ಸಚಿನ್‌ ತೆಂಡುಲ್ಕರ್ ಬಳಿಕ ವಿರಾಟ್‌ ಕೊಹ್ಲಿಗೂ ತಟ್ಟಿದ ಡೀಪ್‌ ಫೇಕ್‌ ಬಿಸಿ! ಆ ವಿಡಿಯೋ ಅವರದ್ದಲ್ಲ..!

Published : Feb 21, 2024, 10:56 AM ISTUpdated : Feb 21, 2024, 10:59 AM IST
ಸಚಿನ್‌ ತೆಂಡುಲ್ಕರ್ ಬಳಿಕ ವಿರಾಟ್‌ ಕೊಹ್ಲಿಗೂ ತಟ್ಟಿದ ಡೀಪ್‌ ಫೇಕ್‌ ಬಿಸಿ! ಆ ವಿಡಿಯೋ ಅವರದ್ದಲ್ಲ..!

ಸಾರಾಂಶ

ಕೊಹ್ಲಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿರುವ ದೃಶ್ಯವನ್ನು ಕಿಡಿಗೇಡಿಗಳು ಎಡಿಟ್‌ ಮಾಡಿದ್ದಾರೆ. ಎಐ ತಂತ್ರಜ್ಞಾನದ ಮೂಲಕ ಕೊಹ್ಲಿಯ ಶಬ್ಧವನ್ನು ಬಳಕೆ ಮಾಡಿ ಆ್ಯಪ್‌ನ ಪ್ರಚಾರ ಮಾಡುತ್ತಿರುವಂತೆ ವಿಡಿಯೋ ಹರಿಬಿಟ್ಟಿದ್ದಾರೆ

ನವದೆಹಲಿ(ಫೆ.21): ಹಲವು ತಾರಾ ನಟ-ನಟಿಯರು, ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಫೇಕ್‌ ಬಳಿಕ ಭಾರತ ಕ್ರಿಕೆಟ್‌ ತಂಡದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿಗೂ ಡೀಪ್‌ ಫೇಕ್‌ ಬಿಸಿ ತಟ್ಟಿದೆ. ಕೊಹ್ಲಿ ಅವರು ಬೆಟ್ಟಿಂಗ್‌ ಆ್ಯಪ್‌ ಬಗ್ಗೆ ಪ್ರಚಾರ ಮಾಡುತ್ತಿರುವಂತೆ ಕಾಣುವ ಎಡಿಟೆಡ್‌ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಕೊಹ್ಲಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿರುವ ದೃಶ್ಯವನ್ನು ಕಿಡಿಗೇಡಿಗಳು ಎಡಿಟ್‌ ಮಾಡಿದ್ದಾರೆ. ಎಐ ತಂತ್ರಜ್ಞಾನದ ಮೂಲಕ ಕೊಹ್ಲಿಯ ಶಬ್ಧವನ್ನು ಬಳಕೆ ಮಾಡಿ ಆ್ಯಪ್‌ನ ಪ್ರಚಾರ ಮಾಡುತ್ತಿರುವಂತೆ ವಿಡಿಯೋ ಹರಿಬಿಟ್ಟಿದ್ದಾರೆ. ಕಡಿಮೆ ಹಣ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಗಳಿಸುವ ತಂತ್ರಗಳನ್ನು ವಿರಾಟ್‌ ಕೊಹ್ಲಿ ಹೇಳುವ ರೀತಿ ವಿಡಿಯೋದಲ್ಲಿ ತೋರಿಸಲಾಗಿದೆ. ಅಲ್ಲದೆ ಸುದ್ದಿ ಮಾಧ್ಯಮ ನಿರೂಪಕಿಯೊಬ್ಬರ ಶಬ್ಧವನ್ನೂ ಎಡಿಟ್‌ ಮಾಡಿದ್ದಾರೆ.

Ranchi Test: ಭಾರತ ತಂಡ ಪ್ರಕಟ, ಇಬ್ಬರು ಸ್ಟಾರ್ ಕ್ರಿಕೆಟಿಗರು ಔಟ್..!

ಈ ಮೊದಲು ಸಚಿನ್‌ ತೆಂಡುಲ್ಕರ್ ಅವರು ಕೂಡಾ ಬೆಟ್ಟಿಂಗ್‌ ಆ್ಯಪ್‌ ಬಗ್ಗೆ ಪ್ರಚಾರ ಮಾಡುವ ರೀತಿ ವಿಡಿಯೋ ಹರಿಬಿಡಲಾಗಿತ್ತು. ಬಳಿಕ ತಂತ್ರಜ್ಞಾನದ ದುರ್ಬಳಕೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದ ಸಚಿನ್‌, ಡೀಪ್‌ ಫೇಕ್‌ ಹಾಗೂ ತಪ್ಪು ಮಾಹಿತಿ ಹರಡುವಿಕೆಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದರು.

ಎರಡನೇ ಮಗುವಿಗೆ ತಂದೆಯಾದ ಕೊಹ್ಲಿ

ನವದೆಹಲಿ: ಭಾರತದ ತಾರಾ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರ ಪತ್ನಿ, ಖ್ಯಾತ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ವಿರಾಟ್‌ ಕೊಹ್ಲಿ ಮಂಗಳವಾರ ಸಾಮಾಜಿಕ ತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ಫೆ.15ರಂದು ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಅಕಾಯ್‌ ಎಂದು ನಾಮಕರಣ ಮಾಡಿದ್ದಾಗಿ ತಿಳಿಸಿದ್ದಾರೆ. 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಕೊಹ್ಲಿ-ಅನುಷ್ಕಾ ದಂಪತಿಗೆ ಈಗಾಗಲೇ ವಾಮಿಕಾ ಹೆಸರಿನ ಹೆಣ್ಣು ಮಗುವಿದೆ.

IPL 2024 ಆರಂಭ ಯಾವಾಗ..? ಇಲ್ಲಿದೆ ನೋಡಿ ಐಪಿಎಲ್ ಚೇರ್‌ಮನ್ ಕೊಟ್ಟ ಅಧಿಕೃತ ಅಪ್‌ಡೇಟ್

ಸದ್ಯ ಕೊಹ್ಲಿ-ಅನುಷ್ಕಾ ಲಂಡನ್‌ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಕೊಹ್ಲಿ ವೈಯಕ್ತಿಕ ಕಾರಣ ನೀಡಿ ಇಂಗ್ಲೆಂಡ್‌ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಅನುಷ್ಕಾ ಗರ್ಭಿಣಿಯಾಗಿರುವ ಕಾರಣ ಕೊಹ್ಲಿ ಸರಣಿಯಲ್ಲಿ ಆಡುತ್ತಿಲ್ಲ ಎಂದು ವರದಿಯಾಗಿತ್ತು.

ವಿಮಾನದಲ್ಲಿ ಬಾಟಲಿ ಜತೆ ಮಯಾಂಕ್‌ ಸೆಲ್ಫಿ!

ಹುಬ್ಬಳ್ಳಿ: ಇತ್ತೀಚೆಗಷ್ಟೇ ವಿಮಾನದಲ್ಲಿ ದ್ರವ ಪದಾರ್ಥ ಕುಡಿದು ಅಸ್ವಸ್ಥಗೊಂಡಿದ್ದ ಕರ್ನಾಟಕ ಕ್ರಿಕೆಟಿಗ ಮಯಾಂಕ್​ ಅಗರ್‌ವಾಲ್ ಈ ಬಾರಿ ವಿಮಾನ ಪ್ರಯಾಣಕ್ಕೆ ಸ್ವಂತ ನೀರಿನ ಬಾಟಲಿ ಕೊಂಡೊಯ್ದಿದ್ದಾರೆ. ಜೊತೆಗೆ ಬಾಟಲಿ ಜೊತೆ ಸೆಲ್ಫಿಯನ್ನೂ ತೆಗೆದು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದು, ಮತ್ತೊಮ್ಮೆ ಕಷ್ಟ ಆಗುವುದು ಬೇಡ ಎಂದು ಬರೆದುಕೊಂಡಿದ್ದಾರೆ. ತ್ರಿಪುರಾ ವಿರುದ್ಧ ಪಂದ್ಯದ ಬಳಿಕ ಸೂರತ್‌ಗೆ ತೆರಳುತ್ತಿದ್ದಾಗ ವಿಮಾನದಲ್ಲಿ ದ್ರವ ಪದಾರ್ಧ ಸೇವಿಸಿದ್ದರಿಂದ ಮಯಾಂಕ್‌ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?