ಚಹಾಲ್ ರೂಮರ್ಡ್ ಗರ್ಲ್ ಫ್ರೆಂಡ್‌ RJ ಮಹ್ವಾಶ್ ಯಾರೀಕೆ? ಆದ್ರೆ ಮಾಜಿ ಧನ್ಯಶ್ರೀ ಪತ್ನಿ Xನಲ್ಲಿ ಟ್ರೆಂಡಿಂಗ್!

Published : Mar 09, 2025, 08:49 PM ISTUpdated : Mar 09, 2025, 09:35 PM IST
ಚಹಾಲ್ ರೂಮರ್ಡ್ ಗರ್ಲ್ ಫ್ರೆಂಡ್‌ RJ ಮಹ್ವಾಶ್ ಯಾರೀಕೆ? ಆದ್ರೆ ಮಾಜಿ ಧನ್ಯಶ್ರೀ ಪತ್ನಿ Xನಲ್ಲಿ ಟ್ರೆಂಡಿಂಗ್!

ಸಾರಾಂಶ

ಕ್ರಿಕೆಟಿಗ ಯುಜುವೇಂದ್ರ ಚಹಾಲ್ ದುಬೈನಲ್ಲಿ ಆರ್‌ಜೆ ಮಹ್ವಾಶ್ ಜೊತೆ ಕಾಣಿಸಿಕೊಂಡಿದ್ದು ಹೊಸ ಸಂಬಂಧದ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಈ ಹಿಂದೆ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಾಗ ಡೇಟಿಂಗ್ ವದಂತಿ ಹಬ್ಬಿತ್ತು, ಆದರೆ ಮಹ್ವಾಶ್ ಸ್ನೇಹಿತರೆಂದು ಹೇಳಿದ್ದರು. ಸದ್ಯ ಚಹಾಲ್ ಮಾಜಿ ಪತ್ನಿ ಧನಶ್ರೀ ವರ್ಮಾ ಟ್ರೆಂಡಿಂಗ್‌ನಲ್ಲಿದ್ದಾರೆ. ಮಹ್ವಾಶ್ ದೆಹಲಿಯ ರೇಡಿಯೋ ಜಾಕಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ.  

ಕ್ರಿಕೆಟಿಗ  ಯುಜುವೇಂದ್ರ ಚಹಾಲ್‌ ಈಗ ತಮ್ಮ ಹೊಸ ಸಂಬಂಧಕ್ಕಾಗಿ ಸುದ್ದಿಯಲ್ಲಿದ್ದಾರೆ. ಮಾರ್ಚ್ 9 ರಂದು ದುಬೈನಲ್ಲಿ  ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಫೈನಲ್‌ ನಲ್ಲಿ   ಕ್ರಿಕೆಟ್ ತಾರೆ ಯುಜುವೇಂದ್ರ ಚಹಾಲ್‌ ಯುವತಿಯೊಬ್ಬಳ ಜೊತೆಗೆ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟಿಗನ ಜೊತೆಗಿರುವ ಹುಡುಗಿ ಯಾರೆಂದು ಚರ್ಚೆ ಹುಟ್ಟುಹಾಕಿತು. ಹುಡುಗಿ ಯಾರೆಂದು ನೆಟ್ಟಿಗರು ಜಾಲಾಡಿ ಕೊನೆಗೂ ಜಹಲ್‌ ಜೊತೆಗಿದ್ದ ಹುಡುಗಿ ಯಾರೆಂದು ಗೊತ್ತಾಗಿದೆ.  ತನ್ನ ಸ್ನೇಹಿತೆ ಆರ್‌ಜೆ ಮಹ್ವಾಶ್  ಜೊತೆ ಕುಳಿತು ಚಹಲ್‌ ಅವರು ಇಂಡಿಯಾ ಮತ್ತು ನ್ಯೂಜಿಲೆಂಡ್‌  ನಡುವಿನ ಪದ್ಯ ವೀಕ್ಷಿಸಿದ್ದಾರೆ. 

ಯಾವಾಗ ಸ್ನೇಹಿತೆ ಆರ್‌ ಜೆ ಮಹ್ವಾಶ್  ಜೊತೆಗೆ ಕಾಣಿಸಿಕೊಂಡರೋ ಅಲ್ಲಿಂದ ಸಾಮಾಜಿಕ ಜಾಲತಾಣದಲ್ಲಿ ಚಹಲ್‌ ಮಾಜಿ ಪತ್ನಿ ಧನ್ಯಶ್ರೀ ವರ್ಮಾ ಟ್ರೆಂಡಿಂಗ್‌ ನಲ್ಲಿದ್ದಾರೆ. ಮಾಜಿ ಪತ್ನಿಗಿಂತ ಈಗಿರುವ ಗರ್ಲ್ ಫ್ರೆಂಡ್‌ ತುಂಬಾ ಕ್ಯೂಟ್‌ ಆಗಿದ್ದಾಳೆಂದು ಜನ ಕಮೆಂಟ್‌ ಮಾಡುತ್ತಿದ್ದಾರೆ. 

ದುಬೈನಲ್ಲಿ ನಡೆದ ಭಾರತ vs ನ್ಯೂಜಿಲೆಂಡ್ ಪಂದ್ಯದ ವೇಳೆ ಚಾಹಲ್ ಮತ್ತು ಆರ್‌ಜೆ ಮಹ್ವಾಶ್ ಅವರನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಜನರು ನೋಡಿದರು. ಜೊತೆಗೆ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹುಟ್ಟಿಕೊಂಡಿದೆ. 

ರೋಹಿತ್ ಅಬ್ಬರದ ನಡುವೆ ವಿಕೆಟ್ ಪತನ, ಟ್ರೋಫಿ ಕುರಿತು ಸ್ಫೋಟಕ ಭವಿಷ್ಯ ನುಡಿದ ಕೋಚ್

ಈ ಹಿಂದೆ ಯುಜ್ವೇಂದ್ರ ಚಾಹಲ್ ಅವರ ಹೆಸರು ಆರ್‌ಜೆ ಮಹ್ವಾಶ್ ಜೊತೆ ತಳುಕು ಹಾಕಿಕೊಂಡಿತ್ತು. ಧನಶ್ರೀ ವರ್ಮಾ ಅವರಿಂದ ಚಾಹಲ್ ವಿಚ್ಛೇದನ ಪಡೆದ ಸುದ್ದಿ ಹರಡಿದಾಗ, ಪಾರ್ಟಿಯೊಂದರ ನಂತರ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಆದರೆ ಆ ಸಮಯದಲ್ಲಿ ಮಹ್ವಾಶ್  ಆತ ತನ್ನ ಒಳ್ಳೆಯ ಸ್ನೇಹಿತ ಮಾತ್ರ ಎಂದು ಹೇಳಿದ್ದರು. ಆದರೆ ದುಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ಮತ್ತೊಮ್ಮೆ ಚಾಹಲ್ ಅವರ ಹೊಸ ಸಂಬಂಧದ ಬಗ್ಗೆ ಚರ್ಚೆ ಪ್ರಾರಂಭವಾಗಿರುವುದು ಸುಳ್ಳಲ್ಲ.

ಅರೀಜ್ ಮಹ್ವಾಶ್ ದೆಹಲಿಯ ರೇಡಿಯೋ ಜಾಕಿ. ರೇಡಿಯೋ ಜಾಕಿಯಾಗಿರುವುದರ ಜೊತೆಗೆ, ಅವರು ಸಾಮಾಜಿಕ ಮಾಧ್ಯಮದಲ್ಲಿ  ಇನ್ ಫ್ಲೂಯೆನ್ಸರ್ ಕೂಡ   ಆಗಿದ್ದಾರೆ. ತಮ್ಮ ಉತ್ತಮ ಧ್ವನಿ ಮತ್ತು ಮನರಂಜನಾ ಶೈಲಿಗೆ ಹೆಸರುವಾಸಿಯಾಗಿದ್ದಾರೆ.  ಇನ್‌ಸ್ಟಾಗ್ರಾಮ್‌ನಲ್ಲಿ 1.4 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಮಹ್ವಾಶ್‌ಗೆ ಬಿಗ್ ಬಾಸ್ ಮತ್ತು ನೆಟ್‌ಫ್ಲಿಕ್ಸ್ ಸರಣಿಯಲ್ಲಿ ಕೆಲಸ ಮಾಡುವ ಆಫರ್ ಸಿಕ್ಕಿತು  ಆದರೆ ಕೆಲವು ಕಾರಣಗಳಿಂದ ಅವರು ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎನ್ನುವ ಸುದ್ದಿ ಕೂಡ ಇದೆ.

ಕ್ರಿಸ್‌ಮಸ್ ಸಂದರ್ಭದಲ್ಲಿ ಔತಣಕೂಟದಲ್ಲಿ ಕಾಣಿಸಿಕೊಂಡಾಗ ಯುಜ್ವೇಂದ್ರ ಮತ್ತು ಆರ್‌ಜೆ ಮಹ್ವಾಶ್ ಒಟ್ಟಿಗೆ ಕಾಣಿಸಿಕೊಂಡು  ಸುದ್ದಿಯಾದರು. ಇದಾದ ನಂತರ ಅವರು ಮತ್ತೆ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಇದೇ ಕಾರಣಕ್ಕೆ ಅವರು ಡೇಟಿಂಗ್ ಮಾಡುತ್ತಿರುವ ಸುದ್ದಿ ಹೊರಬಿದ್ದಿತ್ತು.  ಆದರೆ ಮಹ್ವಾಶ್   ನಾವಿಬ್ಬರು ಸ್ನೇಹಿತರು ಎಂದು ಸಾರಾಸಗಟಾಗಿ ತಿರಸ್ಕರಿಸಿದ್ದರು. ಈಗ ಮತ್ತೆ ಜೊತೆಯಲ್ಲೇ ಕಾಣಿಸಿಕೊಂಡು ಟ್ರೆಂಡಿಂಗ್ ನಲ್ಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2025ರಲ್ಲಿ ಬ್ರೇಕ್ ಆದ ಕ್ರಿಕೆಟ್ ಜಗತ್ತಿನ ಅಪರೂಪದ ಟಾಪ್-5 ದಾಖಲೆಗಳಿವು!
IPL 2026 ಟೂರ್ನಿಗೂ ಮೊದಲೇ ಅರೆಸ್ಟ್ ಆಗ್ತಾರಾ ಆರ್‌ಸಿಬಿ ವೇಗಿ ಯಶ್ ದಯಾಳ್‌?