
ಲಂಡನ್: Braydon Carse Detained ಡರ್ಬಿಯ ನೈಟ್‌ಕ್ಲಬ್ ಒಂದರಲ್ಲಿ ನಡೆದ ಗಲಾಟೆ ಸಂಬಂಧ, ಇಂಗ್ಲೆಂಡ್ ವೇಗದ ಬೌಲರ್ ಬ್ರೈಡನ್ ಕಾರ್ಸ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಡರ್ಬಿಶೈರ್ ವಿರುದ್ಧ ಡರ್ಹಾಮ್ ತಂಡ ಭರ್ಜರಿ ಜಯ ಸಾಧಿಸಿತ್ತು. ಈ ಗೆಲುವಿನ ಸಂಭ್ರಮಾಚರಣೆಗಾಗಿ 'ಮೋಲಿ ಮಲೋನ್ಸ್ ಐರಿಷ್ ಟವೆರ್ನ್' ಅನ್ನೋ ನೈಟ್‌ಕ್ಲಬ್‌ಗೆ ಹೋದಾಗ ಈ ಗಲಾಟೆ ನಡೆದಿದೆ. ಈ ಘಟನೆ ನಡೆದಾಗ ಇಂಗ್ಲೆಂಡ್ ತಂಡದ ಮಾಜಿ ನಾಯಕ ಬೆನ್ ಸ್ಟೋಕ್ಸ್ ಮತ್ತು ಆಲ್‌ರೌಂಡರ್ ಮ್ಯಾಥ್ಯೂ ಪಾಟ್ಸ್ ಕೂಡ ಬ್ರೈಡನ್ ಕಾರ್ಸ್ ಜೊತೆಗಿದ್ದರು.
ನೈಟ್‌ಕ್ಲಬ್‌ನಲ್ಲಿ ನಡೆದ ಜಗಳದ ನಂತರ ಪೊಲೀಸರು ಕಾರ್ಸ್‌ಗೆ ಬೇಡಿ ಹಾಕಿ ಕರೆದೊಯ್ಯುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ವಿಡಿಯೋದಲ್ಲಿ ಬೆನ್ ಸ್ಟೋಕ್ಸ್ ಮತ್ತು ಮ್ಯಾಥ್ಯೂ ಪಾಟ್ಸ್, ಕಾರ್ಸ್ ಪಕ್ಕದಲ್ಲಿ ನಿಂತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಆದರೆ, ಪೊಲೀಸರು ಕಾರ್ಸ್ ವಿರುದ್ಧ ಯಾವುದೇ ಅಧಿಕೃತ ಪ್ರಕರಣ ದಾಖಲಿಸದೆ ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ.
"ಈ ಘಟನೆ ಬಗ್ಗೆ ತನಿಖೆ ಆರಂಭಿಸಿದ್ದೇವೆ. ಹೆಚ್ಚಿನ ಮಾಹಿತಿ ಸಿಕ್ಕ ನಂತರ ಅಧಿಕೃತವಾಗಿ ಪ್ರತಿಕ್ರಿಯೆ ನೀಡುತ್ತೇವೆ" ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ECB) ವಕ್ತಾರರು ತಿಳಿಸಿದ್ದಾರೆ. 31 ವರ್ಷದ ಬ್ರೈಡನ್ ಕಾರ್ಸ್, ಪಾಕಿಸ್ತಾನ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಮೊದಲ ಟೆಸ್ಟ್‌ನಲ್ಲಿ ಆಡದ ಕಾರಣ, ಅವರು ಡರ್ಹಾಮ್ ಪರ ಕೌಂಟಿ ಪಂದ್ಯದಲ್ಲಿ ಆಡಿ ಎರಡು ವಿಕೆಟ್‌ಗಳನ್ನು ಪಡೆದಿದ್ದರು.
Durham bowler Brydon Carse, who is in England squad for second Test, was released without charge after a nightclub incident while celebrating victory over Derbyshire@willis_macp has the details ⤵️https://t.co/4YXyQWChe5 pic.twitter.com/zFKA3lgPVi
— Telegraph Cricket (@TeleCricket) August 23, 2026
ಆಗಸ್ಟ್ 27 ರಂದು ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ವಿವಾದದ ಹಿನ್ನೆಲೆಯಲ್ಲಿ, ತಂಡದಲ್ಲಿ ಆಟಗಾರರಿಗೆ ಗಾಯಗಳಾದರೂ ಕಾರ್ಸ್‌ನನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಈ ಹಿಂದೆಯೂ ಇಂಗ್ಲೆಂಡ್ ಆಟಗಾರರು ಇದೇ ರೀತಿ ನೈಟ್‌ಕ್ಲಬ್ ವಿವಾದಗಳಲ್ಲಿ ಸಿಲುಕಿಕೊಂಡಿದ್ದು ಕ್ರಿಕೆಟ್ ಬೋರ್ಡ್‌ಗೆ ತಲೆನೋವಾಗಿ ಪರಿಣಮಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.