
ಪುಣೆ(ಮಾ.28): ಭಾರತ ಕ್ರಿಕೆಟ್ ತಂಡದ ಆಟಗಾರ ಕೇದಾರ್ ಜಾಧವ್ ಅವರ ತಂದೆ ಮಹಾದೇವ್ ಜಾಧವ್ ಸೋಮವಾರ ನಾಪತ್ತೆಯಾಗಿ ಆತಂಕ ಸೃಷ್ಟಿಸಿದ್ದರು. ಇದೀಗ ನಾಪತ್ತೆಯಾಗಿ ಕೆಲವೇ ಗಂಟೆಗಳಲ್ಲಿ ಮಹಾದೇವ್ ಜಾಧವ್ ಕೊನೆಗೂ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
75 ವರ್ಷದ ತಮ್ಮ ತಂದೆ ನಾಪತ್ತೆಯಾಗಿದ್ದಾರೆ ಎಂದು ಟೀಂ ಇಂಡಿಯಾ ಕ್ರಿಕೆಟಿಗ ಕೇದಾರ್ ಜಾಧವ್, ಪುಣೆ ನಗರದ ಅಲಂಕಾರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಕೇದಾರ್ ಜಾಧವ್ ದೂರು ದಾಖಲಿಸಿದ ನಂತರ, ಪೊಲೀಸರು ಅವರ ತಂದೆಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ನಾಪತ್ತೆಯಾದ ವರದಿಯ ಪ್ರಕಾರ, ಕೇದಾರ್ ಜಾಧವ್ ಮತ್ತು ಮಹದೇವ್ ಜಾಧವ್ ಪುಣೆ ನಗರದ ಕೊತ್ರೋಡ್ ಪ್ರದೇಶದ ನಿವಾಸಿಗಳು. ಮಹದೇವ್ ಜಾಧವ್ ಮಾರ್ಚ್ 27 ರಂದು ಮುಂಜಾನೆ ಯಾರಿಗೂ ಮಾಹಿತಿ ನೀಡದೇ ಮನೆಯಿಂದ ಹೊರಹೋಗಿದ್ದಾರೆ. ಆ ಬಳಿಕ ಮನೆಗೆ ವಾಪಸಾಗಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಅಲಂಕಾರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಂದ್ರ ಸಹನೆ ನೇತೃತ್ವದ ತಂಡ ಮಹದೇವ್ ಜಾಧವ್‌ಗಾಗಿ ಹುಡುಕಾಟ ಆರಂಭಿಸಿತ್ತು. ಇದೀಗ ಕೇದಾರ್ ಜಾಧವ್, ಮುಂಡ್ವಾ ಏರಿಯಾದಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ. ಇದೀಗ ಅವರು, ತಮ್ ಕುಟುಂಬ ಕೂಡಿಕೊಂಡಿದ್ದಾರೆ" ಎಂದು ಮುಂಡ್ವಾ ಪೊಲೀಸ್ ಠಾಣೆಯ ಹಿರಿಯ ಇನ್‌ಸ್ಪೆಕ್ಟರ್ ಅಜಿತ್ ಲೋಕ್ಡೆ ತಿಳಿಸಿದ್ದಾರೆ.
ಟೀಮ್ ಇಂಡಿಯಾ ಕ್ರಿಕೆಟಿಗನ ತಂದೆ ನಾಪತ್ತೆ, ಪೊಲೀಸರಿಗೆ ದೂರು!
ಕೇದಾರ್ ಜಾಧವ್ ಅವರು ಭಾರತ ಪರ 73 ಏಕದಿನ ಪಂದ್ಯಗಳನ್ನಾಡಿದ್ದಾರೆ. ಇನ್ನು 2007ರಿಂದಲೂ ಕೇದಾರ್ ಜಾಧವ್, ರಣಜಿ ಟ್ರೋಫಿ ಟೂರ್ನಿಯಲ್ಲಿ ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ.
ಬಿಸಿಸಿಐ ಗುತ್ತಿಗೆ ಕಳೆದುಕೊಂಡ ಅಜಿಂಕ್ಯಾ, ಭುವಿ!
ನವದೆಹಲಿ: 2022-23ನೇ ಸಾಲಿನ 26 ಆಟಗಾರರನ್ನೊಳಗೊಂಡ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಭಾನುವಾರ ಬಿಸಿಸಿಐ ಪ್ರಕಟಿಸಿದ್ದು, ಕೆಲ ಆಟಗಾರರು ಬಡ್ತಿ ಪಡೆದಿದ್ದರೆ ಹಲವು ಆಟಗಾರರು ಅಚ್ಚರಿ ಎಂಬಂತೆ ಪಟ್ಟಿಯಿಂದಲೇ ಹೊರಬಿದ್ದಿದ್ದಾರೆ. ಕಳೆದ ಸಾಲಿನಲ್ಲಿ ‘ಬಿ’ ದರ್ಜೆ(3 ಕೋಟಿ ರು.)ಯಲ್ಲಿದ್ದ ಅಜಿಂಕ್ಯಾ ರಹಾನೆ ಹಾಗೂ ಇಶಾಂತ್ ಶರ್ಮಾ ಈ ಬಾರಿ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿಲ್ಲ. ಇವರಿಬ್ಬರೂ ಇನ್ನು ಭಾರತ ಪರ ಆಡುವ ಸಾಧ್ಯತೆ ಇಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದೇ ವೇಳೆ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್, ಕರ್ನಾಟಕದ ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ದೀಪಕ್ ಚಹರ್ ಹಾಗೂ ವೃದ್ಧಿಮಾನ್ ಸಾಹ ಕೂಡಾ ಪಟ್ಟಿಯಿಂದ ಹೊರಬಿದ್ದಿದ್ದರು. ಕಳೆದ ಸಾಲಿನಲ್ಲಿ ಇವರೆಲ್ಲರೂ ‘ಸಿ’ ದರ್ಜೆ(1 ಕೋಟಿ ರು.)ಯಲ್ಲಿದ್ದರು. ಇನ್ನು ಕೆ.ಎಲ್.ರಾಹುಲ್ ಹಾಗೂ ಶಾರ್ದೂಲ್ ಠಾಕೂರ್ ಹಿಂಬಡ್ತಿ ಪಡೆದಿದ್ದಾರೆ.
ಇಂದೋರ್ ಪಿಚ್‌ನ ಕಳಪೆ ರೇಟಿಂಗ್ ತೆರವು
ದುಬೈ: ಭಾರತ-ಆಸ್ಪ್ರೇಲಿಯಾ ನಡುವಿನ 3 ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಇಂದೋರ್ನ ಹೋಲ್ಕರ್ ಕ್ರೀಡಾಂಗಣದ ಪಿಚ್‌ಗೆ ರೆಫ್ರಿ ನೀಡಿದ್ದ ಕಳಪೆ ರೇಟಿಂಗ್ಅನ್ನು ಬಿಸಿಸಿಐ ಮನವಿ ಬಳಿಕ ಐಸಿಸಿ ಬದಲಾವಣೆ ಮಾಡಿದ್ದು, ಸರಾಸರಿಗಿಂತ ಕಡಿಮೆ ಎಂದು ರೇಟಿಂಗ್ ನೀಡಿದೆ. ಹೀಗಾಗಿ ಪಿಚ್‌ಗೆ ನೀಡಲಾಗಿದ್ದ 3 ಡಿಮೆರಿಟ್ ಅಂಕಗಳನ್ನು 1ಕ್ಕೆ ಕಡಿತಗೊಳಿಸಿದೆ. ಇಂಧೋರ್ ಪಿಚ್‌ಗೆ ಕಳಪೆ ರೇಟಿಂಗ್ ನೀಡಿದ್ದನ್ನು ಪ್ರಶ್ನಿಸಿದ್ದ ಬಿಸಿಸಿಐ, ತೀರ್ಪು ಮರುಪರಿಶೀಲಿಸುವಂತೆ ಐಸಿಸಿಗೆ ಮನವಿ ಸಲ್ಲಿಸಿತ್ತು. ಈ ಬಗ್ಗೆ ಐಸಿಸಿಯ ಇಬ್ಬರು ಸದಸ್ಯರ ಸಮಿತಿ ಪರಿಶೀಲನೆ ನಡೆಸಿ ಕಳಪೆ ರೇಟಿಂಗ್ ತೆರವುಗೊಳಿಸಿದೆ. ಇದೇ ವೇಳೆ ಅಹಮದಾಬಾದ್ನ ಪಿಚ್‌ಗೆ ಐಸಿಸಿ ಸರಾಸರಿ ರೇಟಿಂಗ್ ನೀಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.