ಭಾರತ ವಿರುದ್ಧದ ವಿಶ್ವಕಪ್ ಫೈನಲ್ ನನ್ನ ಕೊನೆ ಏಕದಿನ ಪಂದ್ಯವಾಗಿತ್ತು ಎಂದಿದ್ದಾರೆ. ಆದರೆ 2025ರ ಚಾಂಪಿಯನ್ಸ್ ಟ್ರೋಫಿ(ಏಕದಿನ) ಆಡುವ ಆಯ್ಕೆಯನ್ನು ಮುಕ್ತವಾಗಿರಿಸಿದ್ದು, ತಂಡಕ್ಕೆ ಅಗತ್ಯವಿದ್ದರೆ ಟೂರ್ನಿಯಲ್ಲಿ ಆಡುವುದಾಗಿ ಹೇಳಿದ್ದಾರೆ.
ಸಿಡ್ನಿ: ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಓರ್ವರಾದ ಡೇವಿಡ್ ವಾರ್ನರ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈಗಾಗಲೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಪ್ರಕಟಿಸಿದ್ದ 37ರ ವಾರ್ನರ್, ಜ.3ರಿಂದ ಪಾಕಿಸ್ತಾನ ವಿರುದ್ಧ ಸಿಡ್ನಿಯಲ್ಲಿ ಕೊನೆ ಟೆಸ್ಟ್ ಪಂದ್ಯ ಆಡಲಿದ್ದಾರೆ. ಇದರ ನಡುವೆಯೇ ಸೋಮವಾರ ಏಕದಿನಕ್ಕೆ ಗುಡ್‌ಬೈ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ವಾರ್ನರ್, ಭಾರತ ವಿರುದ್ಧದ ವಿಶ್ವಕಪ್ ಫೈನಲ್ ನನ್ನ ಕೊನೆ ಏಕದಿನ ಪಂದ್ಯವಾಗಿತ್ತು ಎಂದಿದ್ದಾರೆ. ಆದರೆ 2025ರ ಚಾಂಪಿಯನ್ಸ್ ಟ್ರೋಫಿ(ಏಕದಿನ) ಆಡುವ ಆಯ್ಕೆಯನ್ನು ಮುಕ್ತವಾಗಿರಿಸಿದ್ದು, ತಂಡಕ್ಕೆ ಅಗತ್ಯವಿದ್ದರೆ ಟೂರ್ನಿಯಲ್ಲಿ ಆಡುವುದಾಗಿ ಹೇಳಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. ವಾರ್ನರ್ 2009ರಿಂದ 161 ಏಕದಿನ ಪಂದ್ಯಗಳನ್ನಾಡಿದ್ದು, 22 ಶತಕ ಸೇರಿದಂತೆ 6,932 ರನ್ ಕಲೆಹಾಕಿದ್ದಾರೆ.
undefined
ಕಿಂಗ್ ಕೊಹ್ಲಿ ಕಿರೀಟಕ್ಕೆ ಇನ್ನೊಂದು ಗರಿ: ಫುಟ್ಬಾಲ್ ಲೆಜೆಂಡ್ ಸೋಲಿಸಿ 2023ರ ಪ್ಯೂಬಿಟಿ ಅಥ್ಲೀಟ್ ಪ್ರಶಸ್ತಿ!
ವೈಟ್‌ವಾಷ್ ಮುಖಭಂಗ ತಪ್ಪಿಸಿಕೊಳ್ಳುತ್ತಾ ಭಾರತ?
ಮುಂಬೈ: ಮೊದಲೆರಡು ಪಂದ್ಯಗಳ ಸೋಲಿನೊಂದಿಗೆ ಈಗಾಗಲೇ ಏಕದಿನ ಸರಣಿಯನ್ನು ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿರುವ ಭಾರತ ಮಹಿಳಾ ತಂಡ, ಪ್ರವಾಸಿ ತಂಡದ ವಿರುದ್ಧ ಮಂಗಳವಾರ 3ನೇ ಹಾಗೂ ಕೊನೆ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಹರ್ಮನ್‌ಪ್ರೀತ್ ಕೌರ್ ಬಳಗ ವೈಟ್‌ವಾಷ್ ಮುಖಭಂಗದಿಂದ ಪಾರಾಗಲು ಎದುರು ನೋಡುತ್ತಿದ್ದು, ಜೊತೆಗೆ ಆಸೀಸ್ ವಿರುದ್ಧದ ತವರಿನ 9 ಪಂದ್ಯಗಳ ಸೋಲಿನ ಸರಪಳಿಯನ್ನು ಕಳಚುವ ನಿರೀಕ್ಷೆಯಲ್ಲಿದೆ. ಟೆಸ್ಟ್ ಪಂದ್ಯದಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿದ್ದರೂ, ಏಕದಿನ ಸರಣಿಯಲ್ಲಿ ಭಾರತ ನಿರೀಕ್ಷಿತ ಆಟವಾಡಲು ವಿಫಲವಾಗಿದೆ. ರಿಚಾ ಘೋಷ್, ಜೆಮಿಮಾ, ದೀಪ್ತಿ ಶರ್ಮಾ ಮಿಂಚುತ್ತಿದ್ದರೂ, ಸ್ಮೃತಿ ಮಂಧನಾ, ಹರ್ಮನ್‌ಪ್ರೀತ್ ಸಾಧಾರಣ ಆಟ ತಂಡವನ್ನು ಸೋಲಿನತ್ತ ನೂಕುತ್ತಿದೆ.
ಪಂದ್ಯ: ಮಧ್ಯಾಹ್ನ 1.30ಕ್ಕೆ
2ನೇ ಟಿ20: ಅಫ್ಘಾನಿಸ್ತಾನ ವಿರುದ್ಧ ಯುಎಇಗೆ ಗೆಲುವು
ಶಾರ್ಜಾ: ಅಫ್ಘಾನಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಯುಎಇ 11 ರನ್ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಯುಎಇ 20 ಓವರಲ್ಲಿ 7 ವಿಕೆಟ್‌ಗೆ 166 ರನ್ ಕಲೆಹಾಕಿತು. ನಾಯಕ ಮೊಹಮದ್ ವಸೀಂ(53), ಆರ್ಯನ್ ಲಕ್ರಾ(ಔಟಾಗದೆ 63) ಮೊದಲ ವಿಕೆಟ್‌ಗೆ 8.3 ಓವರಲ್ಲಿ 72 ರನ್ ಜೊತೆಯಾಟವಾಡಿದರೂ ಬಳಿಕ ಅಫ್ಘನ್ ಮೇಲುಗೈ ಸಾಧಿಸಿತು. ಆದರೆ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಫ್ಘನ್, 19.5 ಓವರ್‌ಗಳಲ್ಲಿ 155ಕ್ಕೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಮೊಹಮದ್ ನಬಿ(27 ಎಸೆತಗಳಲ್ಲಿ 47) ತಂಡಕ್ಕೆ ಗೆಲುವು ತಂದುಕೊಡಲಿಲ್ಲ. ಅಲಿ ನಸೀರ್, ಜವಾದುಲ್ಲಾಹ್ ತಲಾ 4 ವಿಕೆಟ್ ಕಬಳಿಸಿದರು.
ಬೌಲಿಂಗ್ ಮಾಡುತ್ತಲೇ ಯುವ ಕ್ರಿಕೆಟಿಗನಿಗೆ ಹೃದಯಾಘಾತ, ಮೈದಾನದಲ್ಲಿ ಕುಸಿದು ಬಿದ್ದು ಮೃತ!
ಬಿಗ್‌ಬ್ಯಾಶ್ ಟಿ20 ಲೀಗ್‌ಗೆ ಭಾರತದ ನಿಕಿಲ್ ಚೌಧರಿ
ಹೋಬರ್ಟ್: ಭಾರತ ಮೂಲದ ಯುವ ಕ್ರಿಕೆಟಿಗ ನಿಕಿಲ್ ಚೌಧರಿ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್ ಟಿ20 ಲೀಗ್‌ಗೆ ಪಾದಾರ್ಪಣೆ ಮಾಡಿದ್ದು, ಲೀಗ್‌ನಲ್ಲಿ ಆಡಿದ 2ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೊದಲು ಉನ್ಮುಕ್ತ್ ಚಾಂದ್ ಕೂಡಾ ಬಿಗ್‌ಬ್ಯಾಶ್‌ನಲ್ಲಿ ಆಡಿದ್ದಾರೆ. ಡಿ.20ರಂದು ಪರ್ಥ್ ಸ್ಕಾಚರ್ಸ್ ವಿರುದ್ಧದ ಪಂದ್ಯದಲ್ಲಿ 27 ವರ್ಷದ ನಿಖಿಲ್ ಹೋಬರ್ಟ್ ಹರಿಕೇನ್ಸ್‌ನ ಆಡುವ ಬಳಗದಲ್ಲಿ ಕಾಣಿಸಿಕೊಂಡರು. ಅವರು ಟೂರ್ನಿಯಲ್ಲಿ ಬ್ಯಾಟಿಂಗ್ ಜೊತೆ ಬೌಲಿಂಗ್‌ನಲ್ಲೂ ಮಿಂಚುತ್ತಿದ್ದಾರೆ. ಡೆಲ್ಲಿಯಲ್ಲಿ ಜನಿಸಿದ್ದ ನಿಕಿಲ್ ಬಳಿಕ ಪಂಜಾಬ್‌ಗೆ ತೆರಳಿ, ಕ್ರಿಕೆಟ್ ಆಡಲು ಆರಂಭಿಸಿದ್ದರು. ರಾಷ್ಟ್ರೀಐ ಟೂರ್ನಿಗಳಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸಿರುವ ಅವರು, 2019ರಲ್ಲಿ ಐಪಿಎಲ್‌ನ ಮುಂಬೈ ಇಂಡಿಯನ್ಸ್ ತಂಡದ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿದ್ದರು. ಅದೇ ವರ್ಷ ಆಸ್ಟ್ರೇಲಿಯಾಕ್ಕೆ ತೆರಳಿ ಅಲ್ಲೇ ನೆಲೆಸಿದ್ದಾರೆ.