ಕ್ರಿಕೆಟಿಗರಿಗೆ ಕೊರೋನಾ ಲಸಿಕೆ; ಕೇಂದ್ರ ಆರೋಗ್ಯ ಇಲಾಖೆ ಜೊತೆ ಬಿಸಿಸಿಐ ಮಾತುಕತೆ!

By Suvarna NewsFirst Published Apr 4, 2021, 9:05 PM IST
Highlights

IPL ಟೂರ್ನಿ ಆರಂಭಕ್ಕೆ ಕೆಲ ದಿನಗಳಿರುವಾಗಲೇ ಕೊರೋನಾ ಅಟ್ಟಹಾಸ ಮಿತಿ ಮೀರಿದೆ. ಹೀಗಾಗಿ ಟೂರ್ನಿ ಆಯೋಜನೆ ಇದೀಗ ಸವಾಲಾಗಿದೆ. ಅದರಲ್ಲೂ ಕೆಲ ಆಟಗಾರರು ಕೊರೋನಾ ಸೋಂಕಿಗೆ ತುತ್ತಾಗಿದ್ದು, ಬಿಸಿಸಿಐ ತಲೆನೋವು ಹೆಚ್ಚಿಸಿದೆ. ಹೀಗಾಗಿ ಇದೀಗ ಆಟಗಾರರಿಗೆ ಲಸಿಕೆ ನೀಡಿಲು ಬಿಸಿಸಿಐ ಯೋಜನೆ ಹಾಕಿಕೊಂಡಿದೆ.

ಮುಂಬೈ(ಎ.04): ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲ ದಿನಗಳು ಮಾತ್ರ ಬಾಕಿ ಇವೆ. ಟೂರ್ನಿಗೆ ಭರ್ಜರಿ ತಯಾರಿ ನಡೆಯುತ್ತಿರುವಾಗಲೇ ಕೆಲ ಕ್ರಿಕೆಟಿಗರಿಗೆ ಕೊರೋನಾ ಅಂಟಿಕೊಂಡಿದೆ. ಇದು ಫ್ರಾಂಚೈಸಿ ಮಾತ್ರವಲ್ಲ ಬಿಸಿಸಿಐ ಚಿಂತೆ ಹೆಚ್ಚಿಸಿದೆ. ಇತ್ತ ದೇಶದಲ್ಲಿ ಕೊರೋನಾ ಪ್ರಕರಗಳು ಅತಿಯಾಗುತ್ತಿರುವ ಕಾರಣ ನಿಗದಿತ ಕ್ರೀಡಾಂಣದಲ್ಲಿ ಟೂರ್ನಿ ಆಯೋಜನೆ ಕೂಡ ಕಷ್ಟವಾಗುತ್ತಿದೆ.

ಐಪಿಎಲ್ ಟೂರ್ನಿಯಿಂದ ಹೊರಬಿದ್ದರೂ ಅಯ್ಯರ್‌ಗೆ ಸಿಗಲಿದೆ ಫುಲ್ ಸ್ಯಾಲರಿ!

ಐಪಿಎಲ್ ಟೂರ್ನಿ ಸುಸೂತ್ರವಾಗಿ ನಡೆಯಲು ಇದೀಗ ಬಿಸಿಸಿಐ ಎಲ್ಲಾ ಕ್ರಿಕೆಟಿಗರಿಗೆ ಕೊರೋನಾ ಲಸಿಕೆ ನೀಡಲು ಬಿಸಿಸಿಐ ಮುಂದಾಗಿದೆ. ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಕ್ರಿಕೆಟಿಗರಿಗೆ ಲಸಿಕೆ ನೀಡೋ ಮೂಲಕ ಆಟಗಾರರನ್ನು ಸುರಕ್ಷಿತವಾಗಿಡಲು ಬಿಸಿಸಿಐ ನಿರ್ಧರಿಸಿದೆ.

ಲಸಿಕೆಗಾಗಿ ಬಿಸಿಸಿಐ ಕೇಂದ್ರ ಆರೋಗ್ಯ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿದೆ. ಈ ಕುರಿತು ಶೀಘ್ರದಲ್ಲೇ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಐಪಿಎಲ್ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ. 

ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಂಬೈನಲ್ಲಿನ ಪಂದ್ಯಗಳನ್ನು ಹೈದರಾಬಾದ್‌ಗೆ ಸ್ಥಳಾಂತರಿಸುವ ಕುರಿತು ಬಿಸಿಸಿಐ ಚಿಂತನೆ ನಡೆಸಿದೆ. ಸದ್ಯ ಯಾವುದೇ ಬದಲಾವಣೆ ಇಲ್ಲ ಎಂದಿದೆ. ಎಪ್ರಿಲ್ 9 ರಿಂದ  ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ.
 

click me!