ಚಾಂಪಿಯನ್ ರಜತ್ ಪಾಟೀದಾರ್‌ಗೆ ನಿರಾಸೆ, ತಂಡದಿಂದ ಹೊರಬಿದ್ದ ಬೆನ್ನಲ್ಲೇ ಆಯುಷ್ ಬದೋನಿಗೆ ಚಾನ್ಸ್

Published : Nov 08, 2026, 03:54 PM IST
Rajat Patidar

ಸಾರಾಂಶ

ಆರ್‌ಸಿಬಿ ಚಾಂಪಿಯನ್ ರಜತ್ ಪಾಟೀದಾರ್ ನಿರಾಸೆ ಅನುಭವಿಸಿದ್ದಾರೆ. ರಜತ್ ಪಾಟೀದಾರ್ ಬದಲು ರಿಂಕು ಸಿಂಗ್‌ಗೆ ಅವಕಾಶ ನೀಡಲಾಗಿದೆ. ಈ ಬೆಳವಣಿಗೆ ಆರ್‌ಸಿಬಿ ಅಭಿಮಾನಿಗಳಿಗೂ ಬೇಸರ ತರಿಸಿದೆ.

ನವದೆಹಲಿ (ನ.08) ರಜತ್ ಪಾಟೀದಾರ್ ಆರ್‌ಸಿಬಿಯ ಚಾಂಪಿಯನ್ ಕ್ರಿಕೆಟಿಗ. ಸತತ ಎರಡು ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ. ಆರ್‌ಸಿಬಿ ನಾಯಕನಾಗಿ, ಬ್ಯಾಟರ್ ಆಗಿ ನೀಡಿದ ಅದ್ಭುತ ಪ್ರದರ್ಶನದಿಂದ ರಜತ್ ಪಾಟೀದಾರ್ ಭಾರತ ಎ ತಂಡಕ್ಕೂ ಆಯ್ಕೆಯಾಗಿದ್ದಾರೆ. ಮುಂಬರುವ ರೈಸಿಂಗ್ ಏಷ್ಯಾಕಪ್ ಟೂರ್ನಿಗೂ ಮುನ್ನ ಇಂಜುರಿ ಸಮಸ್ಯೆ ಕಾಡಿದೆ. ಭಾರತ ಎ ತಂಡದಲ್ಲಿ ಉಪ ನಾಯನಾಗಿರಿವು ರಜತ್ ಪಾಟೀದಾರ್ ಇಂಜುರಿ ಕಾರಣದಿಂದ ತಂಡದಿಂದ ಹೊರಬಿದ್ದಿದ್ದಾರೆ.

ರಜತ್ ಪಾಟೀದಾರ್ ಬದಲು ಆಯುಷ್ ಬದೋನಿಗೆ ಚಾನ್ಸ್

ರಜತ್ ಪಾಟೀದಾರ್ ಭಾರತ ಎ ತಂಡದ ಉಪನಾಯಕನ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ರಜತ್ ಪಾಟೀದಾರ್ ಭಾರತ ಎ ತಂಡದಿಂದ ಹೊರಬಿದ್ದಿದ್ದಾರೆ. ರಜತ್ ಪಾಟೀದಾರ್ ಅಲಭ್ಯತೆಯಿಂದ ಈ ಸ್ಥಾನಕ್ಕೆ ಅಗ್ರೆಸ್ಸೀವ್ ಬ್ಯಾಟರ್ ಆಯುಷ್ ಬದೋನಿಗೆ ಚಾನ್ಸ್ ನೀಡಲಾಗಿದೆ.

ಉಪನಾಯಕನಾಗಿ ರಿಂಕು ಸಿಂಗ್

ರೈಸಿಂಗ್ ಸ್ಟಾರ್ಸ್ ಎಷ್ಯಾಕಪ್ ಟೂರ್ನಿಯಲ್ಲಿ ಭಾರತ ಎ ತಂಡದ ಉಪನಾಯಕನಾಗಿದ್ದ ರಜತ್ ಪಾಟೀದಾರ್ ತಂಡದಿಂದ ಹೊರಬಿದ್ದ ಕಾರಣ ಇದೀಗ ಉಪನಾಯಕನ ಜವಾಬ್ದಾರಿಯನ್ನು ರಿಂಕು ಸಿಂಗ್‌ಗೆ ನೀಡಲಾಗಿದೆ. ಈ ಕುರಿತು ಬಿಸಿಸಿಐ ಹೊಸ ತಂಡ ಪ್ರಕಟಸಿ, ಜವಾಬ್ದಾರಿ ಹಂಚಿಕೆ ಮಾಡಿದೆ.

ಬಿಸಿಸಿಐಗೆ ಪಾಟೀದಾರ್ ವಿಶೇಷ ಮನವಿ

ರಜತ್ ಪಾಟೀದಾರ್ ತಮ್ಮ ಹಳೇ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಸಂಪೂರ್ಣ ಚೇತರಿಕೆಗೆ ಹಚ್ಚಿನ ಸಮಯ ಬೇಕಿದೆ. ಎಡ ಮೊಣಕಾಲು, ಬೆರಳಿನ ಗಾಯದಿಂದ ಬಳಲುತ್ತಿರುವ ರಜತ್ ಪಾಟೀದಾರ್ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ತನ್ನ ಗಾಯ ಸಂಪೂರ್ಣ ಚೇತರಿಕೆಗೆ ಒತ್ತು ನೀಡಿರುವ ಕಾರಣ ಬಿಸಿಸಿಐ ಬಳಿ ವಿಶೇಷ ಮನವಿ ಮಾಡಿದ್ದಾರೆ. ತನ್ನನ್ನು 50 ಓವರ್‌ಗಳ ಪಂದ್ಯದ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸದಂತೆ ಮನವಿ ಮಾಡಿದ್ದಾರೆ. ಹೆಚ್ಚಿನ ವಿಶ್ರಾಂತಿ ಹಾಗೂ ಸಂಪೂರ್ಣ ಚೇತರಿಕೆಗೆ ಈ ಮನವಿ ಮಾಡಿದ್ದಾರೆ.

ನವೆಂಬರ್ 19 ರಿಂದ ಟೂರ್ನಿ

ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿ ನವೆಂಬರ್ 19 ರಿಂದ ಆರಂಭಗೊಳ್ಳುತ್ತಿದೆ. ತಿಲಕ್ ವರ್ಮಾ ಭಾರತ ಎ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕತಾರ್‌ನಲ್ಲಿ ಟೂರ್ನಿ ಆಯೋಜನೆಗೊಂಡಿದೆ. ಭಾರತ ಬಿ ಗುಂಪಿನಲ್ಲಿದೆ. ಇದೇ ಗುಂಪಿನಲ್ಲಿ ಪಾಕಿಸ್ತಾನ, ನೇಪಾಳ, ಯುಎಇ ತಂಡಗಳಿವೆ. ಹೀಗಾಗಿ ಭಾರತ ಎ ತಂಡ ಬದ್ಧವೈರಿ ಪಾಕಿಸ್ತಾನ ಜೊತೆ ಮುಖಾಮುಖಿಯಾಗಲಿದೆ. ನವೆಂಬರ್ 22ರಂದು ಈ ಪಂದ್ಯ ನಡೆಯಲಿದೆ. ಭಾರತದ ಹೋರಾಟ ನವೆಂಬರ್ 20ಕ್ಕೆ ನೇಪಾಳ ವಿರುದ್ಧ ಆರಂಭಗೊಳ್ಳಲಿದೆ. ಇನ್ನು ಲೀಗ್‌ನ ಕೊನೆಯ ಪಂದ್ಯವನ್ನು ನವೆಂಬರ್ 24ರಂದು ಯುಎಇ ವಿರುದ್ಧ ನಡೆಯಲಿದೆ.

ಭಾರತ ಎ ತಂಡ:

ತಿಲಕ್ ವರ್ಮಾ (ನಾಯಕ), ರಿಂಕು ಸಿಂಗ್ (ಉಪನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಸೂರ್ಯಾಂಶ್ ಶೇಡ್ಗೆ, ಶಹಬಾಜ್ ಅಹ್ಮದ್, ವಿಪ್ರಜ್ ನಿಗಮ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ಅರ್ಷದ್ ಖಾನ್, ಆಯುಷ್ ಬದೋನಿ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪಾಕಿಸ್ತಾನ ಬೌಲರ್‌ಗಳ ಬೆವರಿಳಿಸಿದ 19ರ ಪೋರ! ಅಂಡರ್-19 ಏಷ್ಯಾಕಪ್‌ನಲ್ಲಿ ಶತಕ ಸಿಡಿಸಿ ಮಿಂಚಿದ ಅರ್ಜುನ್ ರಜಪೂತ್!
SMAT ನಿಂದ ಹೊರಬಿದ್ದ ಹಾರ್ದಿಕ್ ಪಾಂಡ್ಯ, ಬೆನ್ನಲ್ಲೇ ಸಹೋದರ ಕೃನಾಲ್‌ಗೆ ದೊಡ್ಡ ಜವಾಬ್ದಾರಿ!