ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ್ದರೂ, ದೇಶಿ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿರಲಿಲ್ಲ. ಬಿಸಿಸಿಐ ಈ ಇಬ್ಬರು ಆಟಗಾರರಿಗೆ ದೇಶಿ ಕ್ರಿಕೆಟ್ ಆಡುವಂತೆ ತಾಕೀತು ಮಾಡಿತ್ತು. ಹೀಗಿದ್ದೂ ಈ ಇಬ್ಬರು ಆಟಗಾರರು ಬಿಸಿಸಿಐ ಸಲಹೆಗೆ ಸೊಪ್ಪು ಹಾಕಿರಲಿಲ್ಲ.
ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಆಟಗಾರರಾದ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಅವರನ್ನು ಕೆಲ ತಿಂಗಳ ಹಿಂದಷ್ಟೇ ಬಿಸಿಸಿಐ, ತನ್ನ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಕೈಬಿಡುವ ಮೂಲಕ ದಿಟ್ಟ ನಿರ್ಧಾರವನ್ನು ಪ್ರಕಟಿಸಿತ್ತು. ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಈ ತೀರ್ಮಾನದ ಹಿಂದಿದ್ದ ವ್ಯಕ್ತಿ ಯಾರು ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.
ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ್ದರೂ, ದೇಶಿ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿರಲಿಲ್ಲ. ಬಿಸಿಸಿಐ ಈ ಇಬ್ಬರು ಆಟಗಾರರಿಗೆ ದೇಶಿ ಕ್ರಿಕೆಟ್ ಆಡುವಂತೆ ತಾಕೀತು ಮಾಡಿತ್ತು. ಹೀಗಿದ್ದೂ ಈ ಇಬ್ಬರು ಆಟಗಾರರು ಬಿಸಿಸಿಐ ಸಲಹೆಗೆ ಸೊಪ್ಪು ಹಾಕಿರಲಿಲ್ಲ. ಹೀಗಾಗಿ ಬಿಸಿಸಿಐ ಈ ಇಬ್ಬರು ಆಟಗಾರರನ್ನು ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಕೈಬಿಡುವ ಮೂಲಕ ಬಿಸಿ ಮುಟ್ಟಿಸುವ ಕೆಲಸ ಮಾಡಿದೆ. ಈ ಇಬ್ಬರನ್ನು ಕೈಬಿಡಲು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಕಾರಣ ಎನ್ನುವ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.
RCB ಪ್ಲೇ ಆಫ್ ಮಾತ್ರವಲ್ಲ 3ನೇ ಸ್ಥಾನಕ್ಕೂ ಲಗ್ಗೆಯಿಡಬಹುದು..! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಡೀಟೈಲ್ಸ್
2023ರ ಐಸಿಸಿ ಏಕದಿನ ವಿಶ್ವಕಪ್ ಬಳಿಕ ಇಶಾನ್ ಕಿಶನ್, ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿರಲಿಲ್ಲ. ಇನ್ನು ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಸಂಪೂರ್ಣ ಫಿಟ್ ಇದ್ದರೂ ಲೀಗ್ ಹಂತದ ರಣಜಿ ಪಂದ್ಯಗಳನ್ನಾಡಲು ಹಿಂದೇಟು ಹಾಕಿದ್ದರು. ಆ ನಂತರ ಬಿಸಿಸಿಐ ಎಚ್ಚರಿಕೆಗೆ ಮಣಿದು ರಣಜಿ ಟ್ರೋಫಿ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯವನ್ನಾಡಿದ್ದರು.
"ಫಿಟ್ ಇರುವಂತಹ ಆಟಗಾರರು ದೇಶಿ ಕ್ರಿಕೆಟ್ ಆಡಬೇಕು ಎನ್ನುವುದು ನಿಯಮವೇ ಇದೆ. ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಕೈಬಿಡುವ ತೀರ್ಮಾನವನ್ನು ತೆಗೆದುಕೊಂಡಿದ್ದು ಆಯ್ಕೆ ಸಮಿತಿ ಮುಖ್ಯಸ್ಥರಾದ ಅಜಿತ್ ಅಗರ್ಕರ್. ಅವರಿಬ್ಬರೂ ದೇಶಿ ಕ್ರಿಕೆಟ್ ಆಡದಿದ್ದಕ್ಕೆ ಈ ತೀರ್ಮಾನ ಮಾಡಿದ್ದರು. ಅವರ ತೀರ್ಮಾನವನ್ನು ನಾನು ಅನುಷ್ಟಾನಕ್ಕೆ ತಂದಿದ್ದೇನೆ ಅಷ್ಟೇ. ಅವರ ಜಾಗಕ್ಕೆ ಸಂಜು ಸ್ಯಾಮ್ಸನ್ ಅವರಂತಹ ಆಟಗಾರರಿಗೆ ಅವಕಾಶ ಸಿಕ್ಕಿದೆ" ಎಂದು ಜಯ್ ಶಾ ಹೇಳಿದ್ದಾರೆ.
4 ಐಪಿಎಲ್ ಆವೃತ್ತಿಗಳಲ್ಲಿ 600+ ರನ್: ಕಿಂಗ್ ಕೊಹ್ಲಿ ಅಪರೂಪದ ದಾಖಲೆ..!
2023-24ಕ್ಕೆ ಬಿಸಿಸಿಐನ ಕೇಂದ್ರ ಗುತ್ತಿಗೆ ವಿವರ
ಗ್ರೇಡ್ A+ (ವಾರ್ಷಿಕ 7 ಕೋಟಿ ರೂಪಾಯಿ): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ.
ಗ್ರೇಡ್ ಎ (ವಾರ್ಷಿಕ 5 ಕೋಟಿ ರೂಪಾಯಿ): ಆರ್ ಅಶ್ವಿನ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.
ಗ್ರೇಡ್ ಬಿ (ವಾರ್ಷಿಕ 3 ಕೋಟಿ ರೂಪಾಯಿ): ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.
ಗ್ರೇಡ್ ಸಿ (ವಾರ್ಷಿಕ 1 ಕೋಟಿ ರೂಪಾಯಿ): ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್.
ವೇಗದ ಬೌಲಿಂಗ್ ಗುತ್ತಿಗೆಯ ಶಿಫಾರಸು: ಆಕಾಶ್ ದೀಪ್, ವಿಜಯ್ ಕುಮಾರ್ ವೈಶಾಕ್, ಉಮ್ರಾನ್ ಮಲಿಕ್, ಯಶ್ ದಯಾಳ್ ಮತ್ತು ವಿದ್ವತ್ ಕಾವೇರಪ್ಪ.