ಒಂದು ಪಂದ್ಯ ಸೋತಿದ್ದಕ್ಕೆ ಆಕಾಶ ಕಳಚಿ ಬೀಳಲ್ಲ: ಕೊಹ್ಲಿ!

Suvarna News   | Asianet News
Published : Feb 25, 2020, 12:49 PM IST
ಒಂದು ಪಂದ್ಯ ಸೋತಿದ್ದಕ್ಕೆ ಆಕಾಶ ಕಳಚಿ ಬೀಳಲ್ಲ: ಕೊಹ್ಲಿ!

ಸಾರಾಂಶ

ನ್ಯೂಜಿಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳ ಹೀನಾಯ ಸೋಲು ಕಂಡಿತ್ತು. ಟೆಸ್ಟ್ ಪಂದ್ಯದ ಸೋಲಿನ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತುಟಿ ಬಿಚ್ಚಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ

ವೆಲ್ಲಿಂಗ್ಟನ್‌(ಫೆ.25): ನ್ಯೂಜಿಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 10 ವಿಕೆಟ್‌ಗಳಿಂದ ಸೋತಿದ್ದು, ಆಟದ ಒಂದು ಭಾಗವಷ್ಟೇ. ಒಂದು ಪಂದ್ಯ ಸೋತಿದ್ದರಿಂದ ಆಕಾಶ ಕಳಚಿ ಬೀಳುವುದಿಲ್ಲ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಸೋಮವಾರ ಹೇಳಿದರು. 

ಟೀಂ ಇಂಡಿಯಾಗೆ 10 ವಿಕೆಟ್‌ಗಳ ಹೀನಾಯ ಸೋಲು, ಕಿವೀಸ್‌ಗೆ 100ನೇ ಐತಿಹಾಸಿಕ ಟೆಸ್ಟ್ ಗೆಲುವು

ಸೋಲಿನ ಬಳಿಕ ಮಾತನಾಡಿದ ಅವರು, ‘ನಾವು ಸರಿಯಾಗಿ ಆಡಲಿಲ್ಲ ಎಂದು ನಮಗೆ ಗೊತ್ತಿದೆ. ಆದರೆ ಇದನ್ನೇ ದೊಡ್ಡ ವಿಷಯವನ್ನಾಗಿಸಿಕೊಂಡು ಹಲವರು ಟೀಕಿಸುತ್ತಿದ್ದಾರೆ. ಅದಕ್ಕೆ ನಾವೇನೂ ಮಾಡಲು ಸಾಧ್ಯವಿಲ್ಲ. ಒಂದು ಪಂದ್ಯ ಸೋತರೆ ಆಕಾಶ ಕಳಚಿ ಬೀಳುವುದಿಲ್ಲ. ಕೆಲವರಿಗೆ ಇದೇ ಕೊನೆ ಎನಿಸಿರುತ್ತದೆ. ಆದರೆ ನಮಗಲ್ಲ. ಒಂದು ಪಂದ್ಯವನ್ನು ಸೋತಿದ್ದೇವೆ ಅಷ್ಟೇ. ಸೋಲನ್ನು ಒಪ್ಪಿಕೊಂಡು ತಲೆ ಎತ್ತಿ ಮುನ್ನಡೆಯಬೇಕು’ ಎಂದರು. ‘ಎಲ್ಲೇ ಆಡಿದರೂ ಗೆಲ್ಲಬೇಕು ಎಂದರೆ ಉತ್ತಮ ಆಟವಾಡಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೂ ಸುಲಭವಲ್ಲ. ಪ್ರತಿ ತಂಡವೂ ಎದುರಾಳಿಯನ್ನು ಸೋಲಿಸಲೆಂದೇ ಆಡುತ್ತದೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು’ ಎಂದು ಕೊಹ್ಲಿ ಹೇಳಿದರು.

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾದಾಗಿನಿಂದ ಟೀಂ ಇಂಡಿಯಾ ಸತತ 7 ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ಟೀಂ ಇಂಡಿಯಾಗೆ, ಕೇನ್ ವಿಲಿಯಮ್ಸನ್‌ ಪಡೆ ಶಾಕ್ ನೀಡಿತ್ತು.  ಇದೀಗ ಸರಣಿ ಸಮಬಲ ಸಾಧಿಸಬೇಕಿದ್ದರೆ, ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಎರಡನೇ ಪಂದ್ಯ ಫೆಬ್ರವರಿ 29ರಿಂದ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುಲ್ದೀಪ್-ಪ್ರಸಿದ್ದ್ ಮಾರಕ ದಾಳಿ; ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಗುರಿ
Ind vs SA: ಶುಭ್‌ಮನ್ ಗಿಲ್ ಫುಲ್ ಫಿಟ್; ಈ ಡೇಟ್‌ಗೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡೋದು ಫಿಕ್ಸ್!