ಸ್ಟಿಫನ್ ಫ್ಲೆಮಿಂಗ್ ಜಾಗಕ್ಕೆ ಸರ್‌ಪ್ರೈಸ್ ಎಂಟ್ರಿ? ಸಿಎಸ್‌ಕೆ ಹೊಸ ಕೋಚ್ ಬಗ್ಗೆ ಬಿಗ್ ಹಿಂಟ್ ಕೊಟ್ಟ ರವಿಚಂದ್ರನ್ ಅಶ್ವಿನ್..!

Published : Aug 13, 2026, 12:14 PM IST
Ravichandran Ashwin

ಸಾರಾಂಶ

ಸಿಎಸ್‌ಕೆ ಹೆಡ್ ಕೋಚ್ ಹುದ್ದೆಯಿಂದ ಸ್ಟೀಫನ್ ಫ್ಲೆಮಿಂಗ್ ಕೆಳಗಿಳಿಯುವ ಸಾಧ್ಯತೆಯಿದ್ದು, ಅವರ ಸ್ಥಾನಕ್ಕೆ ಇಯಾನ್ ಮಾರ್ಗನ್ ಬರಬಹುದು ಎಂದು ಆರ್. ಅಶ್ವಿನ್ ಸುಳಿವು ನೀಡಿದ್ದಾರೆ. ಇದೇ ವೇಳೆ, ಮುಂದಿನ ಸೀಸನ್‌ನಲ್ಲಿ ಎಂ.ಎಸ್. ಧೋನಿಯೇ ತಂಡದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆಯ ಬಗ್ಗೆಯೂ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಚೆನ್ನೈ: ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಹೆಡ್ ಕೋಚ್ ಹುದ್ದೆಯಿಂದ ಸ್ಟೀಫನ್ ಫ್ಲೆಮಿಂಗ್ ಕೆಳಗಿಳಿದಿದ್ದಾರೆ. ಅವರ ಜಾಗಕ್ಕೆ ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮಾರ್ಗನ್ ಬರಬಹುದು ಎಂದು ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬಲವಾದ ಸುಳಿವು ನೀಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಶ್ವಿನ್, ಮುಂದಿನ ವಾರದೊಳಗೆ ಮಾರ್ಗನ್ ನೇಮಕದ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಬಹುದು ಎಂದಿದ್ದಾರೆ.

ಸ್ಟಿಫನ್ ಫ್ಲೆಮಿಂಗ್ ಮಾರ್ಗದರ್ಶನದಲ್ಲಿ ಸಿಎಸ್‌ಕೆ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ. ಹೀಗಾಗಿ, ಅವರ ಸ್ಥಾನಕ್ಕೆ ತಕ್ಕನಾದ ವ್ಯಕ್ತಿಯನ್ನು ಹುಡುಕುವುದು ಸುಲಭವಲ್ಲ. ಇಯಾನ್ ಮಾರ್ಗನ್ 2023ರಲ್ಲಿ ಕ್ರಿಕೆಟ್‌ಗೆ ನಿವೃತ್ತಿ ಹೇಳಿ, ಸದ್ಯ ಕಾಮೆಂಟೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕೋಚಿಂಗ್ ಮಾಡಿದ ಅನುಭವ ಇಲ್ಲ. ಆದರೂ, 2019ರಲ್ಲಿ ತಮ್ಮ ಆಕ್ರಮಣಕಾರಿ ನಾಯಕತ್ವದಿಂದ ಇಂಗ್ಲೆಂಡ್‌ಗೆ ಮೊದಲ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಮಾರ್ಗನ್ ಅವರ ಈ ತಂತ್ರಗಾರಿಕೆಯೇ ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ಗೆ ಇಷ್ಟವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇಂಗ್ಲೆಂಡ್‌ಗೆ ಚೊಚ್ಚಲ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟಿದ ಮಾರ್ಗನ್:

ಜಗತ್ತಿಗೆ ಕ್ರಿಕೆಟ್ ಪರಿಚಯಿಸಿದವರು ಇಂಗ್ಲೆಂಡ್‌ನವರು. ಹೀಗಿದ್ದೂ ಇಂಗ್ಲೆಂಡ್ ತಂಡವು 2019ಕ್ಕಿಂತ ಮೊದಲು ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಇದನ್ನು ಸವಾಲಾಗಿ ತೆಗೆದುಕೊಂಡ ಇಯಾನ್ ಮಾರ್ಗನ್, ನಾಯಕರಾಗುತ್ತಿದ್ದಂತೆಯೇ ತಮ್ಮ ಎರಡನೇ ಪ್ರಯತ್ನದಲ್ಲಿಯೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಮಾರ್ಗನ್ ಮೇಲೆ ಸಿಎಸ್‌ಕೆ ಫ್ರಾಂಚೈಸಿ ವಿಶ್ವಾಸವಿಟ್ಟಿದೆ ಎನ್ನಲಾಗಿದೆ.

ಒಂದು ವೇಳೆ ಮಾರ್ಗನ್ ಕೋಚ್ ಆದರೆ, ಅವರಿಗೆ ಹಲವು ಸವಾಲುಗಳಿವೆ. ಅವರಿಗೆ ದೇಶೀಯ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಕೋಚಿಂಗ್ ಅನುಭವ ಇಲ್ಲ. ಜೊತೆಗೆ, ಸತತ ಮೂರು ಸೀಸನ್‌ಗಳಿಂದ ಪ್ಲೇಆಫ್ ಪ್ರವೇಶಿಸದ ಸಿಎಸ್‌ಕೆ ತಂಡದಲ್ಲಿ ಈಗ ತಲೆಮಾರುಗಳ ಬದಲಾವಣೆಯಾಗುತ್ತಿದೆ. ಇದೆಲ್ಲವೂ ಅವರಿಗೆ ದೊಡ್ಡ ಸವಾಲಾಗಲಿದೆ.

ಇನ್ನೊಂದು ಸಾಧ್ಯತೆ ಮುಂದಿಟ್ಟ ಅಶ್ವಿನ್

ಇದೇ ವೇಳೆ, ಅಶ್ವಿನ್ ಮತ್ತೊಂದು ಸಾಧ್ಯತೆಯನ್ನೂ ಮುಂದಿಟ್ಟಿದ್ದಾರೆ. ಐಪಿಎಲ್ ಮೆಗಾ ಹರಾಜಿಗೆ ಇನ್ನು ಕೇವಲ ಒಂದು ವರ್ಷ ಬಾಕಿ ಇದೆ. ಹೀಗಾಗಿ, ಮುಂಬರುವ ಸೀಸನ್‌ನಲ್ಲಿ ಎಂ.ಎಸ್. ಧೋನಿ ಅವರೇ ತಂಡದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ಅವಸರದಲ್ಲಿ ಹೊಸ ಕೋಚ್ ನೇಮಿಸುವುದಕ್ಕಿಂತ, ಧೋನಿ ಅವರೇ ಪೂರ್ಣ ಹಿಡಿತ ತೆಗೆದುಕೊಂಡು, ಉಳಿದವರು ಅವರ ಕೆಳಗೆ ಕೆಲಸ ಮಾಡುವುದು ಉತ್ತಮ ಎಂಬುದು ಅಶ್ವಿನ್ ಮಾತು. ಕಳೆದ ಸೀಸನ್‌ನಲ್ಲಿ ಧೋನಿ ಆಟಗಾರನಾಗಿ ತಂಡದಲ್ಲಿದ್ದರೂ, ಗಾಯದ ಕಾರಣ ಒಂದೂ ಪಂದ್ಯವನ್ನು ಆಡಿರಲಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಏಷ್ಯನ್ ಗೇಮ್ಸ್‌ 2026: ಭಾರತ-ಪಾಕ್ ಹೈ-ವೋಲ್ಟೇಜ್ ಪಂದ್ಯ ನಡೆಯೋದೇ ಇಲ್ವಾ? ಅಚ್ಚರಿ ಮೂಡಿಸಿದ ಹೊಸ ವೇಳಾಪಟ್ಟಿ!
ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಭಾರತಕ್ಕೆ ಮತ್ತೊಂದು ಶಾಕ್! ಬುಮ್ರಾ, ಸುದರ್ಶನ್ ಬಳಿಕ ಮತ್ತೋರ್ವ ಆಟಗಾರ ಕೂಡ ಔಟ್