
ಮುಂಬೈ (ಜ.18): ಭಾರತದ ಅಂಡರ್-19 ತಂಡದ ಮಾಜಿ ನಾಯಕ ಮತ್ತು ಅರ್ಜುನ್ ಖೋಟ್ಕರ್ ಅವರ ಅಳಿಯ ಹಾಗೂ ಆರ್‌ಸಿಬಿ ತಂಡದ ಮಾಜಿ ಆಟಗಾರ ಹಾಗೂ 19 ವಯೋಮಿತಿ ತಂಡದ ಮಾಜಿ ನಾಯಕ ವಿಜಯ್ ಜೋಲ್ ವಿರುದ್ಧ ಪ್ರಕರಣ ದಾಖಲಾಗಿದ್ದಲ್ಲದೆ, ಅವರನ್ನು ಬಂಧಿಸಲಾಗಿದೆ. ಕ್ರಿಪ್ಟೋಕರೆನ್ಸಿ ವಹಿವಾಟಿನಲ್ಲಿ ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿರುವ ಆರೋಪ ವಿಜಯ್ ಜೋಲ್ ಮೇಲಿದೆ. ಈ ಸಂಬಂಧ ಘಾಣಸಂಗಿ ಪೊಲೀಸ್ ಠಾಣೆಯಲ್ಲಿ ಜಾಲ್ನಾದಲ್ಲಿ ಪ್ರಕರಣ ದಾಖಲಾಗಿದೆ. ಈ ವಿಷಯದಲ್ಲಿ ವಿಜಯ್ ಜೋಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಉದ್ಯಮಿ ಕಿರಣ್ ಖಾರತ್ ಮತ್ತು ಅವರ ಪತ್ನಿ ವಿಜಯ್ ಜೋಲ್ ವಿರುದ್ಧ ಪ್ರಕರಣದಲ್ಲಿ ಆರೋಪಿಸಿದ್ದರು. ವಿಜಯ್ ಜೋಲ್ ತನ್ನ ಗೂಂಡಾಗಳನ್ನು ಕಳುಹಿಸಿ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ವಿಜಯ್ ಜೋಲ್ ಹಾಗೂ ಅವರ ಸಹೋದರ ವಿಕ್ರಮ್ ಜೋಲ್ ಜೊತೆಗೆ 15 ಜನರ ವಿರುದ್ಧ ದೂರು ದಾಖಲಿಸಿದ್ದಾರೆ.
ಹತ್ತು ದಿನಗಳ ಹಿಂದೆ ಅರ್ಜುನ್ ಖೋಟ್ಕರ್ ಅವರ ಅಳಿಯ ವಿಜಯ್ ಜೋಲ್ ನನ್ನನ್ನು ಕಿಡ್ನಾಪ್ ಮಾಡಿದ್ದರು. ನನ್ನನ್ನು ಪುಣೆಯಿಂದ ಜಲನ್ಯಾಗೆ ಕರೆತಂದು ನಂತರ ನನ್ನ ಮನೆ, ನನ್ನ ಪ್ಲಾಟ್ ಅನ್ನು ಗನ್ ಪಾಯಿಂಟ್‌ನಲ್ಲಿಟ್ಟು ನೋಂದಾಯಿಸಿಕೊಂಡಿದ್ದಾನೆ ಎಂದು ಕಿರಣ್ ಖಾರತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿಜಯ್ ಜೋಲ್ ಕ್ರಿಪ್ಟೋಕರೆನ್ಸಿ ಮೂಲಕ ಹೂಡಿಕೆ ಮಾಡಿದ್ದಾರೆ ಎಂದು ಉದ್ಯಮಿ ಕಿರಣ್ ಖಾರತ್ ಹೇಳಿದ್ದಾರೆ. ಆದರೆ ಕರೆನ್ಸಿಯ ಮಾರುಕಟ್ಟೆ ಮೌಲ್ಯ ಕುಸಿಯಿತು. ಹೀಗಾಗಿ ನನ್ನ ಮೇಲೆ ಆರೋಪ ಹೊರಿಸಿ ವಿಜಯ್ ಜೋಲ್ ಮತ್ತು ಆತನ ಸಹೋದರ ಕೆಲವು ಗೂಂಡಾಗಳನ್ನು ನನ್ನ ಮನೆಗೆ ಕಳುಹಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಪ್ರಕರಣದಲ್ಲಿ ವಿಜಯ್ ಜೋಲ್, ವಿಕ್ರಮ್ ಜೋಲ್ ಸೇರಿದಂತೆ 15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
SA20 League: ಡೆಲ್ಲಿ ಪರ ವಿಲ್ ಜೇಕ್ಸ್ ಗುಡುಗು, ಆರ್‌ಸಿಬಿ ಅಭಿಮಾನಿಗಳಲ್ಲಿ ಪುಳಕ..!
ಅರ್ಜುನ್ ಖೋಟ್ಕರ್ ಅವರ ಅಳಿಯ ವಿಜಯ್ ಜೋಲ್ ವಿರುದ್ಧ ನಾವು ಪ್ರಕರಣ ದಾಖಲಿಸಿದ್ದೇವೆ. 15 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಪ್ರಕಾಶ್ ಮಹಾಜನ್ ಮಾಹಿತಿ ನೀಡಿದ್ದಾರೆ.
10 ತಿಂಗಳ ಹಿಂದಷ್ಟೇ ಲೆದರ್‌ಬಾಲ್‌ನಲ್ಲಿ ಬೌಲಿಂಗ್ ಆರಂಭಿಸಿದ್ದ ಅವಿನಾಶ್ ಸಿಂಗ್, RCB ಸರ್ಪ್ರೈಸ್ ಪ್ಯಾಕೇಜ್..!
ಶಾಸಕ ಕೈಲಾಸ್ ಗೊರಂಟ್ಯಾಲ್‌ರಿಂದಲೂ ಖೋಟ್ಕರ್ ಮತ್ತು ಜೋಲ್ ವಿರುದ್ಧ ಆರೋಪ: ಇದೇ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಕೈಲಾಸ್ ಗೊರಂಟ್ಯಾಲ್ ಅವರು ಅರ್ಜುನ್ ಖೋಟ್ಕರ್ ಮತ್ತು ಅವರ ಅಳಿಯ ವಿಜಯ್ ಜೋಲ್ ಅವರ ಕುಟುಂಬಗಳ ವಿರುದ್ಧ ಆರೋಪ ಮಾಡಿದ್ದಾರೆ. ಕೈಲಾಸ್ ಗೋರಂಟ್ಯಾಳ್ ಅವರು ಜ.16ರಂದು ಪತ್ರಿಕಾಗೋಷ್ಠಿ ನಡೆಸಿದ್ದರು.ಇದರಲ್ಲಿ ಖೋಟ್ಕರ್ ಮತ್ತು ಜೋಲ್ ಕುಟುಂಬದವರು ಕಿರಣ್ ಖಾರತ್ ಅವರ ಕೊಲೆಗೆ ಸುಪಾರಿ ನೀಡಿದ್ದರು ಎಂದು ಗೋರಂಟ್ಯಾಳ್ ಹೇಳಿದ್ದಾರೆ. ಖೋಟ್ಕರ್ ಮತ್ತು ಜೋಲ್ ಕುಟುಂಬವನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಇದರ ಬೆನ್ನಲ್ಲೇ ಇದೀಗ ಕಿರಣ್ ಖರತ್ ಅವರು ಅರ್ಜುನ್ ಖೋಟ್ಕರ್ ಅವರ ಅಳಿಯ ವಿಜಯ್ ಜೋಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.