91 ರನ್ ಸಿಡಿಸಿ ರಿಷಬ್ ಪಂತ್ ಔಟ್, ಸಂಕಷ್ಟಕ್ಕೆ ಸಿಲುಕಿದ ಭಾರತ!

Published : Feb 07, 2021, 04:04 PM IST
91 ರನ್ ಸಿಡಿಸಿ ರಿಷಬ್ ಪಂತ್ ಔಟ್, ಸಂಕಷ್ಟಕ್ಕೆ ಸಿಲುಕಿದ ಭಾರತ!

ಸಾರಾಂಶ

ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಆರಂಭಿಕ 2 ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಇಂಗ್ಲೆಂಡ್, 3ನೇ ದಿನ ಬೌಲಿಂಗ್‌ನಲ್ಲಿ ಪರಾಕ್ರಮ ಮೆರೆದಿದೆ. ಪರಿಣಾಮ ತವರಿನಲ್ಲೇ ಭಾರತಕ್ಕೆ ತಲೆನೋವು ಶುರುವಾಗಿದೆ.

ಚೆನ್ನೈ(ಫೆ.07):  ಆಸೀಸ್ ಸರಣಿ ಗೆದ್ದು ತವರಿಗೆ ಆಗಮಿಸಿದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ಮೊದಲ ಪಂದ್ಯವೇ ಕೊಹ್ಲಿ ಪಡೆದೆ ತೀವ್ರ ತಲೆನೋವು ತಂದಿಟ್ಟಿದೆ. ಇಂಗ್ಲೆಂಡ್ ಆರಂಭಿಕ 2 ಅಬ್ಬರಿಸಿ 578 ರನ್ ಸಿಡಿಸಿತು. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಚೆನ್ನೈ ಟೆಸ್ಟ್; ರೂಟ್ ಡಬಲ್ ಸೆಂಚುರಿಗೆ ಹಲವು ದಾಖಲೆ ಉಡೀಸ್!

ತಂಡಕ್ಕೆ ಆಸರೆಯಾಗಿದ್ದ ರಿಷಬ್ ಪಂತ್ 91 ರನ್ ಸಿಡಿಸಿ ಔಟಾದರು. ಈ ಮೂಲಕ ಟೀಂ ಇಂಡಿಯಾ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದೆ. ಇತ್ತ ಚೇತೇಶ್ವರ್ ಪೂಜಾರಾ ಹಾಗೂ ಪಂತ್ ದಿಟ್ಟ ಹೋರಾಟದಿಂದ ಮೊದಲ ಇನ್ನಿಂಗ್ಸ್‌ನಲ್ಲಿ  ತಿರುಗೇಟು ನೀಡುವ ಯತ್ನ ಮಾಡಿದರು. ಆದರೆ ಪೂಜಾರಾ ಕೂಡ 73 ರನ್ ಸಿಡಿಸಿ ನಿರ್ಗಮಿಸಿದರು.

6 ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾಗೆ ವಾಶಿಂಗ್ಟನ್ ಸುಂದರ್ ಹಾಗೂ ರವಿಚಂದ್ರನ್ ಅಶ್ವಿನ್ ಆಸರೆಯಾಗಿದ್ದಾರೆ. 3 ದಿನದಾಟದಲ್ಲೂ ಆಂಗ್ಲರೇ ಮೇಲುಗೈ ಸಾಧಿಸಿದ್ದಾರೆ.  ಈ ಮೂಲಕ ಚೆನ್ನೈ ಟೆಸ್ಟ್ ಪಂದ್ಯ ಬಹುತೇಕ ಇಂಗ್ಲೆಂಡ್ ತಂಡದ ಹಿಡಿತದಲ್ಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ