ಡೆಲ್ಲಿ-ಪಂಜಾಬ್ ಬಿಗ್ ಫೈಟ್: ನಿನ್ನೆಯ ಐಪಿಎಲ್ ಮ್ಯಾಚ್ ಗೆದ್ದಿದ್ದು ಯಾರು?

Published : May 25, 2025, 08:32 AM IST
Team Delhi Capitals (Photo: IPL)

ಸಾರಾಂಶ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 6 ವಿಕೆಟ್‌ಗಳಿಂದ ಸೋಲು ಕಂಡಿದೆ. ಶ್ರೇಯಸ್ ಅಯ್ಯರ್ ಮತ್ತು ಮಾರ್ಕಸ್ ಸ್ಟೋಯಿಸ್ ಅವರ ಅರ್ಧಶತಕಗಳ ಹೊರತಾಗಿಯೂ, ಪಂಜಾಬ್ 206 ರನ್‌ಗಳ ಗುರಿಯನ್ನು ರಕ್ಷಿಸಿಕೊಳ್ಳಲು ವಿಫಲವಾಯಿತು. ಸಮೀರ್ ರಿಜ್ವಿ ಅಜೇಯ 58 ರನ್‌ಗಳ ನೆರವಿನಿಂದ ಡೆಲ್ಲಿ ಗೆಲುವು ಸಾಧಿಸಿತು.

ಜೈಪುರ: ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ರೇಸ್‌ನ ಮಹತ್ವದ ಪಂದ್ಯದಲ್ಲಿ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್‌ಗೆ 6 ವಿಕೆಟ್ ಸೋಲಿನ ಆಘಾತ ಎದುರಾಗಿದೆ. ಇದರೊಂದಿಗೆ ತಂಡದ ಅಗ್ರಸ್ಥಾನಕ್ಕೇರುವ ಕನಸಿಗೆ ಹಿನ್ನಡೆಯುಂಟಾಗಿದ್ದು, 2ನೇ ಸ್ಥಾನದಲ್ಲೇ ಬಾಕಿಯಾಗಿದೆ. ತಂಡ 13 ಪಂದ್ಯಗಳಲ್ಲಿ 17 ಅಂಕ ಹೊಂದಿದೆ. ಆರ್‌ಸಿಬಿ ಇಷ್ಟೇ ಅಂಕ ಹೊಂದಿದ್ದರೂ, ನೆಟ್ ರನ್‌ ರೇಟ್ ಕಡಿಮೆಯಿರುವ ಕಾರಣ 3ನೇ ಸ್ಥಾನದಲ್ಲಿದೆ. ಡೆಲ್ಲಿ 7 ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿತು.

ಮೊದಲು ಬ್ಯಾಟ್ ಮಾಡಿದ ಪಂಜಾಬ್ 8 ವಿಕೆಟ್ ಗೆ 206 ರನ್ ಕಲೆಹಾಕಿತು. ಸ್ಫೋಟಕ ಆಟವಾಡಿದ ಶ್ರೇಯಸ್ ಅಯ್ಯರ್ 34 ಎಸೆತಗಳಲ್ಲಿ 53 ರನ್ ಸಿಡಿಸಿದರೆ, ಕೊನೆಯಲ್ಲಿ ಆರ್ಭಟಿಸಿದ ಮಾರ್ಕಸ್ ಸ್ಟೋಯಿಸ್ ಕೇವಲ 16 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್‌ನೊಂದಿಗೆ 44 ರನ್ ಚಚ್ಚಿದರು. ಉಳಿದಂತೆ ಜೋಶ್ ಇಂಗ್ಲಿಸ್ 12 ಎಸೆತಕ್ಕೆ 32, ಪ್ರಬ್‌ಸಿಮ್ರನ್ ಸಿಂಗ್ 28 ರನ್ ಕೊಡುಗೆ ನೀಡಿದರು.

ದೊಡ್ಡ ಗುರಿ ಬೆನ್ನತ್ತಿದ ಡೆಲ್ಲಿ 19.3 ಓವರ್‌ಗಳಲ್ಲೇ ಗೆಲುವಿನ ದಡ ಸೇರಿತು. ಸಮೀರ್ ರಿಜ್ಜಿ ಚೊಚ್ಚಲ ಐಪಿಎಲ್ ಅರ್ಧಶತಕ ಡೆಲ್ಲಿಗೆ ಗೆಲುವು ತಂದುಕೊಟ್ಟಿತು. ಕೆ.ಎಲ್.ರಾಹುಲ್ 35, ಡು ಪ್ಲೆಸಿ 33, ಸೆದಿಕುಲ್ಲಾ ಅತಲ್ 22 ರನ್ ಗಳಿಸಿ ಔಟಾದರು. ಬಳಿಕ ಕರುಣ್ ನಾಯರ್ 27 ಎಸೆತಗಳಲ್ಲಿ 44 ರನ್ ಸಿಡಿಸಿ ನಿರ್ಗಮಿಸಿ ದರೆ, ಕೊನೆಯಲ್ಲಿ ಪಂಜಾಬ್‌ ಬೌಲರ್‌ಗಳ ಬೆವರಿಳಿಸಿದ ರಿಜ್ಜಿ 25 ಎಸೆತಕ್ಕೆ 3 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ ಔಟಾಗದೆ 58 ರನ್ ಬಾರಿಸಿ ತಂಡವನ್ನು ಗೆಲ್ಲಿಸಿದರು.

ಪ್ಲೇಆಫ್‌ನ 3 ತಂಡಗಳಿಗೆ ಸತತ 3ನೇ ದಿನ ಸೋಲು

ಈ ಬಾರಿ ಪ್ಲೇ-ಆಫ್ ಪ್ರವೇಶಿಸಿದ 3 ತಂಡಗಳಿಗೆ ಕಳೆದ 3 ದಿನಗಳಲ್ಲಿ ಸತತ ಸೋಲು ಎದುರಾಗಿವೆ. ಮೂರರಲ್ಲೂ ಪ್ಲೇ-ಆಫ್ ಗೇರದ ತಂಡಗಳೇ ಗೆದ್ದಿದ್ದು ವಿಶೇಷ. ಗುರುವಾರ ಲಖನ್ ವಿರುದ ಗುಜರಾತ್, ಶುಕ್ರವಾರ ಸನ್‌ರೈಸರ್ಸ್ ವಿರುದ್ದ ಆ‌ರ್‌ಸಿಬಿ, ಶನಿವಾರ ಡೆಲ್ಲಿ ವಿರುದ್ಧ ಪಂಜಾಬ್ ಸೋತಿದೆ.

ಸ್ಕೋರ್: ಪಂಜಾಬ್ 20 ಓವರಲ್ಲಿ 206/8 (ಶ್ರೇಯಸ್‌ 53, ಸ್ಟೋಯಿಸ್ 44, ಮುಸ್ತಾಫಿಜುರ್ 3-33), ಡೆಲ್ಲಿ 19.3 ಓವರಲ್ಲಿ 208/4 (ಸಮೀರ್ 58, ಕರುಣ್ 44, ಹರ್‌ಪ್ರೀತ್ 2-41) ಪಂದ್ಯಶ್ರೇಷ್ಠ: ಸಮೀರ್‌ ರಿಜ್ವಿ

ಗುಜರಾತ್‌ಗೆ ಚೆನ್ನೈ ಸವಾಲು

ಅಹಮದಾಬಾದ್: ಈ ಬಾರಿ ಐಪಿಎಲ್‌ನಲ್ಲಿ ಅಗ್ರ-2ರಲ್ಲಿ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಗುಜರಾತ್ ಟೈಟಾನ್ಸ್, ಭಾನುವಾರ ಮಹತ್ವದ ಪಂದ್ಯದಲ್ಲಿ ಚೆನ್ನೆ ಸವಾಲು ಎದುರಾಗಲಿದೆ. ಗುಜರಾತ್ 13 ಪಂದ್ಯಗಳನ್ನಾಡಿದ್ದು, 9ರಲ್ಲಿ ಗೆದ್ದ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆದ್ದರೆ ತಂಡ ಅಗ್ರ-2 ಸ್ಥಾನ ಭದ್ರಪಡಿಸಿಕೊಳ್ಳಲಿದ್ದು, ಕ್ವಾಲಿಫೈಯರ್ -1ರಲ್ಲಿ ಆಡಲಿದೆ. ಒಂದು ವೇಳೆ ಸೋತರೂ, ಇತರ ತಂಡಗಳ ಫಲಿತಾಂಶ ತನ್ನ ಪರವಾಗಿ ಬಂದರೆ ಅಗ್ರ-2ರಲ್ಲಿ ಸ್ಥಾನ ಪಡೆಯುವ ಅವಕಾಶ ಗುಜರಾತ್‌ಗೆ ಇದೆ. ಮತ್ತೊಂದೆಡೆ ಚೆನ್ನೈ 13 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿದೆ.

ಪಂದ್ಯ: ಮಧ್ಯಾಹ್ನ 3.30ಕ್ಕೆ

ಹೈದ್ರಾಬಾದ್-ಕೆಕೆಆರ್ ಫೈಟ್; ಉಭಯ ತಂಡಕ್ಕೂ ಲೀಗ್‌ನಲ್ಲಿ ಕೊನೆ ಪಂದ್ಯ

ನವದೆಹಲಿ: ಈ ಬಾರಿ ಐಪಿಎಲ್‌ನ ಪ್ಲೇ-ಆಫ್ ರೇಸ್‌ನಿಂದ ಈಗಾಗಲೇ ಹೊರಬಿದ್ದಿರುವ 2 ತಂಡಗಳಾದ ಕೋಲ್ಕತಾ ಹಾಗೂ ಸನ್‌ರೈಸರ್ಸ್ ಹೈದರಾಬಾದ್, ಲೀಗ್ ಹಂತದ ಕೊನೆ ಪಂದ್ಯದಲ್ಲಿ ಭಾನುವಾರ ಸೆಣಸಾಡಲಿವೆ.

ಹಾಲಿ ಚಾಂಪಿಯನ್ ಕೆಕೆಆರ್ 13 ಪಂದ್ಯಗಳನ್ನಾಡಿದ್ದು, 5 ಗೆಲುವು ಸಾಧಿಸಿ 2 ಪಂದ್ಯ ರದ್ದಾಗಿದ್ದರಿಂದ 12 ಅಂಕ ಸಂಪಾದಿಸಿ 7ನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್ 13 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 11 ಅಂಕ ಹೊಂದಿದ್ದು, 8ನೇ ಸ್ಥಾನದಲ್ಲಿದೆ.

ಪಂದ್ಯ: ಸಂಜೆ 7.30ಕ್ಕೆ

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ