ಸೌರವ್ ಗಂಗೂಲಿ ನನ್ನ ಮೊದಲ ಹೀರೋ; ಬಾಂಗ್ಲಾ ಕ್ರಿಕೆಟಿಗ ಸೌಮ್ಯ ಸರ್ಕಾರ್!

Suvarna News   | Asianet News
Published : May 11, 2020, 07:22 PM IST
ಸೌರವ್ ಗಂಗೂಲಿ ನನ್ನ ಮೊದಲ ಹೀರೋ; ಬಾಂಗ್ಲಾ ಕ್ರಿಕೆಟಿಗ ಸೌಮ್ಯ ಸರ್ಕಾರ್!

ಸಾರಾಂಶ

ಟೀಂ ಇಂಡಿಯಾ ಅತ್ಯಂತ ಯಶಸ್ವಿ ನಾಯಕ ಸೌರವ್ ಗಂಗೂಲಿ ಹಲವರಿಗೆ ರೋಲ್ ಮಾಡೆಲ್. ಗಂಗೂಲಿ ರೀತಿ ಬ್ಯಾಟಿಂಗ್ ಮಾಡಬೇಕು, ಸಿಕ್ಸರ್ ಸಿಡಿಸಬೇಕು, ತಂಡವನ್ನು ಮುನ್ನಡೆಸಬೇಕು ಅನ್ನೋದು ಹಲವರ ಕನಸು. ಹೀಗೆ ಗಂಗೂಲಿಯನ್ನು ಹೀರೋ ಆಗಿ ಸ್ವೀಕರಿಸಿದ ಸೌಮ್ಯ ಸರ್ಕಾರ್, ಇದೀಗ ಬಾಂಗ್ಲಾದೇಶದ ಜ್ಯೂನಿಯರ್ ಗಂಗೂಲಿ ಎಂದೇ ಗುರುತಿಸಿಕೊಂಡಿದ್ದಾರೆ.

ಢಾಕ(ಮೇ.11): ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್‌ಮನ್ ಸೌಮ್ಯ ಸರ್ಕಾರ್‌ ಕ್ರಿಕೆಟ್ ಆರಂಭಿಸವ ಮೊದಲೇ ಟೀಂ ಇಂಡಿಯಾದ ಸೌರವ್ ಗಂಗೂಲಿ ರೋಲ್ ಮಾಡೆಲ್. ಸರ್ಕಾರ್ ಪಾಲಿಗೆ ಗಂಗೂಲಿಯೇ ಹೀರೋ. ಗಂಗೂಲಿ ನೋಡಿ ಕ್ರಿಕೆಟ್ ಆರಂಭಿಸಿದ ಸೌಮ್ಯ ಸರ್ಕಾರ ಇದೀಗ ಬಾಂಗ್ಲಾದೇಶ ತಂಡದ ಆರಂಭಿಕ ಹಾಗೂ ಖಾಯಂ ಸದಸ್ಯನಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಯುವ ಕ್ರಿಕೆಟಿಗರಿಗೆ ಮಹತ್ವದ ಸಲಹೆ ನೀಡಿದ ಯುವರಾಜ್ ಸಿಂಗ್!.

ಬಾಲ್ಯದಿಂದಲೇ ಸೌರವ್ ಗಂಗೂಲಿ ಅಂದರೆ ಎಲ್ಲಿಲ್ಲದ ಪ್ರೀತಿ. ಗಂಗೂಲಿ ರೀತಿ ಸಿಕ್ಸರ್ ಸಿಡಿಸಬೇಕು ಅನ್ನೋ ಬಯಕೆಯಾಗಿತ್ತು. ನನ್ನ ಬ್ಯಾಟಿಂಗ್ ನೋಡಿದ ಸಹೋದರ ಗಂಗೂಲಿ ರೀತಿಯೇ ಆಗುತ್ತಿ ಎಂದಿದ್ದರು. ನಾನು ಎಡಗೈ ಬ್ಯಾಟ್ಸ್‌ಮನ್ ಆಗಿರಲಿಲ್ಲ, ಆದರೆ ಸಹೋದರನ ಸಲಹೆಯಿಂದ ಎಡಗೈ ಬ್ಯಾಟಿಂಗ್ ಅಭ್ಯಾಸ ಮಾಡಿದೆ ಎಂದು ಸೌಮ್ಯ ಸರ್ಕಾರ ಹೇಳಿದ್ದಾರೆ.

ಯುವಿ ಪಾ ಎಂದು ಕರೆದಾಗಲೇ ನಿವೃತ್ತಿಗೆ ಯೋಚಿಸಿದ್ದೆ; ಯುವರಾಜ್ ವಿದಾಯದ ಸೀಕ್ರೆಟ್ ಬಹಿರಂಗ

ಗಂಗೂಲಿ ಬ್ಯಾಟಿಂಗ್‌ನ್ನು ಟಿವಿಯಲ್ಲಿ ನೋಡುತ್ತಿದ್ದೆ. ಅದರಲ್ಲೂ ಭಾರತ-ಪಾಕಿಸ್ತಾನ ಪಂದ್ಯವನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಗಂಗೂಲಿ ಕವರ್ ಡ್ರೈವ್ ಶಾಟ್ ಹಾಗೂ ಸ್ಪಿನ್ನರ್‌ಗಳಿಗೆ ಫ್ರಂಟ್ ಫೂಟ್ ಸಿಕ್ಸರ್ ನನ್ನ ಫೇವರಿಟ್ ಆಗಿತ್ತು. ನಾನು ಅಂಡರ್ 19 ತಂಡಕ್ಕೆ ಆಯ್ಕೆಯಾಗುವಾಗ ಗಂಗೂಲಿ ವಿದಾಯ ಹೇಳಿದ್ದರು. ಈ ವೇಳೆ ನಾನು ಯುವರಾಜ್ ಸಿಂಗ್ ಬ್ಯಾಟಿಂಗ್ ನೋಡಲು ಇಷ್ಟಪಡುತ್ತಿದೆ. ಎದುರಾಳಿಯನ್ನು ಸ್ಫೋಟಕ ಬ್ಯಾಟಿಂಗ್ ಮೂಲಕ ಸರ್ವನಾಶ ಮಾಡುತ್ತಿದ್ದ ಯುವಿ ಬ್ಯಾಟಿಂಗ್ ಹೆಚ್ಚು ಇಷ್ಟಪಡುತ್ತಿದ್ದೆ ಎಂದು ಸರ್ಕಾರ್ ಹೇಳಿದ್ದಾರೆ.

ಯುವಿಯನ್ನು ಭೇಟಿಯಾಗಿ ಮಾತುಕತೆ ನಡೆಸುವ ಅವಕಾಶವೂ ಒದಗಿಬಂದಿತ್ತು. ಈ ವೇಳೆ ಸಂದರ್ಭ ಹೇಗೆ ಇರಬಹುದು. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ಯವಿ ಸಲಹೆ ನೀಡಿದ್ದಾರೆ. ಯುವಿ ರೀತಿ ಬ್ಯಾಟಿಂಗ್ ಮಾಡಬೇಕು. ತಂಡಕ್ಕಾಗಿ ಪಂದ್ಯ ಗೆಲ್ಲಿಸಿಕೊಡಬೇಕು ಎನ್ನುದು ನನ್ನ ಆಸೆ ಎಂದು ಸೌಮ್ಯ ಸರ್ಕಾರ್ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?