ಇಂಡೋ-ಪಾಕ್ ಆಡಿದ್ದ ಸ್ಟೇಡಿಯಂ ನೆಲಸಮ ಮಾಡಲು ಬಂದಿಳಿದ ನೂರಾರು ಬುಲ್ಡೋಜರ್ಸ್‌..! ಕಾರಣ ಇಲ್ಲಿದೆ

Published : Jun 13, 2024, 05:19 PM ISTUpdated : Jun 13, 2024, 05:26 PM IST
ಇಂಡೋ-ಪಾಕ್ ಆಡಿದ್ದ ಸ್ಟೇಡಿಯಂ ನೆಲಸಮ ಮಾಡಲು ಬಂದಿಳಿದ ನೂರಾರು ಬುಲ್ಡೋಜರ್ಸ್‌..! ಕಾರಣ ಇಲ್ಲಿದೆ

ಸಾರಾಂಶ

ಈ ಕ್ರೀಡಾಂಗಣಕ್ಕೆ ಆಸ್ಟ್ರೇಲಿಯಾದಿಂದ ತರಿಸಲಾದ ಡ್ರಾಪ್‌ ಇನ್‌ ಪಿಚ್‌ಗಳನ್ನು ಅಳವಡಿಸಲಾಗಿತ್ತು. 35 ಸಾವಿರ ಆಸನ ಸಾಮರ್ಥ್ಯ ಹೊಂದಿದ್ದ ಈ ಸ್ಟೇಡಿಯಂ ಅನ್ನು ತಾತ್ಕಾಲಿಕವಾಗಿ ಟಿ20 ವಿಶ್ವಕಪ್‌ಗಾಗಿಯೇ ನಿರ್ಮಿಸಲಾಗಿತ್ತು. ಇದೇ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಫೈಟ್ ಕೂಡಾ ನಡೆದಿತ್ತು. 

ನ್ಯೂಯಾರ್ಕ್‌: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಯುಎಸ್‌ಎ ಹಾಗೂ ವೆಸ್ಟ್ ಇಂಡೀಸ್ ದೇಶಗಳು ಜಂಟಿ ಆತಿಥ್ಯ ವಹಿಸಿದ್ದವು. ಈ ಪೈಕಿ ಅಮೆರಿಕದ ಲಾಂಗ್‌ ಐಲ್ಯಾಂಡ್‌ನ ಐಸನ್‌ಹೋವರ್ ಪಾರ್ಕ್‌ನಲ್ಲಿನ ನಾಸೌ ಕೌಂಟಿ ಅಂತಾರಾಷ್ಟ್ರೀಯ ಸ್ಟೇಡಿಯಂ, ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೂ ಸೇರಿದಂತೆ 8 ಪಂದ್ಯಗಳಿಗೆ ಆತಿಥ್ಯ ವಹಿಸಿತ್ತು. ಇದೀಗ ಈ ಸ್ಟೇಡಿಯಂ ಅನ್ನು ಭಗ್ನಗೊಳಿಸಲು ನೂರಾರು ಬುಲ್ಡೋಜರ್ಸ್‌ಗಳು ಸ್ಟೇಡಿಯಂನತ್ತ ಜಮಾವಣೆಗೊಂಡಿವೆ ಎಂದು ವರದಿಯಾಗಿದೆ. 

ಈ ಕ್ರೀಡಾಂಗಣವನ್ನು ಕೇವಲ 5 ತಿಂಗಳಿನಲ್ಲಿ ಟಿ20 ವಿಶ್ವಕಪ್‌ ಪಂದ್ಯಗಳಿಗಾಗಿ 30 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು 250 ಕೋಟಿ ರು.) ವೆಚ್ಚದಲ್ಲಿ, 40 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು. ಭಾರತ ಹಾಗೂ ಯುಎಸ್‌ಎ ನಡುವಿನ ಗ್ರೂಪ್ 'ಎ' ಹಂತದ ಪಂದ್ಯವು ಈ ಸ್ಟೇಡಿಯಂನಲ್ಲಿ ಕೊನೆಯ ಪಂದ್ಯ ನಡೆದಿತ್ತು. ಇದೀಗ ನ್ಯೂಯಾರ್ಕ್‌ನ ನಾಸೌ ಕ್ರೀಡಾಂಗಣವನ್ನು ಟೂರ್ನಿಯ ಬಳಿಕ ಆಯೋಜಕರು ನೆಲಕ್ಕುರುಳಿಸಲು ಮುಂದಾಗಿದ್ದು, ನೂರಾರು ಬುಲ್ಡೋಜರ್‌ಗಳು ಸ್ಟೇಡಿಯಂ ಹೊರಗೆ ಸಾಲಾಗಿ ನಿಂತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ಕ್ರೀಡಾಂಗಣಕ್ಕೆ ಆಸ್ಟ್ರೇಲಿಯಾದಿಂದ ತರಿಸಲಾದ ಡ್ರಾಪ್‌ ಇನ್‌ ಪಿಚ್‌ಗಳನ್ನು ಅಳವಡಿಸಲಾಗಿತ್ತು. 35 ಸಾವಿರ ಆಸನ ಸಾಮರ್ಥ್ಯ ಹೊಂದಿದ್ದ ಈ ಸ್ಟೇಡಿಯಂ ಅನ್ನು ತಾತ್ಕಾಲಿಕವಾಗಿ ಟಿ20 ವಿಶ್ವಕಪ್‌ಗಾಗಿಯೇ ನಿರ್ಮಿಸಲಾಗಿತ್ತು. ಇದೇ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಫೈಟ್ ಕೂಡಾ ನಡೆದಿತ್ತು. 

ಟೀಂ ಇಂಡಿಯಾ ಯಶಸ್ಸಿನ ಹಿಂದೆ ಏಕೈಕ ಮಹಿಳಾ ಸಿಬ್ಬಂದಿ..! ಯಾರೀ ಮಿಸ್ಟ್ರಿ ಗರ್ಲ್‌? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಇದೀಗ ಆ ಸ್ಟೇಡಿಯಂಗೆ ಅಳವಡಿಸಲಾಗಿದ್ದ, ಸ್ಟ್ಯಾಂಡ್ ಹಾಗೂ ಇನ್ನಿತರ ಪರಿಕರಗಳನ್ನು ಸ್ಥಳಾಂತರಿಸಲು ಆಯೋಜಕರು ಮುಂದಾಗಿದ್ದಾರೆ. ಆದರೆ ಪಿಚ್ ಹಾಗೂ ಮೈದಾನವನ್ನು ಹಾಗೆಯೇ ಉಳಿಸಿಕೊಳ್ಳಲು ಆಯೋಜಕರು ನಿರ್ಧರಿಸಿದ್ದಾರೆ. ಈ ಕ್ರಿಕೆಟ್ ಪಿಚ್‌ನಲ್ಲಿ ಸ್ಥಳೀಯ ಕ್ರಿಕೆಟ್ ಕ್ಲಬ್‌ಗಳು ಹಾಗೂ ಕ್ರಿಕೆಟ್ ಅಭಿಮಾನಿಗಳ ಬಳಕೆಗೆ ಮುಕ್ತ ಅವಕಾಶ ನೀಡಲು ಆಯೋಜಕರು ನಿರ್ಧರಿಸಿದ್ದಾರೆ. 

ಇದರಿಂದ ಅಮೆರಿಕದಲ್ಲಿ ಕ್ರಿಕೆಟ್‌ ಆಡುವ ಯುವ ಪ್ರತಿಭೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ ಎನ್ನುವುದು ಕ್ರಿಕೆಟ್ ಆಯೋಜಕರ ಲೆಕ್ಕಾಚಾರವಾಗಿದೆ. ಅಷ್ಟಾಗಿ ಕ್ರಿಕೆಟ್ ಪರಿಚಿತವಲ್ಲದ ಅಮೆರಿಕದಲ್ಲಿ ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆತಿಥ್ಯ ವಹಿಸಿದೆ. ಹೀಗಿದ್ದು ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೈದಾನಕ್ಕೆ ಬಂದು ಅಭಿಮಾನಿಗಳನ್ನು ಹುರಿದುಂಬಿಸಿದ್ದಾರೆ.

ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡ ಪ್ರಕಟ..! ಆದ್ರೆ ಮೊದಲ ಸ್ಥಾನದಲ್ಲಿರುವುದು ಆರ್‌ಸಿಬಿ, ಕೆಕೆಆರ್ ಅಲ್ಲವೇ ಅಲ್ಲ

ಇನ್ನು ಯುಎಸ್‌ಎ ತಂಡವು ಭಾರತ ಎದುರು ಸೋಲಿನ ಹೊರತಾಗಿಯೂ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 'ಎ' ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿದೆ. ಒಂದು ವೇಳೆ ಯುಎಸ್‌ಎ ತಂಡವು ತನ್ನ ಪಾಲಿನ ಕೊನೆಯ ಪಂದ್ಯದಲ್ಲಿ ಕೆನಡಾ ಎದುರು ಗೆಲುವು ಸಾಧಿಸಿದರೆ, ಅನಾಯಾಸವಾಗಿ ಸೂಪರ್ 8 ಹಂತಕ್ಕೆ ಎರಡನೇ ತಂಡವಾಗಿ ಲಗ್ಗೆಯಿಡಲಿದೆ. ಈಗಾಗಲೇ 'ಎ' ಗುಂಪಿನಿಂದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!