
ಮುಂಬೈ(ಜ.14): ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಫೋಟಕ ಆರಂಭಿಕ ಡೇವಿಡ್ ವಾರ್ನರ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ನಿರಾಯಾಸವಾಗಿ ಗೆಲುವಿನತ್ತ ಹೆಜ್ಜೆ ಹಾಕಿದರೆ, ಭಾರತ ಹೀನಾಯ ಸೋಲಿನತ್ತ ವಾಲಿದೆ. ಮೊದಲ ಏಕದಿನ ಪಂದ್ಯದಲ್ಲೇ ಭಾರತದ ಕಳಪೆ ಪ್ರದರ್ಶನ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ: ಕೊಹ್ಲಿ ಟೀಕಿಸಿದ ಫ್ಯಾನ್ಸ್!.
ಡೇವಿಡ್ ವಾರ್ನರ್ ಬೌಂಡರಿ ಮೂಲಕ ಸೆಂಚುರಿ ಪೂರೈಸಿದರು. ವಾರ್ನರ್ ಶತಕದಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡಿತ್ತು. ಏಕದಿನದಲ್ಲಿ 18ನೇ ಶತಕ ಸಿಡಿಸಿದ ವಾರ್ನರ್ ಭಾರತ ಗೆಲುವಿನ ಆಸೆಗೆ ತಣ್ಣೀರೆರಚಿದರು. ವಾರ್ನರ್‌ಗೆ ಫಿಂಚ್ ಉತ್ತಮ ಸಾಥ್ ನೀಡಿದರು. ಆರಂಭಿಕರಿಬ್ಬರು 200 ರನ್ ಜೊತೆಯಾಟ ಆಡೋ ಮೂಲಕ ದಾಖಲೆ ಬರೆದರು.
ಟೀಂ ಇಂಡಿಯಾ ವಿಕೆಟ್ ಕಬಳಿಸಲು ಹಲವು ಪ್ರಯತ್ನ ನಡೆಸಿತು. ಇದ್ದ ರಿವ್ಯೂವ್ ಕೂಡ ಕಳೆದುಕೊಂಡಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಆಸೀಸ್ ತಂಡದ ಅಬ್ಬರಕ್ಕೆ ಭಾರತದ ಬಳಿ ಉತ್ತರ ಇರಲಿಲ್ಲ. ಹೊಸ ವರ್ಷದ ಮೊದಲ ಏಕದಿನ ಸರಣಿ ಭಾರತದ ಪಾಲಿಗೆ ಕಠಿಣವಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.