ಮೆಡಿಕಲ್ ವಿದ್ಯಾರ್ಥಿನಿಗೆ ಮೋಸ ಆರೋಪ, ಡೆಲ್ಲಿ ಕ್ಯಾಪಿಟಲ್ಸ್ ಸ್ಫೋಟಕ ಬ್ಯಾಟರ್ ಅಭಿಷೇಕ್ ಪೊರೆಲ್‌ಗೆ ಕೋಳ

Published : Aug 11, 2026, 05:10 PM IST
Abishek Porel Controversy

ಸಾರಾಂಶ

2026ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದ ಅಭಿಷೇಕ್ ಪೊರೆಲ್ ಅರೆಸ್ಟ್ ಆಗಿದ್ದಾರೆ. ಹೈಕೋರ್ಟ್ ಸೂಚನೆ ನೀಡುತ್ತಿದ್ದಂತೆ ಪೊಲೀಸರು ಕ್ರಿಕೆಟಿಗನ ಅರೆಸ್ಟ್ ಮಾಡಿದ್ದಾರೆ.

ಹೂಗ್ಲಿ (ಆ.11) ಐಪಿಎಲ್ 2026 ಟೂರ್ನಿಯಲ್ಲಿ ದಿಟ್ಟ ಹೋರಾಟದ ಮೂಲಕ ಗಮನಸೆಳೆದ ಡೆಲ್ಲಿ ಕ್ಯಾಪಿಟಲ್ಸ್ ಸ್ಫೋಟಕ ಬ್ಯಾಟ್ಸ್‌ಮನ್ ಅಭಿಷೇಕ್ ಪೊರೆಲ್ ಸಂಕಷ್ಟ ತೀವ್ರಗೊಂಡಿದೆ. ಪಶ್ಚಿಮ ಬಂಗಾಳ ಪೊಲೀಸರು ಕ್ರಿಕೆಟಿಗನ ಅರೆಸ್ಟ್ ಮಾಡಿದ್ದಾರೆ. ಮೆಡಿಕಲ್ ವಿದ್ಯಾರ್ಥಿನಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಅಭಿಷೇಕ್ ಪೊರೆಲ್ ಬಳಿಕ ವಂಚಿರುವ ಆರೋಪ ಕೇಳಿಬಂದಿತ್ತು. ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದಲ್ಲಿ ಇದೀಗ ಬಂಗಾಳ ಪೊಲೀಸರು ಅಭಿಷೇಕ್ ಪೊರೆಲ್ ಅರೆಸ್ಟ್ ಮಾಡಿದ್ದಾರೆ.

ಆರೆಸ್ಟ್‌ಗೆ ಕೋಲ್ಕತಾ ಹೈಕೋರ್ಟ್ ಆದೇಶ

ಟೀಂ ಇಂಡಿಯಾ ಎ ತಂಡದ ಪರ ಆಡುತ್ತಿರುವ ಅಭಿಷೇಕ್ ಪೊರೆಲ್ ವಿರುದ್ಧ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ದೂರು ದಾಖಳಿಸಿ ಹಲವು ದಿನಗಳೇ ಉರುಳಿದೆ. ಆದರೆ ದೂರು ದಾಖಲಾದ ವೇಳೆ ಅಭಿಷೇಕ್ ಪೊರೆಲ್ ಟೀಂ ಇಂಡಿಯಾ ಎ ತಂಡದ ಜೊತೆ ವಿದೇಶ ಪ್ರವಾಸದಲ್ಲಿದ್ದರು. ಇತ್ತ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.ಈ ಪ್ರಕರಣ ಕುರಿತು ವಿಚಾರಣೆ ನೆಡೆಸಿದ ಕೋಲ್ಕತಾ ಹೈಕೋರ್ಟ್, ಅಭಿಷೇಕ್ ಪೊರೆಲ್ ಬಂಧನಕ್ಕೆ ಆದೇಶ ನೀಡಿತ್ತು. ಇದರಂತೆ ಬಂಗಾಳ ಪೊಲೀಸರು ಅಭಿಷೇಕ್ ಪೊರೆಲ್ ಅರೆಸ್ಟ್ ಮಾಡಿ ವಿಚಾರಣೆ ಆರಂಭಿಸಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಮೆಡಿಕಲ್ ವಿದ್ಯಾರ್ಥಿನಿ ಹಾಗೂ ಅಭಿಷೇಕ್ ಪೊರೆಲ್ ಪರಿಚಯಸ್ಥರಾಗಿದ್ದರು. ಇವರಿಬ್ಬರ ನಡುವೆ ಆತ್ಮೀಯ ಸಂಬಂಧವಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿಗೆ. ಮೆಡಿಕಲ್ ವಿದ್ಯಾರ್ಥಿನಿ ಜೊತೆ ಪ್ರೀತಿಯಲ್ಲಿದ್ದ ಅಭಿಷೇಕ್ ಪೊರೆಲ್ ದೈಹಿಕ ಸಂಬಂಧ ಬೆಳೆಸಿದ್ದಾರೆ.ಆದರೆ ಮದುವೆ ವಿಚಾರ ಎತ್ತುತ್ತಿದ್ದಂತೆ ಅಭಿಷೇಕ್ ಪೊರೆಲ್ ಯುವತಿಯಿಂದ ದೂರವಾಗಿದ್ದಾರೆ. ಗೆಳತಿ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಈ ಕುರಿತು ಇಬ್ಬರಿಗೂ ಜಗಳವಾಗಿದೆ. ಈ ವೇಳೆ ಈ ವಿಚಾರ ಬಹಿರಂಗಪಡಿಸಿದರೆ ಜೀವಕ್ಕೆ ಅಪಾಯ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಯುವತಿ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪಶ್ಚಿಮ ಬಂಗಾಳದ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಅಭಿಷೇಕ್ ಪೊರೆಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದಾರೆ. ಪಶ್ಚಿಮ ಬಂಗಾಳ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಗಮನಸೆಳೆದಿದ್ದರು. 2026ರ ಐಪಿಎಲ್ ಟೂರ್ನಿಯ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದರು. ಅಭಿಷೇಕ್ ಪೊರೆಲ್ ಬಂಧನದಿಂದ ಇದೀಗ ಕ್ರಿಕೆಟ್ ಕರಿಯರ್ ಮೇಲೆ ಅತೀ ದೊಡ್ಡ ಹೊಡೆತ ಬಿದ್ದಿದೆ. ಕ್ರಿಮಿನಲ್ ಕೇಸ್ ದಾಖಲಾಗಿರುವ ಕಾರಣ ಅಭಿಷೇಕ್ ಪೊರೆಲ್ ಈ ಸಮಸ್ಯೆಯಿಂದ ಮುಕ್ತಿಯಾಗಲು ಸುದೀರ್ಘ ದಿನಗಳೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾವಿ ವೈದ್ಯೆಗೆ ಚೀಟಿಂಗ್.. IPL ಸ್ಟಾರ್, ಡೆಲ್ಲಿ ಕ್ಯಾಪಿಟಲ್ಸ್‌ನ ಹೀರೋ ಅರೆಸ್ಟ್‌..!
ಲಂಕಾ ಎದುರಿನ ಮೊದಲ ಟೆಸ್ಟ್‌ನಲ್ಲಿ ಜುರೆಲ್ ಬದಲಿಗೆ ಈತನಿಗೆ ಅವಕಾಶ ಕೊಡಿ: ಮೊಹಮ್ಮದ್ ಕೈಫ್ ಕಿವಿಮಾತು