ಟಿ20 ವಿಶ್ವಕಪ್ ಟೂರ್ನಿ ಆಯೋಜಿಸುವುದಕ್ಕಿಂತ ಜನರನ್ನು ಮೈದಾನಕ್ಕೆ ಕರೆ ತರುವುದು ನಮ್ಮ ಮುಂದಿರುವ ಅತಿದೊಡ್ಡ ಸವಾಲು ಎಂದು ಆಸ್ಟ್ರೇಲಿಯಾದ ಕ್ರೀಡಾ ಸಚಿವರು ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಮೆಲ್ಬರ್ನ್(ಮೇ.05): ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಬೇಕಿರುವ ಐಸಿಸಿ ಟಿ20 ವಿಶ್ವಕಪ್ ಬಗ್ಗೆ ಆಸ್ಪ್ರೇಲಿಯಾ ಸರ್ಕಾರಕ್ಕೆ ಹೊಸ ಗೊಂದಲ ಶುರುವಾಗಿದೆ.
ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಸವಾಲೇನಲ್ಲ, ತಂಡಗಳಿಗೆ ಸೂಕ್ತ ವ್ಯವಸ್ಥೆ, ಅಗತ್ಯವಿರುವ ಸೌಲಭ್ಯ ಎಲ್ಲವನ್ನೂ ತೊಂದರೆಯಿಲ್ಲದ ರೀತಿ ನಿಭಾಯಿಸಬಲ್ಲೆವು, ಆದರೆ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣಗಳಿಗೆ ಪ್ರೇಕ್ಷಕರು ಬರುತ್ತಾರಾ ಎನ್ನುವ ಬಗ್ಗೆ ಅನುಮಾನವಿದೆ ಎಂದು ಆಸ್ಪ್ರೇಲಿಯಾದ ಕ್ರೀಡಾ ಸಚಿವ ರಿಚರ್ಡ್ ಕೊಲ್ಬೆಕ್ ಹೇಳಿದ್ದಾರೆ. ‘ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ವಿದೇಶಿ ಅಭಿಮಾನಿಗಳು ಬರುವುದು ಅನುಮಾನ. ಸ್ಥಳೀಯ ಪ್ರೇಕ್ಷಕರನ್ನು ಕ್ರೀಡಾಂಗಣಗಳಿಗೆ ಸೆಳೆಯುವುದು ಸಹ ಸವಾಲಾಗಿ ಪರಿಣಮಿಸಲಿದೆ’ ಎಂದು ರಿಚರ್ಡ್ ಹೇಳಿದ್ದಾರೆ.
undefined
ನಾನು ತವರಿನಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ವೀಕ್ಷಿಸಲು ತುದಿಗಾಲಿನಲ್ಲಿ ನಿಂತಿದ್ದೇನೆ. ಇದರ ಜತೆಗೆ ಎಲ್ಲವೂ ಅಂದುಕೊಂಡಂತೆ ಆದರೆ ಟಿ20 ಟೂರ್ನಿಯನ್ನು ವೀಕ್ಷಿಸಲು ಉತ್ಸುಕನಾಗಿದ್ದೇನೆ. ಆದರೆ ಪ್ರೇಕ್ಷಕರಿಲ್ಲದೆ ಟೂರ್ನಿ ಯಶಸ್ವಿಯಾಗುತ್ತದೆಯೇ ಎನ್ನುವ ಅನುಮಾನವಿದೆ ಎಂದು ಅವರು ಹೇಳಿದ್ದಾರೆ.
ಕೊಹ್ಲಿಗಿಂತ ರೋಹಿತ್ ಬೆಸ್ಟ್; ಕಾರಣ ಹೇಳಿದ ಗೌತಮ್ ಗಂಭೀರ್!
ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 18ರಿಂದ ಆರಂಭವಾಗಲಿದೆ. ಇದಕ್ಕೂ ಮುನ್ನವೇ ಟೀಂ ಇಂಡಿಯಾ ತ್ರಿಕೋನ ಸರಣಿಯನ್ನಾಡಲು ಆಸೀಸ್ ಪ್ರವಾಸವನ್ನು ಕೈಗೊಳ್ಳಲಿದೆ. ಇದರ ಜತೆಗೆ ಡಿಸೆಂಬರ್ ವೇಳೆಗೆ ಆತಿಥೇಯರ ವಿರುದ್ಧ ವಿರಾಟ್ ಪಡೆ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
ಕೊರೋನಾ ವೈರಸ್ ಭೀತಿಯಿಂದಾಗಿ ಈಗಾಗಲೇ ಹಲವು ಟೂರ್ನಿಗಳು ಮುಂದೂಡಲ್ಪಟ್ಟಿವೆ. ಇನ್ನು ಟಿ20 ವಿಶ್ವಕಪ್ ಟೂರ್ನಿಯನ್ನು ಶತಾಯಗತಾಯ ಆಯೋಜಿಸಲು ಐಸಿಸಿ ಸಿದ್ದತೆ ನಡೆಸುತ್ತಿದೆ. ಇನ್ನು ಆಸ್ಟ್ರೇಲಿಯಾ ಕೊರೋನಾ ವಿರುದ್ದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ತನ್ನ ಗಡಿಗಳನ್ನು ಸೀಲ್ ಮಾಡಿದೆ. ಇದರ ಜತೆಗೆ ವಿದೇಶಿ ಪ್ರವಾಸಿಗರಿಗೂ ನಿರ್ಬಂಧ ಹೇರಿದೆ.