದ್ದ ತಂಡಕ್ಕೆ ಸಂಜು ಸ್ಯಾಮನ್ ಆಸರೆಯಾದರು. ಅವರು ಬಿ ತಂಡದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. 83 ಎಸೆತಗಳನ್ನು ಎದುರಿಸಿರುವ ಸಂಜು 10 ಬೌಂಡರಿ, 3 ಸಿಕರ್‌ನೊಂದಿಗೆ ಔಟಾಗದೆ 89 ರನ್ ಗಳಿಸಿದ್ದು, 2ನೇ ದಿನವೂ ಸ್ಫೋಟಕ ಆಟವಾಡುವ ವಿಶ್ವಾಸದಲ್ಲಿದ್ದಾರೆ. ಅವರಿಗೆ ಉತ್ತಮ ಬೆಂಬಲ ನೀಡುತ್ತಿರುವ ಶರನ್ ಜೈನ್ ಅಜೇಯ 26 ರನ್ ಗಳಿಸಿದ್ದಾರೆ. ಭಾರತ 'ಬಿ' ತಂಡದ ಸ್ಪಿನ್ನರ್ ರಾಹುಲ್ ಚಹರ್ 3 ವಿಕೆಟ್ ಕಿತ್ತಿದ್ದಾರೆ. 

ಸ್ಕೋರ್: ಭಾರತ 'ಡಿ' 306/5 (ಮೊದಲ ದಿನದಂತ್ಯಕ್ಕೆ) (ಸಂಜು ಸ್ಯಾಟ್ಸನ್ 89*, ರಿಕ್ಕಿ ಭುಯಿ 56, ಭರತ್ 52, ದೇವದತ್ ಪಡಿಕ್ಕಲ್ 50, ಚಹರ್ 3-60)

'ಎ' ತಂಡಕ್ಕೆ ರಾವತ್ ಶತಕದಾಸರೆ

ಅನಂತಪುರ: ಈ ಬಾರಿ ದುಲೀಪ್ ಟ್ರೋಫಿ ಗೆಲ್ಲುವ ರೇಸ್‌ನಲ್ಲಿರುವ ಭಾರತ 'ಎ' ತಂಡ ಗುರುವಾರ ಆರಂಭಗೊಂಡ ಭಾರತ 'ಸಿ' ತಂಡದ ವಿರುದ್ಧದ ಟೂರ್ನಿಯ ಕೊನೆ ಪಂದ್ಯದಲ್ಲಿ ಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದೆ. ಆರಂಭಿಕ ಆಘಾತ ಕ್ಕೊಳಗಾಗಿದ್ದ ತಂಡ ಶಾಶ್ವತ್ ರಾವತ್ ಅವರ ಆಕರ್ಷಕ ಶತಕದ ನೆರವಿನಿಂದ ಮೊದಲ ದಿನದಂತ್ಯಕ್ಕೆ 7 ವಿಕೆಟ್ ನಷ್ಟದಲ್ಲಿ 224 ರನ್ ಕಲೆಹಾಕಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ 'ಎ' ತಂಡ ಇನ್ನಿಂಗ್ಸ್‌ನ 7ನೇ ಓವರ್‌ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಪ್ರಥಮ್ ಸಿಂಗ್ 6 ರನ್‌ಗೆ ಔಟಾದರು. ಅವರ ಬೆನ್ನಲ್ಲೇ ನಾಯಕ ಮಯಾಂಕ್ ಅಗರ್‌ವಾಲ್ (06), ರಿಯಾನ್ ಪರಾಗ್ (06), ತಿಲಕ್ ವರ್ಮಾ(02) ಹಾಗೂ ಕುಮಾರ್‌ ಕುಶಾಗ್ರ (00) ಕೂಡಾ ಪೆವಿಲಿಯನ್ ಮರಳಿದರು. ತಂಡ ಕೇವಲ 36 ರನ್ ಗಳಿಸುವಷ್ಟರಲ್ಲೇ ಪ್ರಮುಖ ಐವರು ಬ್ಯಾಟರ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು.

ಕ್ರಿಕೆಟ್ ಲೆಜೆಂಡ್ ಸರ್ ಡಾನ್ ಬ್ರಾಡ್ಮನ್ ದಾಖಲೆ ಮುರಿಯಲು ರೆಡಿಯಾದ ಕಿಂಗ್ ಕೊಹ್ಲಿ!

ಈ ಹಂತದಲ್ಲಿ ಶಾಶ್ವತ್ ರಾವತ್ ಹಾಗೂ ಶಮ್ಸ್ ಮುಲಾನಿ(44) ತಂಡವನ್ನು ಆಧರಿಸಿದರು. ಈ ಜೋಡಿ 6ನೇ ವಿಕೆಟ್‌ಗೆ 111 ಎಸೆತಗಳಲ್ಲಿ 87 ರನ್ ಜೊತೆಯಾಟವಾಡಿತು. ಬಳಿಕ 7ನೇ ವಿಕೆಟ್‌ಗೆ ತನುಶ್ ಕೋಟ್ಯನ್ (10) ಜೊತೆಗೂಡಿ 31 ರನ್, ಮುರಿಯದ 8ನೇ ವಿಕೆಟ್‌ಗೆ ಆವೇಶ್ ಖಾನ್ (ಔಟಾಗದೆ 16) ಜೊತೆಗೂಡಿ 70 ರನ್ ಸೇರಿಸಿರುವ ಶಾಶ್ವತ್ ರಾವತ್, 2ನೇ ದಿನವೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ದೊಡ್ಡ ಮೊತ್ತದ ಭರವಸೆ ನೀಡಿದ್ದಾರೆ. ಸದ್ಯ ಅವರು 235 ಎಸೆತಗಳಲ್ಲಿ 15 ಬೌಂಡರಿಗಳೊಂದಿಗೆ ಅಜೇಯ 122 ರನ್ ಸಿಡಿಸಿದಾರೆ.

ಸ್ಕೋರ್: ಭಾರತ 'ಎ' 224/7 (ಮೊದಲ ದಿನದಂತ್ಯಕ್ಕೆ) (ಶಾಶ್ವತ್ ರಾವತ್ 122*, ಶಮ್ಸ್ ಮುಲಾನಿ 44, ಅನುಲ್ ಕಂಬೋಜ್ 3-40, ವಿಜಯ್‌ ಕುಮಾರ್ ವೈಶಾಖ್ 2/33)

click me!