ಶಿಖರ್ ಧವನ್ ಮಗನನ್ನು ಭಾರತಕ್ಕೆ ಕರೆತರಲು ಆಕ್ಷೇಪಿಸಿದ ಆಯೇಷಾಗೆ ಛೀಮಾರಿ ಹಾಕಿದ ಡೆಲ್ಲಿ ಕೋರ್ಟ್‌..!

Published : Jun 08, 2023, 04:49 PM IST
ಶಿಖರ್ ಧವನ್ ಮಗನನ್ನು ಭಾರತಕ್ಕೆ ಕರೆತರಲು ಆಕ್ಷೇಪಿಸಿದ ಆಯೇಷಾಗೆ ಛೀಮಾರಿ ಹಾಕಿದ ಡೆಲ್ಲಿ ಕೋರ್ಟ್‌..!

ಸಾರಾಂಶ

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಶಿಖರ್ ಧವನ್-ಆಯೇಷಾ ಮುಖರ್ಜಿ ಶಾಲಾ ರಜೆ ದಿನದಲ್ಲಿ ಮಗುವನ್ನು ನೋಡುವ ಬಯಕೆ ವ್ಯಕ್ತಪಡಿಸಿದ ಶಿಖರ್ ಧವನ್ ಪೋಷಕರು 2020ರ ಆಗಸ್ಟ್ ತಿಂಗಳಿನಿಂದ ಶಿಖರ್ ಧವನ್ ಮಗನನ್ನು ಕುಟುಂಬಸ್ಥರು ಭೇಟಿಯಾಗಿಲ್ಲ

ನವದೆಹಲಿ(ಜೂ.08): ಟೀಂ ಇಂಡಿಯಾ ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಹಾಗೂ ಆಯೇಷಾ ಮುಖರ್ಜಿ ನಡುವಿನ ದಾಂಪತ್ಯ ಜೀವನದಲ್ಲಿ ಬಿರುಕುಬಿಟ್ಟಿದ್ದರು. ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇದೀಗ ಡೆಲ್ಲಿ ಕೌಟುಂಬಿಕ ನ್ಯಾಯಾಲಯವು ಆಯೇಷಾ ಮುಖರ್ಜಿಗೆ ತಮ್ಮ 9 ವರ್ಷದ ಮಗನನ್ನು ಭಾರತಕ್ಕೆ ಕರೆದುಕೊಂಡು ಬರಲು ಸೂಚನೆ ನೀಡಿದೆ. ಮಗುವಿನ ಮೇಲೆ ಕೇವಲ ತಾಯಿಗೆ ಮಾತ್ರ ಹಕ್ಕಿಲ್ಲ ಎಂದು ತಿಳಿಸಿರುವ ಪಟಿಯಾಲ ಹೌಸ್ ಕೋರ್ಟ್‌, ಶಿಖರ್ ಧವನ್ ಅವರ ಕೌಟುಂಬಿಕ ಕಾರ್ಯಕ್ರಮದ ವೇಳೆ ಅವರ ಮಗನನ್ನು ಭಾರತಕ್ಕೆ ಕರೆದುಕೊಂಡು ಬರಲು ಸೂಚನೆ ನೀಡಿದೆ. ಶಿಖರ್ ಧವನ್ ಹಾಗೂ ಆಯೇಷಾ ಮುಖರ್ಜಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಕಾನೂನು ಪ್ರಕ್ರಿಯೆ ಜಾರಿಯಲ್ಲಿದೆ. ಆಸ್ಟ್ರೇಲಿಯಾದ ನಿವಾಸಿ ಆಯೇಷಾ ಮುಖರ್ಜಿ, ತಮ್ಮ ಮಕ್ಕಳ ಜತೆ ವಿದೇಶದಲ್ಲಿ ವಾಸವಾಗಿದ್ದಾರೆ

ನ್ಯಾಯಮೂರ್ತಿ ಹರೀಶ್ ಕುಮಾರ್ ನೇತೃತ್ವದ ನಾಯಪೀಠವು, ಮಗುವನ್ನು ಭಾರತಕ್ಕೆ ಕರೆ ತರಲು ಆಕ್ಷೇಪ ವ್ಯಕ್ತಪಡಿಸಿದ ಆಯೇಷಾ ಮುಖರ್ಜಿಗೆ ಛೀಮಾರಿ ಹಾಕಿದೆ. ಶಿಖರ್ ಧವನ್ ಕುಟುಂಬಸ್ಥರು 2020ರ ಆಗಸ್ಟ್‌ನಿಂದಲೂ ಧವನ್ ಪುತ್ರನನ್ನು ನೋಡಿಲ್ಲ ಎಂದು ಕೋರ್ಟ್‌ಗೆ ತಿಳಿಸಿದ್ದರು. 

ಈ ಮೊದಲು ಶಿಖರ್ ಧವನ್‌ ಅವರ ಕೌಟುಂಬ ಪುನರ್ಮಿಲನ ಕಾರ್ಯಕ್ರಮವು ಜೂನ್‌ 17ರಂದು ನಿಗದಿಯಾಗಿತ್ತು. ಆದರೆ ಮಗುವಿನ ಶಾಲಾ ರಜೆಗೆ ಅನುಗುಣವಾಗಿ ಈ ಕಾರ್ಯಕ್ರಮವು ಜುಲೈ 01ಕ್ಕೆ ಮುಂದೂಡಲಾಯಿತು. ಆದರೆ ಈ ಹೊಸ ದಿನಾಂಕದ ಕುರಿತಂತೆ ಕುಟುಂಬದ ಸದಸ್ಯರು ನಮ್ಮನ್ನು ಸಂಪರ್ಕಿಸಿಲ್ಲ. ಹೀಗಾಗಿ ಈ ಕಾರ್ಯಕ್ರಮ ಯಶಸ್ವಿಯಾಗುವುದು ಇಲ್ಲ ಎಂದು ಆಯೇಷಾ ಮುಖರ್ಜಿ ಮತ್ತೊಮ್ಮೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಅರ್ಜಿದಾರರು ತಮ್ಮ ಕುಟುಂಬದ ಇತರ ಸದಸ್ಯರನ್ನು ಸಂಪರ್ಕಿಸದಿದ್ದರೂ, ಅದರ ಪರಿಣಾಮ ಏನಾಗಬಹುದು. ಹೆಚ್ಚೆಂದರೆ ಅನೇಕ ಕುಟುಂಬದ ಸದಸ್ಯರು ಈ ಕಾರ್ಯಕ್ರಮಕ್ಕೆ ಬರದೇ ಇರಬಹುದು. ಆದರೆ ಅರ್ಜಿದಾರ ಹಾಗೂ ಅವರ ಕುಟುಂಬದವರು ತನ್ನ ಮಗನನ್ನು ನೋಡಿ ಸಂತೋಷದಿಂದ ಕಣ್ತುಂಬಿಕೊಳ್ಳಬಹುದಲ್ಲವೇ ಎಂದು ವಿವರಿಸಿದೆ. ಅರ್ಜಿದಾರರ ಮಗು 2020ರ ಆಗಸ್ಟ್‌ನಿಂದೀಚೆಗೆ ಭಾರತಕ್ಕೆ ಬಂದಿಲ್ಲ ಎನ್ನುವುದು ನೀವು ಒಪ್ಪಿಕೊಂಡಿದ್ದೀರ. ಹೀಗಾಗಿ ಅರ್ಜಿದಾರರ ಪೋಷಕರು ಹಾಗೂ ಕುಟುಂಬದ ಸದಸ್ಯರು ಮಗುವನ್ನು ಭೇಟಿ ಮಾಡುವ ಅವಕಾಶ ಸಿಕ್ಕಿಲ್ಲ. ಅರ್ಜಿದಾರರ ಅಜ್ಜ  ಹಾಗೂ ಅರ್ಜಿದಾರರ ಕುಟುಂಬಸ್ಥರು ಮಗುವನ್ನು ಭೇಟಿಯಾಗಬೇಕೆಂಬ ಬಯಕೆ ಅಸಮಂಜಸವೆಂದು ಹೇಳಲಾಗುವುದಿಲ್ಲ" ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. 

WTC Final: ಟೆಸ್ಟ್‌ ವಿಶ್ವಕಪ್‌ ಫೈನಲ್‌ಗೆ ಅಶ್ವಿನ್‌ಗಿಲ್ಲ ಸ್ಥಾನ, ಇದ್ಯಾವ ನ್ಯಾಯವೆಂದ ನೆಟ್ಟಿಗರು..!

ಮಗುವು ತನ್ನ ಅಜ್ಜ ಅಜ್ಜಿಯನ್ನು ಭೇಟಿಯಾಗಬೇಕೆಂಬ ಶಿಖರ್ ಧವನ್‌ ಅವರ ಬಯಕೆಯನ್ನು ಪಟಿಯಾಲ ಹೌಸ್ ನ್ಯಾಯಪೀಠವು ಸಮಂಜಸವೆಂದು ಪರಿಗಣಿಸಿದೆ. ಇನ್ನು ಇದೇ ವೇಳೆ ಭಾರತದಲ್ಲಿರುವ ಶಿಖರ್ ಧವನ್ ಅವರ ಮನೆ ಹಾಗೂ ಪೋಷಕರು ಮತ್ತು ಸಂಬಂಧಿಕರೊಂದಿಗೆ ಮಗುವಿನ ಪರಿಚಯವಾಗದಿರಲು ಮುಖರ್ಜಿಯವರು ನೀಡಿದ ಕಾರಣಗಳನ್ನು ನ್ಯಾಯಾದೀಶರು ಪ್ರಶ್ನಿಸಿದರು.

"ಭಾರತದಲ್ಲಿರುವ ಅರ್ಜಿದಾರರ ಮನೆಗೆ ಮತ್ತು ಅವರ ಸಂಬಂಧಿಕರಿಗೆ ಮಗು ಪರಿಚಿತವಾಗಲು ಆಕೆ ಏಕೆ ಬಯಸುವುದಿಲ್ಲ. ಮಗುವಿಗೆ ಶಾಲಾ ರಜೆ ಇರುವ ಸನ್ನಿವೇಶದಲ್ಲಿ ಮಗುವನ್ನು ಭಾರತದಲ್ಲಿ ಕೆಲವು ದಿನಗಳ ಕಾಲ ಅರ್ಜಿದಾರರ ಜತೆಗಿರುವಂತೆ ಬಯಸುವುದು ಸಹಜವಾದದ್ದು. ಮಗುವು ಅರ್ಜಿದಾರರೊಂದಿಗೆ ಆರಾಮದಾಯವಾಗಿರಲಿದೆ ಎಂದಾಗ ಅಡ್ಡಿಪಡಿಸುವುದು ಸರಿಯಲ್ಲವೆಂದು" ಆಯೇಷಾ ಮುಖರ್ಜಿಗೆ ಛೀಮಾರಿ ಹಾಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

U19 ಏಷ್ಯಾಕಪ್, 150 ರನ್‌ಗೆ ಪಾಕಿಸ್ತಾನ ಆಲೌಟ್ ಮಾಡಿದ ಟೀಂ ಇಂಡಿಯಾಗೆ 90 ರನ್ ಗೆಲುವು
ಬೊಂಡಿ ಬೀಚ್ ಗುಂಡಿನ ದಾಳಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಕ್ರಿಕೆಟಿಗ ವಾನ್, ಭಯಾನಕ ಘಟನೆ