
ಹೋಬಾರ್ಟ್(ಡಿ.11): ಟಿ20ಯಿಂದಾಗಿ ಕ್ರಿಕೆಟ್ ಒಂದು ದೊಡ್ಡ ವ್ಯಾಪಾರವಾಗಿ ಬೆಳೆಯುತ್ತಿದೆ. ಹಣ ಸಂಪಾದಿಸಲು ಕ್ರಿಕೆಟ್ ಮಂಡಳಿಗಳು, ಫ್ರಾಂಚೈಸಿಗಳು ಹೊಸ ಯೋಜನೆಗಳನ್ನು ರೂಪಿಸುತ್ತಿರುತ್ತವೆ. ಈ ನಿಟ್ಟಿನಲ್ಲಿ ಕ್ರಿಕೆಟ್ ಆಸ್ಪ್ರೇಲಿಯಾ ಹೊಸ ಪ್ರಯೋಗಕ್ಕೆ ಕೈಹಾಕಿದೆ.
ಗುರುವಾರದಿಂದ ಆರಂಭಗೊಂಡ ಬಿಗ್‌ಬ್ಯಾಶ್ ಲೀಗ್ ಟಿ20 ಟೂರ್ನಿಯಲ್ಲಿ ಅಂಪೈರ್‌ಗಳ ಜೆರ್ಸಿಯ ಕಂಕಳು ಭಾಗಕ್ಕೂ ಪ್ರಾಯೋಜಕತ್ವ ತಂದಿದೆ. ಬಾಡಿಸ್ಪ್ರೇ ಬ್ರ್ಯಾಂಡ್ ರೆಕ್ಸೋನಾದ ಚಿಹ್ನೆಯನ್ನು ಜೆರ್ಸಿಯ ಕಂಕಳು ಭಾಗದಲ್ಲಿ ಹಾಕುವ ಮೂಲಕ ಉತ್ಪನ್ನದ ಪ್ರಚಾರ ಕಾರ‍್ಯ ನಡೆಸಲಾಗುತ್ತಿದೆ. ಅಂಪೈರ್‌ಗಳು ಪ್ರತಿ ಬಾರಿ ಕೈ ಎತ್ತಿದಾಗಲೂ ಬ್ರ್ಯಾಂಡ್‌ನ ಚಿಹ್ನೆ ಕಾಣಲಿದೆ. ಈ ಪ್ರಯೋಗದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಚರ್ಚೆ ಆಗುತ್ತಿದೆ.
ಆಫ್ಘನ್ ಸ್ಟಾರ್ ಸ್ಪಿನ್ನರ್ ಮುಜೀಬ್‌ಗೆ ಕೊರೋನಾ; ಆಸ್ಪತ್ರೆಗೆ ದಾಖಲು..!
10ನೇ ಆವೃತ್ತಿಯ ಬಿಗ್‌ಬ್ಯಾಶ್ ಲೀಗ್‌ನ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹೋಬಾರ್ಟ್ ಹರಿಕೇನ್ಸ್ ಹಾಗೂ ಸಿಡ್ನಿ ಸಿಕ್ಸರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪೀಟರ್ ಹ್ಯಾಂಡ್ಸ್‌ಕಂಬ್ ನೇತೃತ್ವದ ಹೋಬಾರ್ಟ್ ಹರಿಕೇನ್ಸ್ ತಂಡ 16 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.