ಸುನೀಲ್ ಗವಾಸ್ಕರ್‌ಗೆ ಗೌರವ ಡಾಕ್ಟರೇಟ್‌ ಪ್ರಧಾನ ಮಾಡಿದ ಮೋಹನ್‌ ಭಾಗವತ್‌

By Kannadaprabha NewsFirst Published Jul 14, 2022, 8:30 PM IST
Highlights

ಕರ್ನಾಟಕದ ಮುದ್ದೇನಹಳ್ಳಿಯಲ್ಲಿರುವ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವ ವಿದ್ಯಾಲಯದ ಮೊದಲ ಘಟಿಕೋತ್ಸವದಲ್ಲಿ ಈ ಗೌರವವನ್ನು ನೀಡಲಾಯಿತು. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸುನಿಲ್ ಗವಾಸ್ಕರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಔಪಚಾರಿಕವಾಗಿ ಪ್ರದಾನ ಮಾಡಿದರು.

ಚಿಕ್ಕಬಳ್ಳಾಪುರ (ಜುಲೈ 14): ಶ್ರೀ ಸತ್ಯಸಾಯಿ ಗ್ರಾಮದ ಪ್ರೇಮಾಮೃತಂ ಸಭಾಂಗಣದಲ್ಲಿ ಬುಧವಾರ ಸಂಜೆ ಗುರು ಪೂರ್ಣಿಮೆಯ ದಿನದಂದು ಅರ್ಥಪೂರ್ಣವಾಗಿ ನಡೆದ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವ ವಿದ್ಯಾಲಯದ ಪ್ರಥಮ ವರ್ಷದ ಘಟಿಕೋತ್ಸವದಲ್ಲಿ ಖ್ಯಾತ ಅಣು ವಿಜ್ಞಾನಿ ಪಿ.ಚಿದಂಬರಂ, ಕ್ರಿಕೆಟ್‌ ದಂತಕಥೆ ಸುನೀಲ್‌ ಮನೋಹರ್‌ ಗವಾಸ್ಕರ್‌ ಸೇರಿ 6 ಮಂದಿಗೆ ಪ್ರಧಾನ ಮಾಡಲಾಯಿತು. ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಗೌರವ ಡಾಕ್ಟರೇಟ್‌ ಮತ್ತು ಸುವರ್ಣ ಪದಕವನ್ನು ಬಾಬಾ ಅಣು ವಿಜ್ಞಾನ ಸಂಸ್ಥೆಯ ಡಾ.ಚಿದಂಬರಂ, ವಿಜ್ಞಾನ ಮತ್ತು ಬಾಹ್ಯಾಕಾಶ ವಿಭಾಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌ ಪ್ರಧಾನ ಮಾಡಿ ಗೌರವಿಸಿದರು. ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ನ್ನು ರಾಜ್ಯದವರೇ ಆದ ಸಂಗೀತ ಮತ್ತು ಕಲೆ ವಿಭಾಗದಲ್ಲಿ ಧಾರವಾಡದ ಪಂಡಿತ್‌ ವೆಂಕಟೇಶ್‌ ಕುಮಾರ್‌, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಗಣನೀಯ ಸೇವೆಗಾಗಿ ಶ್ರೀ ಸತ್ಯಸಾಯಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು, ಸಂಜೀವಿನಿ ಸರಣಿಯ ವಿದ್ಯಾಲಯಗಳ ನಿರ್ಮಾಪಕರಾದ ಸಿ.ಶ್ರೀನಿವಾಸ್‌ ಅವರಿಗೆ ಸಂದಿತು.

ಸಮಾಜಸೇವೆ ಮತ್ತು ಲೋಕಕಲ್ಯಾಣ ಕ್ಷೇತ್ರದಲ್ಲಿನ ಗೌರವ ಡಾಕ್ಟರೇಟ್‌ (honorary doctorate)ಮತ್ತು ಸುವರ್ಣ ಪದಕ ವನ್ಯಜೀವಿ ಮತ್ತು ನಿಸರ್ಗ ಸಂರಕ್ಷಕರಾದ ಅಸ್ಸಾಂನ ಪೂರ್ಣಿಮಾ ದೇವಿ ಬರ್ಮನ್‌ ಅವರಿಗೆ ದೊರಕಿತು. ಸ್ನಾತಕೋತ್ತರ ಮತ್ತು ಪದವಿ ಹಂತಗಳಲ್ಲಿ ಗಣನೀಯ ಸಾಧನೆ ಮಾಡಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸುವರ್ಣ ಪದಕ ಮತ್ತು ಪ್ರಶಸ್ತಿ ಪತ್ರಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು."ರಾಷ್ಟ್ರದ ದೈನಂದಿನ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಸಂಶೋಧನೆ ಮೂಲಕ ಪರಿಹಾರ ಕಲ್ಪಿಸಬೇಕು, ಭಾರತ ಒಂದು ಬಲಿಷ್ಠ ರಾಷ್ಟ್ರವಾಗಿ ರೂಪಗೊಳ್ಳಬೇಕು. ಗ್ರಾಮೀಣ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿ ಕೇವಲ ಶಿಕ್ಷಣದ ಮೇಲೆ ನಿಂತಿದೆ' ಎಂದು ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಕೆ.ಕಸ್ತೂರಿ ರಂಗನ್‌ (K. Kasturi Rangan) ಈ ವೇಳೆ ಹೇಳಿದರು.

ಅವರು ತೋರಿದ ಹಾದಿಯಲ್ಲಿ ಮುನ್ನಡೆಯಬೇಕು: ಆರೆಸ್ಸೆಸ್ ಮುಖ್ಯಸ್ಥ ಮೋಹನ್‌ ಭಾಗವತ್‌ (RSS chief Mohan Bhagwat ) ಅವರಿಂದ ಗೌರವ ಡಾಕ್ಟರೇಟ್‌ ಸ್ವೀಕರಿಸಿದ ಬಳಿಕ ಮಾತನಾಡಿದ ಸುನೀಲ್‌ ಗಾವಸ್ಕರ್‌ ( Sunil Gavaskar), " ಜೀವನ ಉಜ್ವಲಗೊಳ್ಳುವುದರಲ್ಲಿ ಭಗವಾನ್‌ ಶ್ರೀ ಸತ್ಯಸಾಯಿ ಬಾಬಾರ ಅರ್ಶೀವಾದ, ಪ್ರೇರಣೆ ಇದೆ. ಬಾಬಾರ ಆದರ್ಶಗಳು ಎಂದಿಗೂ ಈ ಸಮಾಜಕ್ಕೆ ಅವಶ್ಯಕ. ಅವರು ತೋರಿದ ದಾರಿಯಲ್ಲಿ ನಾವು ಮುನ್ನಡೆಯಬೇಕಿದೆ' ಎಂದು ಹೇಳಿದರು.

ಇದನ್ನೂ ಓದಿ: ಆಟೋಗ್ರಾಫ್ ಕೇಳಲು ಹೋದ ಹುಡುಗಿಗೆ ಹೃದಯವನ್ನೇ ಕೊಟ್ಟ ಕ್ರಿಕೆಟರ್‌!

"ದೇಶ ಇಂದು ವಿಜ್ಞಾನ ತಂತ್ರಜ್ಞಾನದಲ್ಲಿ ಸಾಕಷ್ಟುಬಲಿಷ್ಠವಾಗಿ, ದೇಶದ ಸೈನ್ಯವೂ ಸಮರ್ಥವಾಗಿದೆ. ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ಭಾರತವನ್ನು ಯುವ ಜನಾಂಗÜ ತಂತ್ರಜ್ಞಾನವನ್ನು ಬಳಸಿಕೊಂಡು ನ್ನಷ್ಟುಬಲಿಷ್ಠಗೊಳಿಸಬೇಕಿದೆ' ಎಂದು ಖ್ಯಾತ ಅಣು ವಿಜ್ಞಾನಿ ಡಾ.ಪಿ.ಚಿದಂಬರಂ ಹೇಳಿದರು.

ಇದನ್ನೂ ಓದಿ: Sunil Gavaskar turns 73: ಸುನಿಲ್ ಗವಾಸ್ಕರ್ ಹೆಸರಿನಲ್ಲಿರುವ ಟಾಪ್ 5 ದಾಖಲೆಗಳಿವು

ಎಡಪಂಥೀಯರ ಟೀಕೆ:
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಂದ ಸುನೀಲ್ ಗವಾಸ್ಕರ್ ಗೌರವ ಡಾಕ್ಟರೇಟ್ ಸ್ವೀಕರಿಸಿದ ಸುದ್ದಿ ಎಡಪಂಥೀಯರ ಟೀಕೆಗೆ ಕಾರಣವಾಗಿದೆ. "ಈ ಮನುಷ್ಯನನ್ನು ಔಟ್ ಮಾಡುವುದು ಕಷ್ಟ ಎಂದು ನಾನು ಭಾವಿಸಿದ್ದೆ. ಆದರೆ, ಈ ಚಿತ್ರ ನೋಡಲು ದುಃಖವಾಗುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.. ಮತ್ತೊಬ್ಬ ವ್ಯಕ್ತಿ ಗವಾಸ್ಕರ್ ಅವರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದು ಅವರು ಲೆಜೆಂಡರಿ ಕ್ರಿಕೆಟಿಗರಾಗಿದ್ದಕ್ಕಾಗಿ ಅಲ್ಲ, ಆದರೆ ಅವರು 1992 ರ ಗಲಭೆಯ ಸಮಯದಲ್ಲಿ ಒಮ್ಮೆ ಕುಟುಂಬವನ್ನು ಉಳಿಸಿದ್ದರಿಂದ ಎಂದು ಹೇಳಿದ್ದಾರೆ. 1992ರ ಮುಂಬೈ ಗಲಭೆಯ ಸಂದರ್ಭದಲ್ಲಿ ತನ್ನ ಐಡೆಂಟಿಟಿಯನ್ನು ಬಳಸಿಕೊಂಡು, ಮುಸ್ಲಿಂ ಕುಟುಂಬವೊಂದನ್ನು ಕಾಪಾಡಿದ್ದೆ ಎಂದು ಸುನೀಲ್‌ ಗವಾಸ್ಕರ್‌ ಈ ಹಿಂದೆ ಹೇಳಿದ್ದರು.

click me!