INDvsBAN ಗಿಲ್ ಸೆಂಚುರಿ, ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 6 ವಿಕೆಟ್ ವಿಕ್ಟರಿ

Published : Feb 20, 2025, 09:50 PM ISTUpdated : Feb 20, 2025, 10:39 PM IST
INDvsBAN ಗಿಲ್ ಸೆಂಚುರಿ, ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 6 ವಿಕೆಟ್ ವಿಕ್ಟರಿ

ಸಾರಾಂಶ

ಶುಭಮನ್ ಗಿಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಶುಭಾರಂಭ ಮಾಡಿದೆ. ಬಾಂಗ್ಲಾದೇಶ ವಿರುದ್ದ ಭಾರತ 6 ವಿಕೆಟ್ ಗೆಲುವು ದಾಖಲಿಸಿದೆ.   

ದುಬೈ(ಫೆ.20)  ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಗೆಲುವಿನ ಆರಂಭ ಪಡೆದಿದೆ. ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಶುಬಮನ್ ಗಿಲ್ ನೆರವಿನಿಂದ 6 ವಿಕೆಟ್ ಗೆಲುವು ದಾಖಲಿಸಿದೆ. ಬಾಂಗ್ಲಾದೇಶ ನೀಡಿದ 229 ರನ್ ಟಾರ್ಗೆಟ್ ಚೇಸ್ ಮಾಡಿದ ಭಾರತ ಓವರ್‌ಗಳಲ್ಲಿ ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಶುಬಮನ್ ಗಿಲ್ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ರೂವಾರಿಯಾಗಿದ್ದಾರೆ.

229 ರನ್​ ಗುರಿಯನ್ನ ಬೆನ್ನಟ್ಟಲು ಬಂದ ಟೀಮ್ ಇಂಡಿಯಾ 46.3 ಓವರ್​ನಲ್ಲಿ ಈ ಗುರಿಯನ್ನ ಮುಟ್ಟಿತು. ಬ್ಯಾಟಿಂಗ್​ನಲ್ಲಿ ಶುಭಮನ್ ಗಿಲ್ ಧಮಾಕ ಮಾಡಿದ್ರು ಮತ್ತೆ 101 ರನ್​ಗಳ ಸ್ಪೋಟಕ ಶತಕ ಬಾರಿಸಿದ್ರು. ಅವರು ತಮ್ಮ ಆಟದಲ್ಲಿ 9 ಬೌಂಡರಿ ಮತ್ತೆ 2 ಸಿಕ್ಸರ್ ಹೊಡೆದ್ರು. ಹಾಗೇ, ಕೆ.ಎಲ್. ರಾಹುಲ್ 41 ರನ್ ಹೊಡೆದು ಔಟ್ ಆಗದೆ ಉಳಿದ್ರು. ಅವರ ಜೊತೆಗೆ ಕ್ಯಾಪ್ಟನ್ ರೋಹಿತ್ ಶರ್ಮಾ 41, ವಿರಾಟ್ ಕೊಹ್ಲಿ 22, ಶ್ರೇಯಸ್ ಅಯ್ಯರ್ 15 ಮತ್ತೆ ಅಕ್ಷರ್ ಪಟೇಲ್ 8 ರನ್ ಹೊಡೆದ್ರು. ಗಿಲ್ ಅವರ ಒಳ್ಳೆ ಆಟಕ್ಕೆ ಪ್ಲೇಯರ್ ಆಫ್ ದ ಮ್ಯಾಚ್ ಅವಾರ್ಡ್ ಸಿಕ್ತು.

INDvsBAN ಬಾಂಗ್ಲಾ ವಿರುದ್ಧ ಗೆಲುವು ದಾಖಲಿಸಿದರೆ ತೆರೆಯಲಿದೆ ಭಾರತದ ಸೆಮೀಸ್ ಬಾಗಿಲು

ಬಾಂಗ್ಲಾ ದೇಶದ ಬೌಲಿಂಗ್ ಬಗ್ಗೆ ಒಂದ್ಸಲ ನೋಡಿದ್ರೆ, ಅವರ ಕಡೆಯಿಂದ ಜಾಸ್ತಿ ಅಂದ್ರೆ 10 ಓವರ್​ನಲ್ಲಿ 38 ರನ್ ಕೊಟ್ಟು 2 ವಿಕೆಟ್ ರಿಸಾದ್ ಹುಸೇನ್ ಪಡೆದ್ರು. ಹಾಗೇ, ತಸ್ಕಿನ್ ಅಹ್ಮದ್ 9 ಓವರ್​ನಲ್ಲಿ 36 ರನ್ ಕೊಟ್ಟು 1 ವಿಕೆಟ್ ಕಿತ್ಕೊಂಡ್ರು. ಮುಸ್ತಫಿಜುರ್ ರೆಹಮಾನ್ 9 ಓವರ್​ನಲ್ಲಿ 62 ರನ್ ಕೊಟ್ಟು 1 ವಿಕೆಟ್ ಕಬಳಿಸಿದರು.

ಈ ದಿನ ಬಾಂಗ್ಲಾದೇಶದ ನಾಯಕ ನಜ್ಮುಲ್ ಹುಸೇನ್ ಶಾಂತೋ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮೊದಲ ಓವರ್‌ನಲ್ಲಿಯೇ ಮೊಹಮ್ಮದ್ ಶಮಿ ಅವರು ಸೌಮ್ಯ ಸರ್ಕಾರ್ (0) ವಿಕೆಟ್ ಪಡೆದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಶಾಂತೋ (0) ರನ್ ಗಳಿಸುವ ಮುನ್ನವೇ ಔಟಾದರು. ಶಮಿ ಅವರ ಎರಡನೇ ಬಲಿಪಶು ಮೆಹಿದಿ ಹಸನ್ ಮಿರಾಜ್ (5). ಒಂಬತ್ತನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಅವರು ಸತತ 2 ಎಸೆತಗಳಲ್ಲಿ ತಂಜಿತ್ ಹಸನ್ (25) ಮತ್ತು ಮುಶ್ಫಿಕರ್ ರಹೀಮ್ (0) ಅವರನ್ನು ಔಟ್ ಮಾಡಿದರು. ಅವರು ಹ್ಯಾಟ್ರಿಕ್ ಪಡೆಯುವ ಅವಕಾಶವಿತ್ತು. ಆದರೆ, ಸ್ಲಿಪ್‌ನಲ್ಲಿ ರೋಹಿತ್ ಸುಲಭ ಕ್ಯಾಚ್ ಕೈಬಿಟ್ಟರು. ನಂತರ ಹೃದಯ ಮತ್ತು ಜಾಕೆರ್ ಜೋಡಿಯು 154 ರನ್‌ಗಳ ಜೊತೆಯಾಟವಾಡಿತು. ಹೃದಯ 118 ಎಸೆತಗಳಲ್ಲಿ 100 ರನ್ ಗಳಿಸಿದರು. ಜಾಕೆರ್ 114 ಎಸೆತಗಳಲ್ಲಿ 68 ರನ್ ಗಳಿಸಿದರು. ಶಮಿ 53 ರನ್ ನೀಡಿ 5 ವಿಕೆಟ್ ಪಡೆದರು. ಹರ್ಷಿತ್ ರಾಣಾ 31 ರನ್ ನೀಡಿ 3 ವಿಕೆಟ್ ಪಡೆದರು. ಅಕ್ಷರ್ 43 ರನ್ ನೀಡಿ 2 ವಿಕೆಟ್ ಪಡೆದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!
20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!