IPL ಟೂರ್ನಿಯಲ್ಲಿ ಬೇಡದ ದಾಖಲೆ ಬರೆದ ಎಂ ಎಸ್ ಧೋನಿ..!

Published : May 01, 2023, 05:03 PM ISTUpdated : May 01, 2023, 05:10 PM IST
IPL ಟೂರ್ನಿಯಲ್ಲಿ ಬೇಡದ ದಾಖಲೆ ಬರೆದ ಎಂ ಎಸ್ ಧೋನಿ..!

ಸಾರಾಂಶ

ಪಂಜಾಬ್ ಕಿಂಗ್ಸ್‌ ಎದುರು ರೋಚಕ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ ಎಸ್ ಧೋನಿ ಹೆಸರಿಗೆ ಬೇಡದ ದಾಖಲೆ ಸೇರ್ಪಡೆ 200 ರನ್ ರಕ್ಷಿಸಿಕೊಳ್ಳಲು ವಿಫಲವಾದ ಧೋನಿ ಪಡೆ

ಚೆನ್ನೈ(ಮೇ.01): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲಾರ್ಧ ಮುಕ್ತಯವಾಗಿದ್ದು, ದಿನದಿಂದ ದಿನಕ್ಕೆ ರೋಚಕತೆ ಹೆಚ್ಚುತ್ತಲೇ ಸಾಗುತ್ತಿದೆ. ಇನ್ನು ಐಪಿಎಲ್‌ ಇತಿಹಾಸದಲ್ಲಿ ಯಶಸ್ವಿ ನಾಯಕರಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಮಹೇಂದ್ರ ಸಿಂಗ್ ಧೋನಿ, ಇದೀಗ ಬೇಡದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ 200+ ರನ್ ರಕ್ಷಿಸಿಕೊಳ್ಳಲು ವಿಫಲವಾದ ನಾಯಕ ಎನ್ನುವ ಕುಖ್ಯಾತಿಗೆ ಧೋನಿ ಭಾಜನರಾಗಿದ್ದಾರೆ.

ಹೌದು, ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು ಪಂಜಾಬ್ ಕಿಂಗ್ಸ್‌ ತಂಡವು 4 ವಿಕೆಟ್ ರೋಚಕ ಜಯ ಸಾಧಿಸಿತ್ತು. ಇದರ ಬೆನ್ನಲ್ಲೇ 41 ವರ್ಷದ ಧೋನಿ, ಈ ಕುಖ್ಯಾತಿಗೆ ಪಾತ್ರರಾಗಿದ್ದಾರೆ. 

ಮೊದಲು ಬ್ಯಾಟ್‌ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್‌ 4 ವಿಕೆಟ್‌ಗೆ ಗಳಿ​ಸಿದ್ದು ಭರ್ತಿ 200 ರನ್‌.ಇನ್ನು ಕಠಿಣ ಗುರಿ ಬೆನ್ನತ್ತಿ ಪವ​ರ್‌​-ಪ್ಲೇನಲ್ಲೇ 62 ರನ್‌ ಗಳಿ​ಸಿದ್ದ ಪಂಜಾಬ್‌ ಆ ಬಳಿಕ ನಿಧಾನಗೊಂಡಿತು. ಕೊನೆಯ 5 ಓವರಲ್ಲಿ 72 ರನ್‌ ಅಗ​ತ್ಯ​ವಿ​ತ್ತು. 16ನೇ ಓವ​ರಲ್ಲಿ 24, 17ನೇ ಓವ​ರಲ್ಲಿ 17 ರನ್‌ ದೋಚಿದ್ದರಿಂದ ಪಂದ್ಯ ಚೆನ್ನೈನ ಕೈ ಜಾರಿತು. ಕೊನೆ ಓವ​ರಲ್ಲಿ 9, ಕೊನೆ ಬಾಲ್‌ಗೆ 3 ರನ್‌ ಬೇಕಿ​ದ್ದಾಗ ಸಿಕಂದರ್‌ (13*) ತಂಡ​ವನ್ನು ಗೆಲ್ಲಿ​ಸಿ​ದರು.

IPL 2023 ಪಾನಿಪೂರಿ ಮಾರಾಟದಿಂದ ಐಪಿಎಲ್‌ವರೆಗೆ..! ಶತಕವೀರ ಯಶಸ್ವಿ ಜೈಸ್ವಾಲ್ ಸಾಧನೆಗೆ ಸೆಲ್ಯೂಟ್

ಮತ್ತೆ ಕಾನ್‌ವೇ ಶೋ: ಚೆನ್ನೈ ಆರಂಭಿಕರು ಈ ಪಂದ್ಯ​ದಲ್ಲೂ ಆರ್ಭ​ಟಿ​ಸಿ​ದರು. ಗಾಯ​ಕ್ವಾ​ಡ್‌​(37), ಶಿವಂ ದುಬೆ​(28) ಎಂದಿನ ಆಟ​ವಾ​ಡಿ​ದ​ರೆ, ಕಾನ್‌ವೇ ಔಟಾ​ಗದೆ 52 ಎಸೆ​ತ​ಗ​ಳಲ್ಲಿ 92 ರನ್‌ ಸಿಡಿ​ಸಿ​ದರು. ಕೊನೆ 2 ಎಸೆ​ತ​ಗ​ಳನ್ನು ಸಿಕ್ಸ​ರ್‌​ಗ​ಟ್ಟಿದ ಧೋನಿ ತಂಡ 200 ರನ್‌ ತಲುಪಲು ಕಾರಣರಾದರು.

ಟರ್ನಿಂಗ್‌ ಪಾಯಿಂಟ್‌

ಪಂಜಾ​ಬ್‌ ಗೆಲು​ವಿ​ಗೆ 30 ಎಸೆ​ತ​ದಲ್ಲಿ 72 ರನ್‌ ಬೇಕಿದ್ದಾಗ ದೇಶ​ಪಾಂಡೆ ಎಸೆದ 16ನೇ ಓವ​ರಲ್ಲಿ 24, ಜಡೇಜಾ ಎಸೆದ 17ನೇ ಓವ​ರಲ್ಲಿ 17 ರನ್‌ ದೋಚಿತು. ಇದು ಪಂದ್ಯ ಪಂಜಾಬ್‌ ಪರ ವಾಲು​ವಂತೆ ಮಾಡಿ​ತು.

ಈ ಸೋಲು ಧೋನಿಗೆ ಅಪಖ್ಯಾತಿಯನ್ನು ತಂದಿದ್ದು, ಐಪಿಎಲ್‌ ಇತಿಹಾಸದಲ್ಲಿ ಧೋನಿ ನೇತೃತ್ವದ ತಂಡವು ಮೂರನೇ ಬಾರಿಗೆ 200+ ರನ್ ರಕ್ಷಿಸಿಕೊಳ್ಳಲು ವಿಫಲವಾಯಿತು. ಈ ಮೊದಲು ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್‌ ನಾಯಕರಾಗಿ ತಮ್ಮ ಕ್ರಿಕೆಟ್‌ ಬದುಕಿನಲ್ಲಿ ಎರಡು ಬಾರಿ 200+ ರನ್ ರಕ್ಷಿಸಿಕೊಳ್ಳಲು ವಿಫಲರಾಗಿದ್ದಾರೆ.

ಇನ್ನು 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಧೋನಿ ನೇತೃತ್ವದ ಸಿಎಸ್‌ಕೆ ತಂಡವು 9 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 3 ಸೋಲು ಸಹಿತ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ಕೊನೆ ಓವರಲ್ಲಿ 1000 ರನ್‌: ಧೋನಿ ದಾಖ​ಲೆ

ಚೆನ್ನೈ: ಚೆನ್ನೈ ನಾಯಕ ಎಂ.ಎ​ಸ್‌.​ಧೋನಿ ಟಿ20 ಕ್ರಿಕೆ​ಟ್‌​ನ ಕೊನೆ ಓವ​ರಲ್ಲಿ 1000 ರನ್‌ ಪೂರ್ತಿ​ಗೊ​ಳಿ​ಸಿ​ದ್ದು, ವೆಸ್ಟ್‌​ಇಂಡೀ​ಸ್‌ನ ಕೀರನ್‌ ಪೊಲ್ಲಾರ್ಡ್‌ ಬಳಿಕ ಈ ಸಾಧನೆ ಮಾಡಿದ ಕೇವಲ 2ನೇ ಬ್ಯಾಟರ್‌ ಎನಿ​ಸಿ​ಕೊಂಡಿದ್ದಾರೆ. ಭಾನು​ವಾರ ಪಂಜಾಬ್‌ ವಿರುದ್ಧ ಕೊನೆ 2 ಎಸೆ​ತ​ಗ​ಳಲ್ಲಿ ಸಿಕ್ಸರ್‌ ಸಿಡಿಸಿ ಅವರು ಈ ಮೈಲಿ​ಗಲ್ಲು ಸಾಧಿ​ಸಿ​ದರು. ಐಪಿ​ಎ​ಲ್‌​ನಲ್ಲಿ ಅವರು 20ನೇ ಓವ​ರಲ್ಲಿ 290 ಎಸೆ​ತ​ಗ​ಳಲ್ಲಿ ಎದು​ರಿಸಿ 709 ರನ್‌ ಗಳಿ​ಸಿ​ದ್ದಾರೆ. ಇದ​ರಲ್ಲಿ 59 ಸಿಕ್ಸರ್‌, 49 ಬೌಂಡ​ರಿ​ಗಳು ಒಳ​ಗೊಂಡಿ​ವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?