ಮೈಮೇಲಿನ ಚಿನ್ನ ಅಡವಿಟ್ಟು ಮಗನಿಗೆ ಕ್ರಿಕೆಟ್ ಕಿಟ್ ಕೊಡಿಸಿದ ತಾಯಿ..! ಈತನೇ ಈಗ ಟೀಂ ಇಂಡಿಯಾದ ಭರವಸೆ

By Suvarna NewsFirst Published Jan 14, 2024, 11:56 AM IST
Highlights

ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯ ಮೊದಲೆರೆಡು ಪಂದ್ಯಗಳಿಗೆ ಟೀಮ್ ಇಂಡಿಯಾವನ್ನ ಆಯ್ಕೆ ಮಾಡಲಾಗಿದೆ. ಕಮ್​ಬ್ಯಾಕ್ ನಿರೀಕ್ಷೆಯಲ್ಲಿದ್ದ ಟೆಸ್ಟ್​ ಸ್ಪೆಷಲಿಸ್ಟ್‌ಗಳಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ​ ಮತ್ತೆ  ನಿರಾಸೆಯಾಗಿದೆ. T20 ನಂತರ ಟೆಸ್ಟ್​ ತಂಡದಿಂದಲೂ ಇಶಾನ್ ಕಿಶನ್​ಗೆ ಕೊಕ್ ನೀಡಲಾಗಿದೆ. ಆದ್ರೆ, ಇಶಾನ್ ಸ್ಥಾನದಲ್ಲಿ ಯಂಗ್‌ಸ್ಟರ್ ಧೃವ್ ಜುರೆಲ್, ಮೊದಲ ಬಾರಿ ಟೀಂ ಇಂಡಿಯಾಗೆ ಎಂಟ್ರಿ ನೀಡಿದ್ದಾರೆ. 

ಬೆಂಗಳೂರು(ಜ.14): ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಸರಣಿಯಿಂದ ಇಶಾನ್ ಕಿಶನ್​ರನ್ನ ಕೈ ಬಿಡಲಾಗಿದೆ. ರಾಂಚಿ ಬಾಯ್ ಜಾಗದಲ್ಲಿ ಮತ್ತೊಬ್ಬ ಯಂಗ್​ಸ್ಟರ್​ಗೆ ಧೃವ್ ಜುರೆಲ್​ಗೆ ಚಾನ್ಸ್ ನೀಡಲಾಗಿದೆ. ಈ ಧೃವ್ ಜುರೆಲ್ ಯಾರು ಗೊತ್ತಾ..? ಜುರೆಲ್ ಕ್ರಿಕೆಟರ್ ಆಗಿದ್ದು ಹೇಗೆ..? ಮಗನಿಗಾಗಿ ಧೃವ್ ತಾಯಿ ಮಾಡಿದ ತ್ಯಾಗ ಎಂತಹದ್ದು ಗೊತ್ತಾ..? ಅದನ್ನೆಲ್ಲಾ ಹೇಳ್ತೀವಿ, ಈ ಸ್ಟೋರಿ ನೋಡಿ....!!

ಟೀಂ ಇಂಡಿಯಾಗೆ ಎಂಟ್ರಿಕೊಟ್ಟ 22 ವರ್ಷದ ಯಂಗ್‌ಸ್ಟರ್..! 

Latest Videos

ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯ ಮೊದಲೆರೆಡು ಪಂದ್ಯಗಳಿಗೆ ಟೀಮ್ ಇಂಡಿಯಾವನ್ನ ಆಯ್ಕೆ ಮಾಡಲಾಗಿದೆ. ಕಮ್​ಬ್ಯಾಕ್ ನಿರೀಕ್ಷೆಯಲ್ಲಿದ್ದ ಟೆಸ್ಟ್​ ಸ್ಪೆಷಲಿಸ್ಟ್‌ಗಳಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ​ ಮತ್ತೆ  ನಿರಾಸೆಯಾಗಿದೆ. T20 ನಂತರ ಟೆಸ್ಟ್​ ತಂಡದಿಂದಲೂ ಇಶಾನ್ ಕಿಶನ್​ಗೆ ಕೊಕ್ ನೀಡಲಾಗಿದೆ. ಆದ್ರೆ, ಇಶಾನ್ ಸ್ಥಾನದಲ್ಲಿ ಯಂಗ್‌ಸ್ಟರ್ ಧೃವ್ ಜುರೆಲ್, ಮೊದಲ ಬಾರಿ ಟೀಂ ಇಂಡಿಯಾಗೆ ಎಂಟ್ರಿ ನೀಡಿದ್ದಾರೆ. 

Ind vs Afg: ಇಂದೋರ್‌ನಲ್ಲಿಂದು ಭಾರತಕ್ಕೆ ಸರಣಿ ಗೆಲುವಿನ ತವಕ

ಯೆಸ್, ಬ್ಯಾಕಪ್ ವಿಕೆಟ್ ಕೀಪರ್ ಬ್ಯಾಟರ್​ ಆಗಿ ಧೃವ ಜುರೆಲ್‌ಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೆ.ಎಲ್ ರಾಹುಲ್ ಮತ್ತು ಕೆ.ಎಸ್ ಭರತ್​ ಜೊತೆಗೆ ಜುರೆಲ್​ ಕಾಣಿಸಿಕೊಂಡಿದ್ದಾರೆ. ಇದ್ರಿಂದ ಯಾರು ಈ ಧೃವ್​ ಜುರೆಲ್ ಆಂತ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. 22 ವರ್ಷದ ಧೃವ್ ಜುರೆಲ್ ಸ್ವಂತ ಊರು ಉತ್ತರಪ್ರದೇಶದ ಆಗ್ರಾ. ಧೃವ್ ತಂದೆ ನೀಮ್ ಸಿಂಗ್ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ವೀರಯೋಧ. ಮನ ತನ್ನಂತೆ ಮಗನೂ ದೇಶಸೇವೆ ಮಾಡಬೇಕು ಅಂತ ಅವರು ಕನಸು ಕಂಡಿದ್ರು. ಆದ್ರೆ, ಧೃವ್​ಗೆ ಮಾತ್ರ ಚಿಕ್ಕಂದಿನಿಂದಲೇ ಕ್ರಿಕೆಟರ್ ಆಗ್ಬೇಕು ಅನ್ನೋ ಆಸೆ. ಇದರ ಮಧ್ಯೆ ಧೃವ್​​ ಕನಸನ್ನ ನನಸು ಮಾಡಿದ್ದು ಮಾತ್ರ ಅವ್ರ ತಾಯಿ.

ಮಗನಿಗೆ ಕ್ರಿಕೆಟ್ ಕಿಟ್​ ಖರೀದಿಸಲು ದುಡ್ಡು ಇಲ್ಲದೇ ಇದ್ದಾಗ, ತಮ್ಮ ಮೈಮೇಲಿನ ಚಿನ್ನವನ್ನ ಅಡವಿಟ್ಟು ಮಗನಿಗೆ ಕಿಟ್ ಕೊಡಿಸಿದ್ರು. ಅಲ್ಲದೇ, ಗಂಡನನ್ನ ಬಿಟ್ಟು ಮಗನ ಕ್ರಿಕೆಟ್ ಕರಿಯರ್​ಗಾಗಿ ಆಗ್ರಾದಿಂದ ನೋಯ್ಡಾಗೆ ಶಿಫ್ಟ್ ಆದ್ರು. ತಾಯಿಯ ಯಾವ ತ್ಯಾಗವೂ ಹಾಳಾಗಲು ಬಿಡದ ಧೃವ್, ಯುಪಿ ಅಂಡರ್-16, 19 ಕ್ರಿಕೆಟ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಅದರ ಫಲವಾಗಿ ಭಾರತ ಅಂಡರ್- 19 ತಂಡಕ್ಕೆ ಆಯ್ಕೆಯಾದ್ರು. 2020ರ ಅಂಡರ್-19 ವಿಶ್ವಕಪ್‌ನಲ್ಲೂ ತಂಡದ ವೈಸ್ ಕ್ಯಾಪ್ಟನ್ ಆಗಿ ಮಿಂಚಿದ್ರು.

ಸಿಕ್ಕ ಅವಕಾಶಗಳನ್ನ ಬಳಸಿಕೊಳ್ತಿಲ್ವಾ ತಿಲಕ್ ವರ್ಮಾ? ಕೊಹ್ಲಿ ಕಮ್‌ಬ್ಯಾಕ್, ತಿಲಕ್ ಕಿಕೌಟ್..!

ಇನ್ನು 2021ರಲ್ಲಿ ಸೈಯದ್​ ಮುಷ್ತಾಕ್ ಅಲಿ ಟೂರ್ನಿಗಾಗಿ UP ಸೀನಿಯರ್ ತಂಡಕ್ಕೆ ಸೆಲೆಕ್ಟ್​ ಆದ್ರು. ಮೊದಲ ಪಂದ್ಯದಲ್ಲೇ ಪಂಜಾಬ್ ವಿರುದ್ಧ ಸ್ಫೋಟಕ 23 ರನ್ ಸಿಡಿಸಿದ್ರು. ಇನ್ನು 2022ರಲ್ಲಿ ರಣಜಿ ತಂಡಕ್ಕೆ ಪದಾರ್ಪಣೆ, ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲೇ 64 ರನ್ ಸಿಡಿಸಿ ಸೈ ಎನಿಸಿಕೊಂಡ್ರು. UAE ತಂಡದ ವಿರುದ್ಧದ ಪಂದ್ಯದಕ್ಕಾಗಿ ಇಂಡಿಯಾ A ತಂಡಕ್ಕೆ ಆಯ್ಕೆಯಾಗಿದ್ರು. ಆ ಮೂಲಕ ಲಿಸ್ಟ್​ A ಕ್ರಿಕೆಟ್​ಗು ಎಂಟ್ರಿ ನೀಡಿದ್ರು. 

2022ರಲ್ಲಿ ನಡೆದ ಮೆಗಾ ಆಕ್ಷನ್​ನಲ್ಲಿ ಧೃವ್​ 20 ಲಕ್ಷಕ್ಕೆ ರಾಜಸ್ಥಾನ ರಾಯಲ್ಸ್ ತಂಡ ಸೇರಿದ್ರು. ಆದ್ರೆ, ಸೀಸನ್​ಪೂರ್ತಿ ಬೆಂಚ್​ಗೆ ಸೀಮಿತವಾದ್ರು. 2023ರ ಐಪಿಎಲ್​ನಲ್ಲಿ ಮೊದಲ ಬಾರಿ ಫೀಲ್ಡಿಂಗ್​ಗಿಳಿದು, ಮೊದಲ ಪಂದ್ಯದಲ್ಲೇ ಕೇವಲ 15 ಬಾಲ್​ಗಳಲ್ಲಿ 3  ಫೋರ್ 2 ಸಿಕ್ಸರ್​ ಸಹಿತ 32 ರನ್ ಚಚ್ಚಿದ್ರು. ಆ ಮೂಲಕ ತಮ್ಮ ಬ್ಯಾಟಿಂಗ್ ತಾಕತ್ತನ್ನ ಪ್ರೂವ್ ಮಾಡಿದ್ರು. ಟೂರ್ನಿಯಲ್ಲಿ 13 ಪಂದ್ಯಗಳನ್ನಾಡಿದ ಧೃವ್, 6ನೇ ಕ್ರಮಾಂಕದಲ್ಲಿ 172.73ರ ಸ್ಟ್ರೈಕ್​ರೇಟ್​ನಲ್ಲಿ 152 ರನ್ ಕಲೆಹಾಕಿದ್ರು. 

ಮಯಾಂಕ್ ಅಗರ್‌ವಾಲ್ ಭರ್ಜರಿ ಶತಕ: ಪಂಜಾಬ್ ಎದುರು ಕರ್ನಾಟಕ ಬಿಗಿ ಹಿಡಿತ

ಬ್ಯಾಟಿಂಗ್ ಅಷ್ಟೇ ಅಲ್ಲ, ವಿಕೆಟ್​ ಕೀಪಿಂಗ್​ನಲ್ಲೂ ಧೃವ್ ಮಿಂಚಿದ್ದಾರೆ. ಇದ್ರಿಂದ ಆಯ್ಕೆ ಸಮಿ ಇಂಪ್ರೆಸ್​ ಆಗಿ ಇಶಾನ್ ಬದಲಿಗೆ ತಂಡದಲ್ಲಿ ಚಾನ್ಸ್ ನೀಡಿದೆ. ಆದ್ರೆ, ತಂಡಕ್ಕೆ ಎಂಟ್ರಿ ನೀಡಿರೋ ಧೃವ್​ಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಅವಕಾಶ ಸಿಗುತ್ತಾ..? ಒಂದು ವೇಳೆ ಅವಕಾಶ ಸಿಕ್ರೆ ಧೃವ್ ತಮ್ಮ ಸಾಮರ್ಥ್ಯವನ್ನ ಪ್ರೂವ್ ಮಾಡ್ತಾರಾ..? ಅನ್ನೋದನ್ನ ಕಾದು ನೋಡಬೇಕಿದೆ. 

- ಮಹೇಶ್ ಗುರಣ್ಣನವರ್, ಸ್ಪೋರ್ಟ್ಸ್​ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

click me!