ಲಂಕಾಷೈರ್‌ ಕೌಂಟಿ ಕ್ಲಬ್‌ ಜತೆ ಒಪ್ಪಂದ ಮಾಡಿಕೊಂಡ ಶ್ರೇಯಸ್‌ ಅಯ್ಯರ್

Suvarna News   | Asianet News
Published : Mar 23, 2021, 02:48 PM ISTUpdated : Mar 23, 2021, 02:51 PM IST
ಲಂಕಾಷೈರ್‌ ಕೌಂಟಿ ಕ್ಲಬ್‌ ಜತೆ ಒಪ್ಪಂದ ಮಾಡಿಕೊಂಡ ಶ್ರೇಯಸ್‌ ಅಯ್ಯರ್

ಸಾರಾಂಶ

ಟೀಂ ಇಂಡಿಯಾ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಇಂಗ್ಲೆಂಡ್‌ನ ಲಂಕಾಷೈರ್‌ ಕೌಂಟಿ ಕ್ಲಬ್‌ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಲಂಕಾಷೈರ್‌ ಕೌಂಟಿ ಕ್ಲಬ್ ಜತೆ ಅಯ್ಯರ್ ಒಂದು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ  

ಮ್ಯಾಂಚೆಸ್ಟರ್(ಮಾ.23)‌: ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಇಂಗ್ಲೆಂಡ್‌ನ ಲಂಕಾಷೈರ್‌ ಕೌಂಟಿ ಕ್ಲಬ್‌ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ವರ್ಷ ಜುಲೈನಲ್ಲಿ ನಡೆಯಲಿರುವ ರಾಯಲ್‌ ಲಂಡನ್‌ ಕಪ್‌ ಏಕದಿನ ಟೂರ್ನಿಯಲ್ಲಿ ಆಡಲಿದ್ದಾರೆ. ತಂಡದೊಂದಿಗೆ 1 ತಿಂಗಳ ಅವಧಿಗೆ ಶ್ರೇಯಸ್‌ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

'ಲಿಸ್ಟ್‌ ಎ' ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಶ್ರೇಯಸ್‌ ಅಯ್ಯರ್, ಇದುವರೆಗೂ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 98 ಇನಿಂಗ್ಸ್‌ಗಳನ್ನಾಡಿ 45.11ರ ಬ್ಯಾಟಿಂಗ್‌ ಸರಾಸರಿಯಲ್ಲಿ 3,970 ರನ್‌ ಬಾರಿಸಿದ್ದಾರೆ ಇದರಲ್ಲಿ 25 ಅರ್ಧಶತಕ ಹಾಗೂ 8 ಶತಕಗಳು ಸೇರಿವೆ. ಇನ್ನು ಭಾರತ ಪರ ಶ್ರೇಯಸ್‌ ಅಯ್ಯರ್‌ 19 ಏಕದಿನ ಇನಿಂಗ್ಸ್‌ಗಳನ್ನಾಡಿ 44.83ರ ಸರಾಸರಿಯಲ್ಲಿ 8  ಅರ್ಧಶತಕ ಹಾಗೂ ಒಂದು ಶತಕ ಸಹಿತ 807 ರನ್‌ ಬಾರಿಸಿ ಗಮನ ಸೆಳೆದಿದ್ದಾರೆ.

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಭರ್ಜರಿ ಸಿದ್ದತೆ; ಹಲವು ಪ್ರಯೋಗ ಸಕ್ಸಸ್

ಇಂಗ್ಲಿಷ್‌ ಕ್ರಿಕೆಟ್‌ನಲ್ಲಿ ಲಂಕಾಷೈರ್‌ ತನ್ನದೇ ಆದ ಛಾಪನ್ನು ಮೂಡಿಸಿದೆ. ಭಾರತ ಕ್ರಿಕೆಟ್‌ನೊಂದಿಗೂ ಲಂಕಾಷೈರ್‌ ಉತ್ತಮ ಸಂಬಂಧ ಹೊಂದಿದೆ. ಭಾರತದ ದಿಗ್ಗಜ ಕ್ರಿಕೆಟಿಗರಾದ ಫಾರುಕ್ ಇಂಜಿನಿಯರ್, ಸೌರವ್‌ ಗಂಗೂಲಿ, ವಿವಿಎಸ್‌ ಲಕ್ಷ್ಮಣ್‌ ಅವರಂತಹ ಆಟಗಾರರು ಪ್ರತಿನಿಧಿಸಿದ ತಂಡದೊಂದಿಗೆ ಸೇರಿಕೊಳ್ಳುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಎಮಿರೇಟ್ಸ್‌ ಓಲ್ಡ್‌ ಟ್ರ್ಯಾಫೋರ್ಡ್ ಒಂದು ವಿಶ್ವದರ್ಜೆಯ ಕ್ರಿಕೆಟ್‌ ಸ್ಟೇಡಿಯಂ ಆಗಿದ್ದು, ಅಲ್ಲಿ ನಮ್ಮ ಸಹ ಆಟಗಾರರನ್ನು ಸೇರಿಕೊಳ್ಳಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Ind vs SA: ಶುಭ್‌ಮನ್ ಗಿಲ್ ಫುಲ್ ಫಿಟ್; ಈ ಡೇಟ್‌ಗೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡೋದು ಫಿಕ್ಸ್!
ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!