
ಚೆನ್ನೈ(ಏ.07): ಚೆಸ್ ಮಾಸ್ಟರ್ ಆಗಿ ಬಳಿಕ ಭಾರತ ತಂಡ ಕ್ರಿಕೆಟ್ ಆಟಗಾರರಾಗಿರುವ ಸ್ಪಿನ್ನರ್ ಯಜುವೇಂದ್ರ ಚಹಲ್, ಮತ್ತೆ ಚೆಸ್ ಆಟದತ್ತ ಮರಳಿದ್ದಾರೆ. ಸದ್ಯ ಕೊರೋನಾ ಭೀತಿಯಿಂದಾಗಿ ದೇಶಾದ್ಯಂತ 21 ದಿನ್ ಲಾಕ್‌ಡೌನ್ ಘೋಷಣೆಯಾಗಿದೆ. ಹೀಗಾಗಿ ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡಾಚಟುವಟಿಕೆಗಳು ಸ್ತಬ್ಧವಾಗಿವೆ
ಮನೆಯಲ್ಲಿ ಸಮಯ ಕಳೆಯಲು ಚಹಲ್ ಆನ್‌ಲೈನ್‌ನಲ್ಲಿ ಚೆಸ್ ಆಟವನ್ನಾಡಿದ್ದಾರೆ. ಅಂದಹಾಗೆ ಚಹಲ್ ಕ್ರಿಕೆಟ್‌ಗೆ ಬರುವ ಮುನ್ನ ಭಾರತದ ಚೆಸ್ ಆಟಗಾರನಾಗಿ ಮಿಂಚಿದ್ದರು. 12ನೇ ವಯಸ್ಸಿನಲ್ಲೇ ಚಹಲ್, ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಕ್ರಿಕೆಟ್‌ನಲ್ಲಿ ಈ ಯಶಸ್ಸು ಸಿಗಲು, ಚೆಸ್ ಆಟದಲ್ಲಿ ದೊರೆತ ಕೌಶಲ್ಯ ಕಾರಣ ಎಂದು ಚಹಲ್ ಹೇಳಿದ್ದಾರೆ.
ಅಪ್ಪನ ಜತೆ ಟಿಕ್ ಟಾಕ್ ಮಾಡಿ ಟ್ರೋಲ್ ಆದ ಚಹಲ್..!
ವರ್ಷ ಪೂರ್ತಿ ಕ್ರಿಕೆಟ್ ಜಟುವಟಿಕೆಯಲ್ಲಿ ಬ್ಯುಸಿಯಾಗಿರುತ್ತಿದ್ದ ಟೀಂ ಇಂಡಿಯಾ ಕ್ರಿಕೆಟಿಗರು ಇದೀಗ ಕೊರೋನಾ ವೈರಸ್ ಭೀತಿಯಿಂದಾಗಿ ಮನೆಯಲ್ಲೇ ಉಳಿದಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಸೇರಿದಂತೆ ಹಲವು ಕ್ರೀಡಾತಾರೆಯರು ಪಿಎಂ ಕೇರ್ಸ್‌ಗೆ ದೇಣಿಗೆ ಅರ್ಪಿಸಿದ್ದಾರೆ. ಇದರ ಜೊತೆಗೆ ಕೊರೋನಾ ತಡೆಯುವ ನಿಟ್ಟಿನಲ್ಲಿ ಎಲ್ಲರೂ ಮನೆಯಲ್ಲೇ ಉಳಿಯುವಂತೆ ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಟೈಂ ಪಾಸ್‌ಗೆ ಮನೆ ಕಸ ಗುಡಿಸಿದ ಸೈನಾ
ನವದೆಹಲಿ: ಕೊರೋನಾ ವೈರಸ್ ವ್ಯಾಪಿಸುತ್ತಿರುವುದರಿಂದ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಲಾಗಿದೆ. ವೈರಸ್ ಹರಡದಂತೆ ಎಚ್ಚರ ವಹಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ. ಹೀಗಾಗಿ ಗೃಹ ಬಂಧನದಲ್ಲಿರುವ ಕ್ರೀಡಾ ತಾರೆಯರು ಮನೆಕೆಲಸ ಮಾಡಿಕೊಂಡು ಸಮಯ ಕಳೆಯುತ್ತಿದ್ದಾರೆ.
ಬ್ಯಾಡ್ಮಿಂಟನ್ ಗುರು ಗೋಪಿಚಂದ್‌ರಿಂದ ಕೊರೋನಾ ಸಂಕಷ್ಟಕ್ಕೆ 26 ಲಕ್ಷ ರುಪಾಯಿ ದೇಣಿಗೆ
ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಮನೆ ಕೆಲಸದಲ್ಲಿ ನಿರತರಾಗಿರುವುದಾಗಿ ಹೇಳಿದ್ದಾರೆ. ಸೈನಾ ತಾವೇ ಕಸ ಗುಡಿಸುತ್ತಿರುವ ಫೋಟೋವೊಂದನ್ನು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.