
ಚೆನ್ನೈ (ಏ.10): ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂಎಸ್ ಧೋನಿ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ತಂಡದ ನಾಯಕ ರಿತುರಾಜ್ ಗಾಯಕ್ವಾಡ್ ಗಾಯದ ಕಾರಣದಿಂದಾಗಿ ಸಂಪೂರ್ಣವಾಗಿ ಐಪಿಎಲ್‌ನ 18 ನೇ ಸೀಸನ್‌ನಿಂದ ಹೊರಗುಳಿಯಲಿದ್ದು, ಅವರ ಬದಲಿಗೆ ಚೆನ್ನೈ ತಂಡದ ನಾಯಕತ್ವವನ್ನು ಸಂಪೂರ್ಣ ಸೀಸನ್‌ಗೆ ಎಂಎಸ್ ಧೊನಿ ವಹಿಸಿಕೊಳ್ಳಲಿದ್ದಾರೆ ಎಂದು ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಮಾಹಿತಿ ನೀಡಿದ್ದಾರೆ.
ತಂಡದಲ್ಲಿ ಬದಲಿ ಆಯ್ಕೆಗಳು ಕಡಿಮೆ: ಪ್ಲೇಯರ್‌ಗಳ ರಿಪ್ಲೇಸ್‌ಮೆಂಟ್ ವಿಚಾರಕ್ಕೆ ಬರುವುದಾದರೆ, ತಂದಲ್ಲಿ ಬದಲಿ ಆಟಗಾರರು ಬಹಳ ಕಡಿಮೆ. ನಮಗೆ ತಂಡದಲ್ಲಿ ಕೆಲವೇ ಆಯ್ಕೆಗಳಿವೆ. ನಾವು ಇನ್ನೂ ಯಾರನ್ನೂ ನಿರ್ಧರಿಸಿರಲಿಲ್ಲ. ಧೋನಿ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಾಗಿದ್ದರು. ಅದಕ್ಕಾಗಿಯೇ ಅವರ ಹೆಸರನ್ನು ಅಂತಿಮಗೊಳಿಸಲಾಯಿತು ಎಂದಿದ್ದಾರೆ.
100 ಕ್ಕೂ ಹೆಚ್ಚು ಐಪಿಎಲ್ ಪಂದ್ಯ ಗೆದ್ದ ಏಕೈಕ ನಾಯಕ: ಎಂಎಸ್ ಧೋನಿ 2023 ರವರೆಗೆ ಐಪಿಎಲ್ ನಾಯಕತ್ವ ವಹಿಸಿದ ನಂತರ ರುತುರಾಜ್ ಗಾಯಕ್ವಾಡ್ ಅವರಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಈ ಋತುವಿನಲ್ಲಿ, ಅವರು ಕೊನೆಯ ಬಾರಿಗೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಧೋನಿ 226 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದು, 133 ರಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ನಾಯಕತ್ವ ವಹಿಸಿಕೊಂಡು 100 ಕ್ಕೂ ಹೆಚ್ಚು ಐಪಿಎಲ್ ಪಂದ್ಯಗಳನ್ನು ಗೆದ್ದ ಏಕೈಕ ನಾಯಕ ಇವರಾಗಿದ್ದಾರೆ. ಅವರ ನಂತರ, ರೋಹಿತ್ ಶರ್ಮಾ 158 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರು, ಅವರು 87 ಪಂದ್ಯಗಳಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಧೋನಿ ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನು ಆಡಿದ ಆಟಗಾರ: ಧೋನಿ ತಮ್ಮ 18 ವರ್ಷಗಳ ಐಪಿಎಲ್ ವೃತ್ತಿಜೀವನದಲ್ಲಿ 2 ತಂಡಗಳಿಗಾಗಿ 269 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಅವರು ಸುಮಾರು 137 ಸ್ಟ್ರೈಕ್ ರೇಟ್‌ನಲ್ಲಿ 5342 ರನ್ ಗಳಿಸಿದ್ದಾರೆ. ಇದರಲ್ಲಿ ಅವರು 24 ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರ ಹೆಸರಿನಲ್ಲಿ 368 ಬೌಂಡರಿಗಳು ಮತ್ತು 257 ಸಿಕ್ಸರ್‌ಗಳಿವೆ. ಧೋನಿಯ ನಂತರ, ಮುಂಬೈ ಇಂಡಿಯನ್ಸ್‌ನ ರೋಹಿತ್ ಶರ್ಮಾ 260 ಪಂದ್ಯಗಳನ್ನು ಆಡಿದ್ದಾರೆ.
ಡೆಲ್ಲಿ ವಿರುದ್ಧದ ಪಂದ್ಯ ನೋಡಿದ್ದ ಧೋನಿ ಪೋಷಕರು: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕಳೆದ ಪಂದ್ಯದ ಸಮಯದಲ್ಲಿ, ಧೋನಿಯ ಪೋಷಕರು ಸಹ ಮೈದಾನದಲ್ಲಿದ್ದರು. ಇದು ಅವರ ನಿವೃತ್ತಿಯ ಊಹಾಪೋಹವನ್ನು ಹೆಚ್ಚಿಸಿತ್ತು. ಏಕೆಂದರೆ ಧೋನಿಯ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ, ಅವರ ಪೋಷಕರು ಅವರ ಪಂದ್ಯವನ್ನು ವೀಕ್ಷಿಸಲು ಎಂದಿಗೂ ಕ್ರೀಡಾಂಗಣದಲ್ಲಿ ಬಂದು ನೋಡಿರಲಿಲ್ಲ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2023 ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ತಂಡವನ್ನು ಸೋಲಿಸಿದ ನಂತರ ಮೊದಲ ಬಾರಿಗೆ ಧೋನಿ ಸಿಎಸ್‌ಕೆ ನಾಯಕನಾಗಿ ಮರಳಲಿದ್ದಾರೆ. 2024 ರ ಋತುವಿಗೆ ಮುಂಚಿತವಾಗಿ, ಅವರು ನಾಯಕತ್ವದಿಂದ ಕೆಳಗಿಳಿದು ನಾಯಕತ್ವದ ಜವಾಬ್ದಾರಿಗಳನ್ನು ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ಮೂವರನ್ನು ನೆಚ್ಚಿಕೊಂಡಿದೆ; ಅಚ್ಚರಿ ಹೇಳಿಕೆ ಕೊಟ್ಟ ಜಿತೇಶ್ ಶರ್ಮಾ!
27 ವರ್ಷದ ಸಿಎಸ್‌ಕೆ ತಂಡದ ಆಟಗಾರ 2024ರಲ್ಲಿ ಆರ್‌ಸಿಬಿ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಸೋತ ನಂತರ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಗಿದ್ದರು. ಇನ್ನು ರುತುರಾಜ್ ನಾಯಕತ್ವದ ಆರಂಭವು ಈ ಸೀಸನ್‌ನಲ್ಲೂ ಸ್ಮರಣೀಯವಾಗಿರಲಿಲ್ಲ. ಸಿಎಸ್‌ಕೆ ಮೊದಲ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತು ಪಾಯಿಂಟ್ಸ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.
'ನನಗೆ ಸೊಕ್ಕು, ಅಹಂ ಎನ್ನುವುದು ಇಲ್ಲ': ವಿರಾಟ್ ಕೊಹ್ಲಿ ಹೀಗಂದಿದ್ದು ಯಾಕೆ?
ರುತುರಾಜ್‌ಗೆ ಆಗಿದ್ದೇನು: ರುತುರಾಜ್ ಗಾಯಕ್ವಾಡ್‌ಗೆ ಮೊಣಕೈಯಲ್ಲಿ ಹೇರ್‌ಲೈನ್ ಫ್ರಾಕ್ಚರ್ ಆಗಿದ್ದು, ಸಂಪೂರ್ಣ ಸೀಸನ್‌ಗೆ ಅವರು ಅಲಭ್ಯರಾಗಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಟ್ವಿಟರ್ ಪೇಜ್‌ನಲ್ಲಿ ಮಾಹಿತಿ ನೀಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.