5ನೇ ಟೆಸ್ಟ್: ಇಂಗ್ಲೆಂಡ್ ಮೇಲೆ ಭಾರತ ಸವಾರಿ
ಜಾನಿ ಬೇರ್‌ಸ್ಟೋವ್ ಶತಕ ಹೊರತಾಗಿಯೂ ಇಂಗ್ಲೆಂಡ್ 284ಕ್ಕೆ ಆಲೌಟ್
ಭಾರತಕ್ಕೆ 132 ರನ್ ಮುನ್ನಡೆ, ಎಲ್ಲಾ 10 ವಿಕೆಟ್ ಕಿತ್ತ ವೇಗಿಗಳು
ಬರ್ಮಿಂಗ್‌ಹ್ಯಾಮ್ (ಜು.4): ಜಾನಿ ಬೇರ್‌ಸ್ಟೋವ್ (Jonny Bairstow) ಸ್ಫೋಟಕ ಶತಕದ ಹೊರತಾಗಿಯೂ ಆತಿಥೇಯ ಇಂಗ್ಲೆಂಡ್ (England) ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್ ಕಲೆ ಹಾಕಿದ್ದ ಭಾರತ (India), ಇಂಗ್ಲೆಂಡನ್ನು 284ಕ್ಕೆ ನಿಯಂತ್ರಿಸಿದ್ದು, 132 ರನ್‌ಗಳ ದೊಡ್ಡ ಮುನ್ನಡೆ ಪಡೆಯಿತು.
ತುಂಬು ಉತ್ಸಾಹದೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 31 ಓವರಲ್ಲಿ 3 ವಿಕೆಟ್‌ಗೆ 84 ರನ್ ಗಳಿಸಿ 216 ರನ್ ಮುನ್ನಡೆ ಪಡೆಯಿತು. ಐತಿಹಾಸಿಕ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿರುವ ಭಾರತ ಆತಿಥೇಯರಿಗೆ ದೊಡ್ಡ ಗುರಿ ನೀಡಿ ಪಂದ್ಯ ಗೆಲ್ಲುವ ಕಾತರದಲ್ಲಿದೆ. ಇನ್ನೂ ಎರಡು ದಿನಗಳ ಆಟ ಬಾಕಿ ಇರುವುದರಿಂದ ಫಲಿತಾಂಶ ಬರುವುದು ಬಹುತೇಕ ಖಚಿತವಾಗಿದೆ.
ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್(04)ರನ್ನು ಸತತ 2ನೇ ಇನ್ನಿಂಗ್ಸ್‌ನಲ್ಲೂ ಬಲಿ ಪಡೆದ ಆ್ಯಂಡರ್‌ಸನ್ ಭಾರತಕ್ಕೆ ಆರಂಭಿಕ ಆಘಾತ ನೀಡಿದರು. ತಂಡದ ಮೊತ್ತ 43 ರನ್ ಆಗುವಷ್ಟರಲ್ಲಿ 11 ರನ್ ಗಳಿಸಿದ್ದ ಹನುಮ ವಿಹಾರಿ, ಬ್ರಾಡ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. 3ನೇ ವಿಕೆಟ್‌ಗೆ ಜೊತೆಯಾಗಿರುವ ಚೇತೇಶ್ವರ ಪೂಜಾರ ಹಾಗೂ ವಿರಾಟ್ ಕೊಹ್ಲಿ ಭಾರತಕ್ಕೆ ದೊಡ್ಡ ಮುನ್ನಡೆ ಒದಗಿಸುವ ಭರವಸೆ ಒದಗಿಸಿದರು. ಆದರೆ ಕೊಹ್ಲಿ 20 ರನ್ ಗಳಿಸಿ ಸ್ಟೋಕ್ಸ್‌ಗೆ ವಿಕೆಟ್ ನೀಡಿ ಹೊರನಡೆದರು.
That's Stumps on Day 3 of the Edgbaston Test! (50*) & (30*) remain unbeaten as stretch their lead to 257 runs. 👌 👌
See you tomorrow for Day 4 action.
Scorecard ▶️ https://t.co/xOyMtKrYxM pic.twitter.com/PpQfil24Jj
ಬೇರ್‌ಸ್ಟೋವ್ ಶತಕ: ಮೊದಲ ದಿನ 12 ರನ್ ಗಳಿಸಿದ್ದ ಬೇರ್‌ಸ್ಟೋವ್ 2ನೇ ದಿನ ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟರು. ಬೆನ್ ಸ್ಟೋಕ್ಸ್(25) ವಿಕೆಟ್ ಕಳೆದುಕೊಂಡ ಬಳಿಕ ಅಬ್ಬರಿಸಿದ ಅವರು ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. 119 ಎಸೆತಗಳಲ್ಲಿ ಟೆಸ್ಟ್‌ನ ತಮ್ಮ 11ನೇ ಶತಕ ಪೂರ್ತಿಗೊಳಿಸಿದ ಅವರು 106 ರನ್ ಗಳಿಸಿ ನಿರ್ಗಮಿಸಿದರು. ಅವರ ಇನ್ನಿಂಗ್‌್ಸನಲ್ಲಿ 14 ಬೌಂಡರಿ, 2 ಸಿಕ್ಸರ್ ಒಳಗೊಂಡಿತ್ತು. ಆರಂಭಿಕ ಕುಸಿತ ಕಂಡಿದ್ದ ಭಾರತಕ್ಕೆ ಪಂತ್-ಜಡೇಜಾ ಜೊತೆಯಾಟದ ಮೂಲಕ ನೆರವಾಗಿದ್ದರೂ ಇಂಗ್ಲೆಂಡ್ ತಂಡದಿಂದ ಈ ರೀತಿ ಆಟ ಕಂಡುಬರಲಿಲ್ಲ. ಬೇರ್‌ಸ್ಟೋವ್‌ಗೆ ಸ್ಯಾಮ್ ಬಿಲ್ಲಿಂಗ್‌್ಸ(36) ಹೊರತುಪಡಿಸಿ ಉಳಿದವರಿಂದ ಸೂಕ್ತ ಬೆಂಬಲ ದೊರೆಯಲಿಲ್ಲ. ಇವರಿಬ್ಬರ ನಿರ್ಗಮನದ ಬಳಿಕ ತಂಡ ಬೇಗನೇ ಆಲೌಟ್ ಆಯಿತು.
ತಂಡದ ಎಲ್ಲಾ ವಿಕೆಟ್‌ಗಳು ವೇಗಿಗಳ ಪಾಲಾಯಿತು. ಮೊಹಮದ್ ಸಿರಾಜ್ 4, ಜಸ್‌ಪ್ರೀತ್ ಬೂಮ್ರಾ 3, ಶಮಿ 2 ಹಾಗೂ ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದರು.
Happy Birthday Harbhajan Singh ಭಜ್ಜಿ ಹುಟ್ಟುಹಬ್ಬಕ್ಕೆ ಪಾರ್ಟಿ ಕೇಳಿದ ಶಿಖರ್ ಧವನ್..!
ಬೇರ್‌ಸ್ಟೋವ್ ಹ್ಯಾಟ್ರಿಕ್ ಶತಕ: ಇಂಗ್ಲೆಂಡ್‌ನ ಜಾನಿ ಬೇರ್‌ಸ್ಟೋವ್ ಹ್ಯಾಟ್ರಿಕ್ ಶತಕ ಬಾರಿಸಿದ್ದಾರೆ. ಭಾರತ ವಿರುದ್ಧ ಆಕರ್ಷಕ ಆಟವಾಡಿದ ಅವರು ಕಳೆದ ತಿಂಗಳು ತವರಿನಲ್ಲೇ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಕೊನೆ 2 ಟೆಸ್ಟ್‌ಗಳಲ್ಲೂ ಅಮೋಘ ಶತಕ ಬಾರಿಸಿ ತಂಡದ ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2022ರಲ್ಲಿ ಈಗಾಗಲೇ 5 ಶತಕಗಳೊಂದಿಗೆ 850ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ.
ಜಸ್ಪ್ರೀತ್ ಬುಮ್ರಾ ವಿಶ್ವದಾಖಲೆ ಬ್ಯಾಟಿಂಗ್ ಕಂಡು ವಿಚಿತ್ರವೆನಿಸಿತು ಎಂದ ರವಿಶಾಸ್ತ್ರಿ..!
ಕೊಹ್ಲಿ-ಬೇರ್‌ಸ್ಟೋವ್ ಮಾತಿನ ಚಕಮಕಿ: 3ನೇ ದಿನದ ಪಂದ್ಯಾಟದ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಬೇರ್‌ಸ್ಟೋವ್ ಹಾಗೂ ಫೀಲ್ಡಿಂಗ್ ನಿರತ ವಿರಾಟ್ ಕೊಹ್ಲಿ ನಡುವೆ ತೀವ್ರ ವಾಗ್ವಾದ ನಡೆಯಿತು. ಬೂಮ್ರಾ ಬೌಲಿಂಗ್ ವೇಳೆ ಕೊಹ್ಲಿ, ಬೇರ್‌ಸ್ಟೋವ್ ಮೇಲೆ ಕೋಪಗೊಂಡಿದ್ದಲ್ಲದೇ ಅವರನ್ನು ಹೆಚ್ಚು ಮಾತಾಡದೆ ಸುಮ್ಮನೆ ಬ್ಯಾಟ್ ಮಾಡುವಂತೆ ಹೇಳಿದರು. ಬಳಿಕ ಔಟಾಗಿ ನಿರ್ಗಮಿಸುವ ವೇಳೆಯೂ ಕೊಹ್ಲಿ, ಬೇರ್‌ಸ್ಟೋವ್‌ಗೆ ಕೈಸನ್ನೆಯ ಮುತ್ತು ನೀಡಿ ವಿದಾಯ ಕೋರಿದರು.