ಅಭಿಮಾನಿಗಳಿಗೆ ಶಾಕ್; ಭಾರತಕ್ಕೆ ಬರಲ್ಲ ಎಂದ ಕ್ರಿಸ್ ಗೇಲ್!

By Web Desk  |  First Published Nov 27, 2019, 10:05 AM IST

ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಭಾರತದಲ್ಲಿ ಹೆಚ್ಚು ಜನಪ್ರೀಯ ಕ್ರಿಕೆಟಿಗ. ಗೇಲ್ ಮೈದಾನಕ್ಕಿಳಿದರೆ ಅಭಿಮಾನಿಗಳ ಹುಚ್ಚೆದ್ದು ಕುಣೀತಾರೆ. ಆದರೆ ಗೇಲ್ ಭಾರತ ಪ್ರವಾಸ ಮಾಡಲು ನಿರಾಕರಿಸಿದ್ದಾರೆ. 


ಜೋಹಾನ್ಸ್‌ಬರ್ಗ್ (ನ.27): ಸತತ ಲೀಗ್ ಕ್ರಿಕೆಟ್ ಆಡುತ್ತಿರುವ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ತೆಗೆದುಕೊಂಡಿರುವ ನಿರ್ಧಾರ ಭಾರತೀಯರಿಗೆ ಅಚ್ಚರಿ ನೀಡಿದೆ. ಐಪಿಎಲ್ ಟೂರ್ನಿ ಮೂಲಕ ಭಾರತೀಯರ ನೆಚ್ಚಿನ ಕ್ರಿಕೆಟಿಗನಾಗಿರುವ ಗೇಲ್, ಭಾರತ ಪ್ರವಾಸಕ್ಕೆ ನಿರಾಕರಿಸಿದ್ದಾರೆ. ಮುಂದಿನ ತಿಂಗಳು ಭಾರತ ವಿರುದ್ಧ ನಡೆಯಲಿರುವ ದ್ವಿಪಕ್ಷೀಯ ಸರಣಿ ಆಡದಿರಲು ಗೇಲ್ ನಿರ್ಧರಿಸಿದ್ದಾರೆ.

ಇದನ್ನೂ ಓದಿ:  ನಾಟೌಟ್ ತೀರ್ಪಿಗೆ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತ ಕ್ರಿಸ್ ಗೇಲ್!

Latest Videos

undefined

ಡಿಸೆಂಬರ್ 6 ರಿಂದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಸರಣಿ ಆರಂಭಗೊಳ್ಳುತ್ತಿದೆ. ಸದ್ಯ ಸೌತ್ ಆಫ್ರಿಕಾದ MSL ಲೀಗ್ ಟೂರ್ನಿ ಆಡುತ್ತಿದ್ದ ಗೇಲ್, ಕಳಪೆ ಪ್ರದರ್ಶನದಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. 5 ಇನಿಂಗ್ಸ್‌ಗಳಲ್ಲಿ ಗೇಲ್ ಕೇವಲ 47 ರನ್ ಸಿಡಿಸಿದ್ದರು. ಟೂರ್ನಿಯಿಂದ ಹೊರಬಿದ್ದ ಬಳಿಕ ಮಾತನಾಡಿದ ಗೇಲ್, ಸದ್ಯ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ವಿಂಡೀಸ್ ಕ್ರಿಕೆಟ್ ಮಂಡಳಿ ಆಹ್ವಾನವನ್ನು ತಿರಸ್ಕರಿಸಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ:  ಎಲ್ಲರೂ ದೂರ ಮಾಡಿದರು, ಕೆಟ್ಟ ಆಟಗಾರ ಹಣೆಪಟ್ಟಿ; ನೋವು ತೋಡಿಕೊಂಡ ಕ್ರಿಸ್ ಗೇಲ್!

ಭಾರತ ವಿರುದ್ದದ ಏಕದಿನ ಸರಣಿ ಆಡಲು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಕ್ರಿಸ್ ಗೇಲ್‌ಗೆ  ಆಹ್ವಾನ ನೀಡಿದೆ. ಯುವ ತಂಡ ಸೇರಿಕೊಳ್ಳುವಂತೆ ಸೂಚಿಸಿದೆ. ಆದರೆ 1 ವರ್ಷ ವಿಶ್ರಾಂತಿ ಬಯಸಿರುವ ಗೇಲ್, ಬಿಗ್‌ಬ್ಯಾಶ್ ಲೀಗ್ ಟೂರ್ನಿಯಿಂದಲೂ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. 

ನವೆಂಬರ್ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!