ವಂಚನೆ ಪ್ರಕರಣ; ಗೌತಮ್ ಗಂಭೀರ್‌ಗೆ ಕ್ಲಿನ್ ಚಿಟ್ ನೀಡಿದ ದೆಹಲಿ ಕೋರ್ಟ್!

By Suvarna NewsFirst Published Dec 11, 2020, 2:17 PM IST
Highlights

ಮಾಜಿ ಕ್ರಿಟೆಟಿಗ, ದೆಹಲಿ ಬಿಜೆಪಿ ಸಂಸದ ಗೌತಮ್ ಗಂಭೀರ್  ವಂಚನೆ ಆರೋಪಗಳಿಂದ ಮುಕ್ತರಾಗಿದ್ದಾರೆ.  ಫ್ಲಾಟ್ ಖರೀದಿದಾರರಿಗೆ ಮೋಸ ಹಾಗೂ ನಂಬಿಕೆ ದ್ರೋಹ ಆರೋಪ ಎದುರಿಸುತ್ತಿದ್ದ ಗೌತಮ್ ಗಂಭೀರ್‌ ನಿರಾಳರಾಗಿದ್ದಾರೆ.  

ದೆಹಲಿ(ಡಿ.11):  ಫ್ಲಾಟ್ ಖರೀದಿದಾರಿಗೆ ಮೋಸ, ನಂಬಿಕೆ ದ್ರೋಹ ಆರೋಪ ಎದುರಿಸುತ್ತಿದ್ದ ಮಾಜಿ ಕ್ರಿಕೆಟಿಗ, ದೆಹಲಿ ಸಂಸದ ಗೌತಮ್ ಗಂಭೀರ್‌ಗೆ ದೆಹಲಿ ಕೋರ್ಟ್ ಕ್ಲಿನ್ ಚಿಟ್ ನೀಡಿದೆ. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಧರ್ಮೇಂದರ್ ಸಿಂಗ್ ಈ ಮಹತ್ವದ ತೀರ್ಪು ನೀಡಿದ್ದಾರೆ.

ಹಾಟ್‌ ಸೀಟಲ್ಲಿ ಕ್ಯಾಪ್ಟನ್ ಕೊಹ್ಲಿ; ವಿರಾಟ್ ನಾಯಕತ್ವದ ಬಗ್ಗೆ ಅಸಮಾಧಾನ

2011ರಲ್ಲಿ ಘಾಜಿಯಾಬಾದ್ ಇಂದಿರಾಪುರದಲ್ಲಿ ರುದ್ರಾ ಬಿಲ್ಡ್‌ವೆಲ್ ರಿಲಾಯಿಲಿಟಿ ಪ್ರೈವೇಟ್ ಲಿಮಿಟೆಡ್ ಹಾಗೂ ಹೆಚ್‌ಆರ್ ಇನ್‌ಫ್ರಾಸಿಟಿ ಪ್ರೈವೇಟ್ ಲಿಮಿಟೆಡ್ ನಿರ್ಮಾಣದ ಫ್ಲಾಟ್‌ಗೆ ಹಣ ಹೂಡಿಕೆ ಮಾಡಿದವರಿಗೆ  ಫ್ಲಾಟ್ ಸಿಕ್ಕಿಲ್ಲ. ಹೀಗಾಗಿ ಸುಮಾರು 50ಕ್ಕೂ ಹೆಚ್ಚುು ಫ್ಲಾಟ್ ಖರೀದಿದಾರರು ದೂರು ದಾಖಲಿಸಿದ್ದರು.

ಟಿ-20ಗೆ  ರೋಹಿತ್ ನಾಯಕರಾಗದೆ ಇದ್ದರೆ ಭಾರತಕ್ಕೆ ನಷ್ಟ'.

ರುದ್ರಾ ಬಿಲ್ಡ್‌ವೆಲ್ ಹಾಗೂ ಇನ್‌ಫ್ರಾಸಿಟಿ ಯೋಜನೆಗೆ ಕ್ರಿಕೆಟಿಗ ಗೌತಮ್ ಗಂಭೀರ್ ನಿರ್ದೇಶಕ ಹಾಗೂ ರಾಯಭಾರಿ ಆಗಿದ್ದರು.  ಹೀಗಾಗಿ ಗಂಭೀರ್ ಸೇರಿದಂತೆ ಹಲವರ ಮೇಲೆ ವಂಚನೆ ಪ್ರಕರಣ ದಾಖಲಾಗಿತ್ತು.  2013ರಲ್ಲಿ ಫ್ಲಾಟ್ ಹಸ್ತಾಂತರಿಸುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಅವದಿ ಮುಗಿದರೂ ಫ್ಲಾಟ್ ಸಿಗದ ಕಾರಣ ದೂರು ನೀಡಿದ್ದರು.

2014ರ ವರೆಗೆ ಅವಧಿ ಪಡೆದ ಬಿಲ್ಡರ್ ಮಾತು ತಪ್ಪಿದ್ದರು. ಹೀಗಾಗಿ ಪ್ರಕರಣ ಗಂಭೀರ ಸ್ವರೂಪ ಪಡೆದಕೊಂಡಿತ್ತು. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಫ್ಲಾಟ್ ವಂಚನೆ ಪ್ರಕರಣದ ಕುರಿತು ಪೊಲೀಸರು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಇದಲ್ಲಿ ಸ್ಥಳೀಯ ಶಾಸಕರು ಈ ಪ್ರಕರಣದಲ್ಲಿ ಶಾಮೀಲಾಗಿರುವ ಕುರಿತು ಪೊಲೀಸರು ಬೆಳಕು ಚೆಲ್ಲಿದ್ದರು.

ಫ್ಲಾಟ್ ವಂಚನೆ ಪ್ರಕರಣದಲ್ಲಿ ಗೌತಮ್ ಗಂಭೀರ್ ಪಾತ್ರವಿಲ್ಲ ಎಂದು ದೆಹಲಿ ಮ್ಯಾಜಿಸ್ಟ್ರೇಟ್ ಹೇಳಿದೆ. ಇನ್ನು ಈ ಪ್ರಕರಣ ವ್ಯಾಪ್ತಿಹೊಂದಿರುವ ನ್ಯಾಯಾಲಯಕ್ಕೆ ವಂಚನೆ ಪ್ರಕರಣವನ್ನು ವರ್ಗಾಯಿಸಲಾಗಿದೆ.
 

click me!