Duleep Trophy ಸೆಂಟ್ರಲ್ ಝೋನ್ ವಿರುದ್ದ ಆಕರ್ಷಕ ಶತಕ ಚಚ್ಚಿದ ಪೃಥ್ವಿ ಶಾ

By Kannadaprabha NewsFirst Published Sep 17, 2022, 9:49 AM IST
Highlights

ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಪೃಥ್ವಿ ಶಾ ಆಕರ್ಷಕ ಶತಕ
ಕೇಂದ್ರ ವಲಯ ಎದುರು ಪಶ್ಚಿಮ ವಲಯ ಮೇಲುಗೈ
ಉತ್ತರ ವಲಯ ವಿರುದ್ದ ದಕ್ಷಿಣ ವಲಯ ಬೃಹತ್ ಮೊತ್ತ

ಕೊಯಮತ್ತೂರು(ಸೆ.17): ದುಲೀಪ್‌ ಟ್ರೋಫಿ ಪ್ರಥಮ ದರ್ಜೆ ಕ್ರಿಕೆಟ್‌ನ ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಕೇಂದ್ರ ವಲಯದ ವಿರುದ್ಧ ಪಶ್ಚಿಮ ವಲಯ ಮೇಲುಗೈ ಸಾಧಿಸಿದೆ. ಕೊಯಮತ್ತೂರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ದಿನ 9 ವಿಕೆಟ್‌ ಕಳೆದುಕೊಂಡು 252 ರನ್‌ ಕಲೆ ಹಾಕಿದ್ದ ಪಶ್ಚಿಮ ತಂಡ ಶುಕ್ರವಾರ 257 ರನ್‌ಗೆ ಆಲೌಟಾಯಿತು. ಬಳಿಕ ಬ್ಯಾಟಿಂಗ್‌ ಆರಂಭಿಸಿದ ಕೇಂದ್ರ ತಂಡ ತೀವ್ರ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಗಿ ಕೇವಲ 128 ರನ್‌ಗೆ ಗಂಟು ಮೂಟೆ ಕಟ್ಟಿತು. ನಾಯಕ ಕರಣ್‌ ಶರ್ಮಾ(34) ತಂಡದ ಪರ ಗರಿಷ್ಠ ಮೊತ್ತ ದಾಖಲಿಸಿದರು. ಜಯದೇವ್‌ ಉನದ್ಕಟ್‌, ತನುಶ್‌ ಕೋಟ್ಯಾನ್‌ ತಲಾ 3 ವಿಕೆಟ್‌ ಪಡೆದರು.

2ನೇ ಇನ್ನಿಂಗ್ಸ್‌ ಆರಂಭಿಸಿರುವ ಪಶ್ಚಿಮ ವಲಯ ತಂಡ 3 ವಿಕೆಟ್‌ಗೆ 130 ರನ್‌ ಗಳಿಸಿದ್ದು, ಒಟ್ಟು 259 ರನ್‌ ಮುನ್ನಡೆಯಲ್ಲಿದೆ. ಪೃಥ್ವಿ ಶಾ(104) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ವೆಂಕಿ ಕುತ್ತಿಗೆಗೆ ಬಡಿದ ಬಾಲ್‌: ಮೈದಾನಕ್ಕೆ ಬಂದ ಆ್ಯಂಬುಲೆನ್ಸ್‌

ಪಂದ್ಯದ ವೇಳೆ ಕೇಂದ್ರ ವಲಯ ತಂಡದ ಆಟಗಾರ ವೆಂಕಟೇಶ್‌ ಅಯ್ಯರ್‌ ಕುತ್ತಿಗೆಗೆ ಬಾಲ್‌ ಬಡಿದಿದ್ದು, ಅವರನ್ನು ಕರೆದೊಯ್ಯಲು ಆ್ಯಂಬುಲೆನ್ಸ್‌ ಮೈದಾನಕ್ಕೆ ಆಗಮಿಸಿದ ಘಟನೆ ನಡೆಯಿತು. ಅಯ್ಯರ್‌ ಬ್ಯಾಟಿಂಗ್‌ ವೇಳೆ ಚಿಂತನ್‌ ಗಾಜ ಬೌಲಿಂಗ್‌ ಮಾಡುತ್ತಿದ್ದರು. ಈ ವೇಳೆ ಅಯ್ಯರ್‌ ಬಾರಿಸಿದ ಚೆಂಡು ಗಾಜ ಕೈಸೇರಿದ್ದು, ಅದನ್ನು ನೇರವಾಗಿ ಸ್ಟಂಪ್‌ನತ್ತ ಎಸೆಯುವ ವೇಳೆ ಅಯ್ಯರ್‌ ಕುತ್ತಿಗೆಗೆ ಬಡಿದಿದೆ. ಕೂಡಲೇ ಅಯ್ಯರ್‌ ನೋವಿನಿಂದ ಕುಸಿದು ಬಿದ್ದರು. ತಕ್ಷಣ ಆ್ಯಂಬುಲೆನ್ಸ್‌ ಮೈದಾನಕ್ಕೆ ಬಂದರೂ ಅಯ್ಯರ್‌ ನಡೆದುಕೊಂಡೇ ಹೊರನಡೆದರು. ಕೆಲ ಸಮಯದ ಬಳಿಕ ಮತ್ತೆ ಬ್ಯಾಟಿಂಗ್‌ ಮುಂದುವರಿಸಿದರು.

ದಕ್ಷಿಣ ವಲಯ ಬೃಹತ್‌ ಮೊತ್ತ

ಸೇಲಂ: ಪ್ರತಿಷ್ಠಿತ ದುಲೀಪ್‌ ಟ್ರೋಫಿ ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಉತ್ತರ ವಲಯದ ವಿರುದ್ಧ ದಕ್ಷಿಣ ವಲಯ ತಂಡ ಬೃಹತ್‌ ಮೊತ್ತ ಕಲೆ ಹಾಕಿದೆ. ಸೇಲಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ದಕ್ಷಿಣ ತಂಡ ಮೂವರು ಬ್ಯಾಟರ್‌ಗಳ ಶತಕದ ನೆರವಿನಿಂದ 8 ವಿಕೆಟ್‌ಗೆ 630 ರನ್‌ ಸಿಡಿಸಿ ಮೊದಲ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. 

ಸಿಟ್ಟಿನಲ್ಲಿ ಬಾಲ್ ಎಸೆದ ಬೌಲರ್, ಟೀಂ ಇಂಡಿಯಾ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ತಲೆಗೆ ಗಾಯ!

ಮೊದಲ ದಿನ ಶತಕ ಸಿಡಿಸಿ ಕ್ರೀಸ್‌ನಲ್ಲಿದ್ದ ನಾಯಕ ಹನುಮ ವಿಹಾರಿ 134 ರನ್‌ ಗಳಿಸಿ ಔಟಾದರೆ, ರಿಕಿ ಭುಯಿ ಔಟಾಗದೆ 103 ರನ್‌ ಗಳಿಸಿದರು. ಬಾಬ ಇಂದ್ರಜಿತ್‌ 65, ಕೆ.ಗೌತಮ್‌ 48, ಮನೀಶ್‌ ಪಾಂಡೆ 35 ರನ್‌ ಕೊಡುಗೆ ನೀಡಿದರು. ಬಳಿಕ ಇನ್ನಿಂಗ್‌್ಸ ಆರಂಭಿಸಿದ ಉತ್ತರ ವಲಯ ವಿಕೆಟ್‌ ನಷ್ಟವಿಲ್ಲದೇ 24 ರನ್‌ ಗಳಿಸಿದ್ದು, ಇನ್ನೂ 606 ರನ್‌ ಹಿನ್ನಡೆಯಲ್ಲಿದೆ.

click me!