
ಇಂಗ್ಲೆಂಡ್ ಸರಣಿ ಬೆನ್ನಲ್ಲೇ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ನಾಯಕ ರೋಹಿತ್ ಶರ್ಮಾ ನಿವೃತ್ತಿ ವದಂತಿಗೆ ಬಿಸಿಸಿಐ ಬ್ರೇಕ್ ಹಾಕಿದ ಬೆನ್ನಲ್ಲೇ ಅಸಲಿ ಟ್ವಿಸ್ಟ್ ಸಿಕ್ಕಿದೆ. ಡ್ರೆಸ್ಸಿಂಗ್ ರೂಮ್‌ನ ಆಂತರಿಕ ರಾಜಕೀಯ ಹಾಗೂ ಸರಣಿಯುದ್ದಕ್ಕೂ ಅವಕಾಶ ಸಿಗದೆ ಮೂಲೆಗುಂಪಾಗಿರುವ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್, ಮಾನಸಿಕ ಹಿಂಸೆಗೆ ಬೇಸತ್ತು ದಿಢೀರ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ ಎಂಬ ಸ್ಫೋಟಕ ಸುಳಿವನ್ನು ಮಾಜಿ ಆಟಗಾರರು ನೀಡಿದ್ದಾರೆ!
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 50 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಬರೋಬ್ಬರಿ 387 ರನ್‌ಗಳ ಬೃಹತ್ ಸ್ಕೋರ್ ಕಲೆಹಾಕಿತು. ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಲಾರ್ಡ್ಸ್ ಮೈದಾನದಲ್ಲಿ ದಾಖಲಾದ ಅತ್ಯಧಿಕ ಸ್ಕೋರ್ ಇದಾಗಿದೆ. ಇಂಗ್ಲೆಂಡ್ ಪರ ಬೆನ್ ಡಕೆಟ್ 141 ರನ್ ಚಚ್ಚಿದರೆ, ಜಾಕೋಬ್ ಬೆಥೆಲ್ 91 ಮತ್ತು ಜೋ ರೂಟ್ ಔಟಾಗದೆ 74 ರನ್ ಗಳಿಸಿ ಭಾರತದ ಬೌಲರ್‌ಗಳನ್ನು ಮನಬಂದಂತೆ ಕಾಡಿದರು.
ಟೀಮ್ ಇಂಡಿಯಾದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದ ಕಾರಣದಿಂದಾಗಿ ಈ ಪಂದ್ಯದಲ್ಲಿ ಆಡಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಭಾರತದ ಬೌಲಿಂಗ್ ಲೈನ್ಅಪ್ ಸಂಪೂರ್ಣವಾಗಿ ಹಳಿ ತಪ್ಪಿತು. ಪ್ರಸಿದ್ಧ್ ಕೃಷ್ಣ 2 ವಿಕೆಟ್ ಹಾಗೂ ಪ್ರಿನ್ಸ್ ಯಾದವ್ 1 ವಿಕೆಟ್ ಪಡೆದರಾದರೂ ರನ್ ಹರಿವಿಗೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. ಗುರ್ನೂರ್ ಬ್ರಾರ್ 10 ಓವರ್‌ಗಳಲ್ಲಿ 91 ರನ್ ಬಿಟ್ಟುಕೊಟ್ಟರೆ, ಪ್ರಿನ್ಸ್ ಯಾದವ್ 79, ಅರ್ಷದೀಪ್ 72, ಪ್ರಸಿದ್ಧ್ ಕೃಷ್ಣ 69 ಮತ್ತು ಅಕ್ಷರ್ ಪಟೇಲ್ 61 ರನ್ ನೀಡಿ ದುಬಾರಿಯಾದರು. ಕಳಪೆ ಬೌಲಿಂಗ್ ಪ್ರದರ್ಶನದಿಂದಾಗಿ ಟೀಮ್ ಮ್ಯಾನೇಜ್‌ಮೆಂಟ್‌ನ ಆಟಗಾರರ ಆಯ್ಕೆಯ ಬಗ್ಗೆ ಈಗ ಭಾರಿ ಟೀಕೆಗಳು ಕೇಳಿಬರುತ್ತಿವೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ನಂತರ ನಾಯಕ ರೋಹಿತ್ ಶರ್ಮಾ ಒನ್ ಡೇ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಬಿಸಿಸಿಐ ಈ ಸುದ್ದಿಯನ್ನು ಸುಳ್ಳು ಎಂದು ಸ್ಪಷ್ಟಪಡಿಸಿದೆ. ರೋಹಿತ್ ನಿವೃತ್ತಿ ಸುದ್ದಿ ಸದ್ಯಕ್ಕೆ ತಣ್ಣಗಾಗಿದೆಯಾದರೂ, ಈ ಇಂಗ್ಲೆಂಡ್ ಪ್ರವಾಸ ಮುಗಿಯುತ್ತಿದ್ದಂತೆ ಭಾರತ ತಂಡದ ಮತ್ತೊಬ್ಬ ಸ್ಟಾರ್ ಆಟಗಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಲಿದ್ದಾರೆ ಎಂಬ ಹೊಸದೊಂದು ಚರ್ಚೆ ಶುರುವಾಗಿದೆ. ಸರಣಿಯ ಮೂರೂ ಏಕದಿನ ಪಂದ್ಯಗಳಲ್ಲಿ ಅವಕಾಶ ಸಿಗದ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಶೀಘ್ರದಲ್ಲೇ ನಿವೃತ್ತಿ ಘೋಷಿಸಬಹುದು ಎಂದು ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಮತ್ತು ಆರ್. ಅಶ್ವಿನ್ ಸುಳಿವು ನೀಡಿದ್ದಾರೆ. ಕುಲ್ದೀಪ್‌ಗೆ ಇತ್ತೀಚೆಗೆ ಕೇವಲ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಾತ್ರ ಆಡಲು ಚಾನ್ಸ್ ಸಿಕ್ಕಿತ್ತು.
ಈ ಬಗ್ಗೆ ಮಾತನಾಡಿದ ಕೈಫ್, "ಕುಲ್ದೀಪ್ ಇನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ತಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಳ್ಳಲು ಸಿದ್ಧರಾಗಬೇಕು. ಇಂದು ತಂಡದಲ್ಲಿ ಬುಮ್ರಾ, ಸುಂದರ್ ಅಥವಾ ವರುಣ್ ಯಾರೂ ಇರಲಿಲ್ಲ. ಆದರೂ ಕುಲ್ದೀಪ್‌ಗೆ ಆಡುವ ಹನ್ನೊಂದರ ಬಳಗದಲ್ಲಿ (Playing 11) ಜಾಗ ಸಿಗಲಿಲ್ಲ. ಲಾರ್ಡ್ಸ್‌ನಂತಹ ಪಿಚ್‌ನಲ್ಲಿ ಎಡಗೈ ಸ್ಪಿನ್ನರ್ ತಂಡಕ್ಕೆ ತುಂಬಾ ಉಪಯುಕ್ತವಾಗುತ್ತಿದ್ದರು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕುಲ್ದೀಪ್ ಇದುವರೆಗೆ 118 ಏಕದಿನ ಪಂದ್ಯಗಳಿಂದ 194 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಇತ್ತ ಅಶ್ವಿನ್ ಕೂಡ, ಕುಲ್ದೀಪ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮುಗಿಸುವುದಿಲ್ಲ ಎಂಬ ಕಾರಣ ನೀಡಿ ಅವರನ್ನು ಯಾವಾಗಲೂ ತಂಡದಿಂದ ಕೈಬಿಡಲಾಗುತ್ತದೆ. ಆದರೆ ಇಂದು ಅರ್ಶ್‌ದೀಪ್ ಸಿಂಗ್ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದನ್ನು ನೋಡಿದರೆ ಏನನಿಸುತ್ತದೆ? ಬುಮ್ರಾ ಕೂಡ ತಂಡದಲ್ಲಿಲ್ಲದ ಇಂತಹ ಸಮಯದಲ್ಲಿ ಕುಲ್ದೀಪ್‌ಗೆ ಅವಕಾಶ ನೀಡಬೇಕಿತ್ತು. ಅವರ ಪರಿಸ್ಥಿತಿ ನೋಡಿ ಬೇಸರವಾಗುತ್ತಿದೆ. ಇಂತಹ ನಿರ್ಧಾರಗಳು ಒಬ್ಬ ಬೌಲರ್‌ನ ಲಯ ಮತ್ತು ಆತ್ಮವಿಶ್ವಾಸವನ್ನು ಸಂಪೂರ್ಣವಾಗಿ ಕುಗ್ಗಿಸುತ್ತವೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.