ಅಮೂಲ್ಯ ವಸ್ತು ಕಳೆದುಕೊಂಡ ಡೇವಿಡ್ ವಾರ್ನರ್: ಕೈಮುಗಿದ ಕಳ್ಳನಿಗೆ ಬೇಡಿಕೊಂಡ ಆಸೀಸ್ ಓಪನರ್

By Naveen Kodase  |  First Published Jan 2, 2024, 12:37 PM IST

ಡೇವಿಡ್ ಈ ಕುರಿತಂತೆ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಆ ಬ್ಯಾಗಿ ಗ್ರೀನ್ ಕ್ಯಾಪ್‌ನ ಜತೆಗಿರುವ ಭಾವನಾತ್ಮಕ ಸಂಬಂಧವನ್ನು ಮೆಲುಕು ಹಾಕಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್‌ ತಂಡಕ್ಕೆ ಪಾದಾರ್ಪಣೆ ಮಾಡುವ ವೇಳೆ ಈ ಪ್ರತಿಷ್ಠಿತ ಬ್ಯಾಗಿ ಗ್ರೀನ್ ಕ್ಯಾಪ್‌ ಅನ್ನು ಆಟಗಾರನಿಗೆ ನೀಡುವ ಮೂಲಕ ಟೆಸ್ಟ್ ತಂಡಕ್ಕೆ ಸ್ವಾಗತಿಸಲಾಗುತ್ತದೆ.


ಸಿಡ್ನಿ(ಜ.02): ಆಸ್ಟ್ರೇಲಿಯಾದ ದಿಗ್ಗಜ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್, ಇದೀಗ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಹೀಗಿರುವಾಗಲೇ ವಾರ್ನರ್, ತಮ್ಮ ಪಾಲಿನ ಅಮೂಲ್ಯ ಬ್ಯಾಗಿ ಗ್ರೀನ್ ಕ್ಯಾಪ್ ಕಳೆದುಕೊಂಡಿದ್ದಾರೆ. ಮೆಲ್ಬೊರ್ನ್‌ನಿಂದ ಸಿಡ್ನಿಗೆ ವಿಮಾನದಲ್ಲಿ ಬರುವಾಗ ಅಮೂಲ್ಯ ವಸ್ತುವನ್ನು ಕಳೆದುಕೊಂಡಿದ್ದಾರೆ. 

37 ವರ್ಷದ ಸ್ಪೋಟಕ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಇದೀಗ ತಮ್ಮ 12 ವರ್ಷಗಳ ಸುದೀರ್ಘ ಟೆಸ್ಟ್ ವೃತ್ತಿಬದುಕಿಗೆ ಗುಡ್‌ಬೈ ಹೇಳಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಮೂರನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯವು ಡೇವಿಡ್ ವಾರ್ನರ್ ಪಾಲಿಗೆ ವಿದಾಯದ ಪಂದ್ಯವಾಗಿದೆ. ಜನವರಿ 03ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯವು ವಾರ್ನರ್ ಪಾಲಿನ ಕೊನೆಯ ಟೆಸ್ಟ್ ಪಂದ್ಯ ಎನಿಸಲಿದೆ. ಇದೀಗ ವಾರ್ನರ್ ತಮ್ಮ ಬ್ಯಾಗಿ ಗ್ರೀನ್ ಕ್ಯಾಪ್ ಇರುವ ಬ್ಯಾಗ್ ಕಳೆದುಹೋಗಿರುವ ವಿಚಾರವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

Tap to resize

Latest Videos

ಕೇಪ್‌ಟೌನ್‌ ಟೆಸ್ಟ್‌ನಲ್ಲೂ ಭಾರತೀಯರಿಗೆ ಬೌನ್ಸಿ ಪಿಚ್‌ ಸವಾಲು!

ಡೇವಿಡ್ ಈ ಕುರಿತಂತೆ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಆ ಬ್ಯಾಗಿ ಗ್ರೀನ್ ಕ್ಯಾಪ್‌ನ ಜತೆಗಿರುವ ಭಾವನಾತ್ಮಕ ಸಂಬಂಧವನ್ನು ಮೆಲುಕು ಹಾಕಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್‌ ತಂಡಕ್ಕೆ ಪಾದಾರ್ಪಣೆ ಮಾಡುವ ವೇಳೆ ಈ ಪ್ರತಿಷ್ಠಿತ ಬ್ಯಾಗಿ ಗ್ರೀನ್ ಕ್ಯಾಪ್‌ ಅನ್ನು ಆಟಗಾರನಿಗೆ ನೀಡುವ ಮೂಲಕ ಟೆಸ್ಟ್ ತಂಡಕ್ಕೆ ಸ್ವಾಗತಿಸಲಾಗುತ್ತದೆ. ಬ್ಯಾಗಿ ಗ್ರೀನ್ ಕ್ಯಾಪ್ ಪಡೆಯುವುದು ಆಸೀಸ್ ಆಟಗಾರರಿಗೆ ಹೆಮ್ಮೆಯ ಹಾಗೂ ಪ್ರತಿಷ್ಠೆಯ ವಿಚಾರ ಎಂದೇ ಬಿಂಬಿತವಾಗಿದೆ.

ವಿದಾಯ ಟೆಸ್ಟ್‌ಗೂ ಮುನ್ನ ಏಕದಿನಕ್ಕೆ ಡೇವಿಡ್ ವಾರ್ನರ್‌ ಬೈಬೈ

ವಿಡಿಯೋದಲ್ಲಿ, "ಇದು ನನ್ನ ಕೊನೆಯ ರೆಸಾರ್ಟ್‌, ಆದರೆ ಮೆಲ್ಬರ್ನ್‌ನಿಂದ ಸಿಡ್ನಿಗೆ ಬರುವ ವೇಳೆ ಲಗೇಜ್‌ ಜತೆ ನನ್ನ ಬ್ಯಾಗಿ ಗ್ರೀನ್ ಇದ್ದ ಬ್ಯಾಕ್‌ಪ್ಯಾಕ್ ಮಿಸ್ ಆಗಿದೆ. ನಾನು ಅದನ್ನು ವಾಪಾಸ್ ಪಡೆದು ಕೈಯಲ್ಲಿ ಹಿಡಿದುಕೊಂಡು ಈ ವಾರ ಓಡಾಡಬೇಕು ಎಂದುಕೊಂಡಿದ್ದೇನೆ. ಒಂದು ವೇಳೆ ನಿಮಗೆ ಬ್ಯಾಕ್‌ಪ್ಯಾಕ್ ಬೇಕೇ ಬೇಕು ಎಂದಾದರೆ, ನನ್ನ ಬಳಿ ಅಂತದ್ದು ಇನ್ನೊಂದು ಇದೆ. ಅದನ್ನು ವಾಪಾಸ್ ನೀಡಿದರೆ ನಾನು ನಿಮಗೇನು ತೊಂದರೆ ಮಾಡುವುದಿಲ್ಲ. ಹೀಗಾಗಿ ನನಗಾಗಲಿ ಅಥವಾ ಕ್ರಿಕೆಟ್ ಆಸ್ಟ್ರೇಲಿಗಾಗಲಿ ತಲುಪಿಸಿ. ಒಂದು ವೇಳೆ ನೀವು ಅದನ್ನು ತಲುಪಿಸಿದರೆ ಖಂಡಿತವಾಗಿಯೂ ಈ ಬ್ಯಾಕ್‌ ಪ್ಯಾಕ್ ಖುಷಿಯಿಂದಲೇ ನಿಮಗೆ ನೀಡುತ್ತೇನೆ" ಎಂದು ವಾರ್ನರ್ ಕೈ ಮುಗಿದು ಬೇಡಿಕೊಂಡಿದ್ದಾರೆ. 
 

click me!