Duleep Trophy Final: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಶ್ಚಿಮ ವಲಯಕ್ಕೆ ಆರಂಭಿಕ ಆಘಾತ

Published : Sep 21, 2022, 09:57 AM IST
Duleep Trophy Final: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಶ್ಚಿಮ ವಲಯಕ್ಕೆ ಆರಂಭಿಕ ಆಘಾತ

ಸಾರಾಂಶ

* ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ದಕ್ಷಿಣ ವಲಯ-ಪಶ್ಚಿಮ ವಲಯ ಕಾದಾಟ * ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಶ್ಚಿಮ ವಲಯಕ್ಕೆ ಆಘಾತ * ಕೇವಲ ಒಂದು ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಯಶಸ್ವಿ ಜೈಸ್ವಾಲ್

ಕೊಯಮತ್ತೂರು(ಸೆ.21): ದುಲೀಪ್‌ ಟ್ರೋಫಿ ದೇಸಿ ಪ್ರಥಮ ದರ್ಜೆ ಟೂರ್ನಿಯು ಅಂತಿಮ ಹಂತ ತಲುಪಿದ್ದು, ಬುಧವಾರದಿಂದ ಫೈನಲ್‌ ಆರಂಭವಾಗಿದೆ.  ಪ್ರಶಸ್ತಿಗಾಗಿ ದಕ್ಷಿಣ ಮತ್ತು ಪಶ್ಚಿಮ ವಲಯ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಪಶ್ಚಿಮ ವಲಯ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಮೊದಲು ಬ್ಯಾಟಿಂಗ್ ಆರಂಭಿಸಿರುವ ಪಶ್ಚಿಮ ವಲಯ ತಂಡವು ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿದೆ. ಯಶಸ್ವಿ ಜೈಸ್ವಾಲ್ ಕೇವಲ ಒಂದು ರನ್ ಬಾರಿಸಿ ಸ್ಟಿಫನ್‌ಗೆ ವಿಕೆಟ್ ಒಪ್ಪಿಸಿದ್ದಾರೆ.

ಸೆಮಿಫೈನಲ್‌ನಲ್ಲಿ ದಕ್ಷಿಣ ವಲಯ ಉತ್ತರ ವಲಯದ ವಿರುದ್ಧ ಬೃಹತ್‌ ಗೆಲುವು ದಾಖಲಿಸಿದರೆ, ಕೇಂದ್ರ ವಲಯ ತಂಡವನ್ನು ಪಶ್ಚಿಮ ವಲಯ ಸುಲಭವಾಗಿ ಬಗ್ಗುಬಡಿದಿತ್ತು. ದಕ್ಷಿಣ ವಲಯವನ್ನು ಹನುಮ ವಿಹಾರಿ ಮುನ್ನಡೆಸಲಿದ್ದು, ಮಯಾಂಕ್‌ ಅಗರ್‌ವಾಲ್‌, ಮನೀಶ್‌ ಪಾಂಡೆ, ಕೆ.ಗೌತಮ್‌, ರೋಹನ್‌ ಸೇರಿ ಹಲವು ತಾರಾ ಆಟಗಾರರ ಬಲವಿದೆ. ಇನ್ನು ಪಶ್ಚಿಮ ವಲಯ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ತಂಡದಲ್ಲಿ ಪೃಥ್ವಿ ಶಾ, ಜಯ್‌ದೇವ್‌ ಉನಾದ್ಕತ್‌ರಂತಹ ಅನುಭವಿ ಆಟಗಾರರು ಇದ್ದಾರೆ.

ಭಾರತ ‘ಎ’ ಹಾಗೂ ಭಾರತ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಲು ಈ ಪಂದ್ಯವನ್ನು ಬಳಸಿಕೊಳ್ಳಲು ಆಟಗಾರರು ಎದುರು ನೋಡುತ್ತಿದ್ದಾರೆ. 5 ದಿನಗಳ ಕಾಲ ನಡೆಯಲಿರುವ ಪಂದ್ಯವು ಭಾರೀ ರೋಚಕತೆಯಿಂದ ಕೂಡಿರುವ ನಿರೀಕ್ಷೆ ಇದೆ.

ತಂಡಗಳು ಹೀಗಿವೆ ನೋಡಿ

ದಕ್ಷಿಣ ವಲಯ:

ರೋಹನ್ ಕುನ್ನುಮ್ಮಲ್, ಮಯಾಂಕ್ ಅಗರ್‌ವಾಲ್, ಬಾಬಾ ಅಪರಾಜಿತ್, ಹನುಮ ವಿಹಾರಿ(ನಾಯಕ), ಮನೀಶ್ ಪಾಂಡೆ, ರಿಕಿ ಬೊಯಿ(ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ಆರ್. ಸಾಯಿ ಕಿಶೋರ್, ಬಾಸಿಲ್ ಥಂಪಿ, ಟಿ ರವಿತೇಜ, ಚೇಪುರಪಳ್ಳಿ ಸ್ಟಿಫನ್.

ಪಶ್ಚಿಮ ವಲಯ:
ಯಶಸ್ವಿ ಜೈಸ್ವಾಲ್, ಪ್ರಿಯಾಂಕ್ ಪಾಂಚಾಲ್, ಅಜಿಂಕ್ಯ ರಹಾನೆ(ನಾಯಕ), ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್, ಅತಿತ್ ಸೇಠ್, ಶಮ್ಸ್ ಮುಲಾನಿ, ಹೀತ್ ಪಟೇಲ್‌(ವಿಕೆಟ್ ಕೀಪರ್), ತನುಷ್ ಕೊಟ್ಯಾನ್, ಜಯದೇವ್ ಉನಾದ್ಕತ್, ಚಿಂತನ್ ಗಾಜ.

ಪೂರ್ಣಾವಧಿ ಕೋಚಿಂಗ್‌ ಬಗ್ಗೆ ಯೋಚಿಸಿಲ್ಲ: ಯುವಿ

ಮೊಹಾಲಿ: ಭಾರತದ ಮಾಜಿ ಆಲ್ರೌಂಡರ್‌ ಯುವರಾಜ್‌ ಸಿಂಗ್‌ ತಾವು ಪೂರ್ಣಾವಧಿ ಕೋಚ್‌ ಆಗುವ ಬಗ್ಗೆ ಸದ್ಯಕ್ಕೆ ಯೋಚಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ಭಾರತ-ಆಸ್ಪ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯಕ್ಕೂ ಮುನ್ನ ಪಂಜಾಬ್‌ ಕ್ರಿಕೆಟ್‌ ಸಂಸ್ಥೆ ಯುವರಾಜ್‌ರನ್ನು ಸನ್ಮಾನಿಸಿತು. 

ಮಿಚೆಲ್‌ ಜಾನ್ಸನ್‌ ಕೋಣೆಯಲ್ಲಿ ಹಾವು ಪತ್ತೆ..! ನಿಮಗೆ ಈ ಹಾವು ಗೊತ್ತೇ ಎಂದು ಪ್ರಶ್ನಿಸಿದ ಆಸೀಸ್ ಕ್ರಿಕೆಟಿಗ

ಈ ಸಂದರ್ಭದಲ್ಲಿ ಮಾತನಾಡಿದ ಯುವಿ, ‘ಸಮಯ ಸಿಕ್ಕಾಗ ಯುವ ಆಟಗಾರರ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದ್ದೇನೆ. ನನ್ನ ಮಗು ಬೆಳೆಯುವುದನ್ನು ನಾನು ನೋಡಬೇಕು. ಅದರ ಜೊತೆ ಸಮಯ ಕಳೆಯಬೇಕು. ಹೀಗಾಗಿ ಸದ್ಯಕ್ಕೆ ಪೂರ್ಣಾವಧಿ ಕೋಚ್‌ ಆಗಿ ಕಾರ‍್ಯನಿರ್ವಹಿಸುವ ಬಗ್ಗೆ ಯೋಚಿಸಿಲ್ಲ’ ಎಂದು ಹೇಳಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?