
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಪುತ್ರಿ ಅನಯಾ ಬಂಗಾರ್ ಸಾರ್ವಕಾಲಿಕ ಆಲ್ ಮಾದರಿಯ ಕ್ರಿಕೆಟ್‌ಗೆ ಯೋಗ್ಯವಾಗಿರುವ ಪ್ಲೇಯಿಂಗ್ 11 ಪ್ರಕಟಿಸಿದ್ದಾರೆ. ಅವರ ತಂಡದಲ್ಲಿ ಎಂಎಸ್ ಧೋನಿ ಅವರಿಗೆ ಕ್ಯಾಪ್ಟನ್ಸಿ ನೀಡಿದ್ದಾರೆ. ವಿಶೇಷ ಅಂದರೆ ಅವರ ತಂಡದಲ್ಲಿ ಮಹಿಳಾ ಆಟಗಾರರೂ ಇದ್ದಾರೆ.
ಅವರು ಪುರುಷ ಮತ್ತು ಮಹಿಳಾ ಕ್ರಿಕೆಟಿಗರನ್ನು ಪ್ಲೇಯಿಂಗ್ XI ನಲ್ಲಿ ಸೇರಿಸಿಕೊಂಡಿದ್ದಾರೆ. ವಿಶೇಷ ಅಂದರೆ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳನ್ನು ಒಳಗೊಂಡ ಎಲ್ಲಾ ಮಾದರಿಯ ಪ್ಲೇಯಿಂಗ್-11ನಲ್ಲಿ ಮಹಿಳಾ ಮತ್ತು ಪುರುಷ ಕ್ರಿಕೆಟಿಗರು ಇದ್ದಾರೆ. ಇತ್ತೀಚೆಗೆ ಅನಯಾ ಬಂಗಾರ್ ಅವರು ಕಾರ್ಯಕ್ರಮ ಒಂದಕ್ಕೆ ಸಂದರ್ಶನ ನೀಡಲು ಹೋಗಿದ್ದರು. ಈ ವೇಳೆ ನಿರೂಪಕರು ಕೇಳಿದ ಪ್ರಶ್ನೆಗೆ ತಮಾಷೆಯಾಗಿ ಪ್ಲೇಯಿಂಗ್-11 ಪ್ರಕಟಿಸಿದ್ದಾರೆ.
ಅನಯಾ ಬಂಗಾರ್ ಆರಂಭಿಕ ಜೋಡಿಯಾಗಿ ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಇಬ್ಬರು ಬ್ಯಾಟರ್‍ಗಳು ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ. ಅತಾರಾಷ್ಟ್ರೀಯ T20 ಪಂದ್ಯಗಳಲ್ಲಿ.. ವೈಭವ್ 185.63 ಸ್ಟ್ರೈಕ್ ರೇಟ್ ಹೊಂದಿದ್ದರೆ, ಅಭಿಷೇಕ್ 196.83 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಹೆಸರನ್ನು ಸೇರಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 34,357 ರನ್ ಗಳಿಸಿದ ಖ್ಯಾತಿ ಇವರದ್ದಾಗಿದೆ.
ಇನ್ನು ಭಾರತ ತಂಡದ ಚೇಸ್ ಮಾಸ್ಟರ್ ಅಂತಲೇ ಖ್ಯಾತಿ ಪಡೆದಿರುವ ರನ್ ಮಷಿನ್ ವಿರಾಟ್ ಕೊಹ್ಲಿಯನ್ನ ನಾಲ್ಕನೇ ಸ್ಥಾನದಲ್ಲಿ ಆಯ್ಕೆ ಮಾಡಿದ್ದಾರೆ. ಅವರು ಹೆಚ್ಚಾಗಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಅನಯಾ ಬಂಗಾರ್, ಸಚಿನ್‌ಗೆ ಮೂರನೇ ಕ್ರಮಾಂಕ ನೀಡಿ.. ಕೊಹ್ಲಿಗೆ ನಾಲ್ಕನೇ ಬ್ಯಾಟಿಂಗ್ ಆರ್ಡರ್ ಕೊಟ್ಟಿದ್ದಾರೆ. ಮಹಿಳಾ ಕ್ರಿಕೆಟ್ ಸ್ಟಾರ್ ಹರ್ಮನ್‌ಪ್ರೀತ್ ಕೌರ್ ಕೂಡ ಅನಯಾ ತಂಡಲ್ಲಿದ್ದಾರೆ. ಆಲ್-ರೌಂಡರ್ ಪಾತ್ರವನ್ನು ಹಾರ್ದಿಕ್ ಪಾಂಡ್ಯಗೆ ನೀಡಿದ್ದಾರೆ. ಇವರು ತಂಡದಲ್ಲಿ ಐದನೇ ಬೌಲರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಅನನ್ಯಾ ಬಂಗಾರ್ ಕ್ರಿಕೆಟ್ ಆಡುವಾಗ ಎಡಗೈ ಆಫ್-ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಿದ್ದರು. ಅವರು ತಮ್ಮ ಬೌಲರ್‌ಗಳ ಪಟ್ಟಿಯಲ್ಲಿ ತಮ್ಮ ಜೊತೆಗೆ ಜೂಲನ್ ಗೋಸ್ವಾಮಿ ಮತ್ತು ಜಸ್ಪ್ರೀತ್ ಬುಮ್ರಾ ಹೆಸರನ್ನು ಸೇರಿಸಿದ್ದಾರೆ. ಜೊತೆಗೆ ಚೊಚ್ಚಲ ವಿಶ್ವಕಪ್ ಗೆಲ್ಲಿಸಿಕೊಟ್ಟ ಹೀರೋ ಕಪಿಲ್ ದೇವ್ ಹೆಸರನ್ನೂ ಸೇರಿಸಿದ್ದಾರೆ.
ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ , ಹರ್ಮನ್‌ಪ್ರೀತ್ ಕೌರ್, ಹಾರ್ದಿಕ್ ಪಾಂಡ್ಯ, ಎಂಎಸ್ ಧೋನಿ (ನಾಯಕ), ಜೂಲನ್ ಗೋಸ್ವಾಮಿ, ಅನನ್ಯ ಬಂಗಾರ್, ಜಸ್ಪ್ರೀತ್ ಬುಮ್ರಾ , ಕಪಿಲ್ ದೇವ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.