ಮೆಲ್ಬರ್ನ್‌ನಲ್ಲಿ ಆರಂಭವಾಗಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆದ್ದರೆ ಭಾರತ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ. ಆಸ್ಟ್ರೇಲಿಯಾ ಗೆದ್ದರೆ, ದಶಕ ಬಳಿಕ ಭಾರತ ವಿರುದ್ಧ ಟೆಸ್ಟ್ ಸರಣಿ ಗೆಲ್ಲುವ ಆಸೆಯನ್ನು ಜೀವಂತವಾಗಿ ಇರಿಸಿಕೊಳ್ಳಲಿದೆ.
ಬೆಂಗಳೂರು: ಇದು ಅತಿದೊಡ್ಡ ಕದನ. ಮೆಲ್ಬರ್ನ್‌ನಲ್ಲಿ ಗುರುವಾರದಿಂದ ಆರಂಭಗೊಂಡ ಆಸ್ಟ್ರೇಲಿಯಾ ವಿರುದ್ಧ 4ನೇ ಟೆಸ್ಟ್‌ನಲ್ಲಿ ಗೆದ್ದರೆ, ಭಾರತ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಮತ್ತೊಮ್ಮೆ ತನ್ನಲ್ಲೇ ಉಳಿಸಿಕೊಳ್ಳಲಿದೆ. ಒಂದೊಮ್ಮೆ ಆಸ್ಟ್ರೇಲಿಯಾ ಗೆದ್ದರೆ, ದಶಕ ಬಳಿಕ ಭಾರತ ವಿರುದ್ಧ ಟೆಸ್ಟ್ ಸರಣಿ ಗೆಲ್ಲುವ ಆಸೆಯನ್ನು ಜೀವಂತವಾಗಿ ಇರಿಸಿಕೊಳ್ಳಲಿದೆ.
ಆತಿಥೇಯ ತಂಡ ಸೋಲುಂಡರೆ ಹಲವು ಪ್ರಶ್ನೆಗಳು ಉದ್ಭವಿಸಲಿದ್ದು, ಕೆಲ ಆಟಗಾರರ ವೃತ್ತಿಬದುಕು ಕೊನೆಗೊಳ್ಳಲಿದೆ. ಇನ್ನು ಭಾರತ ಸೋತರೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಿಂದ ತಂಡ ಬಹುತೇಕ ಹೊರಬೀಳಲಿದೆ.
undefined
ಮೆಲ್ಬರ್ನ್‌ನಲ್ಲಿ ಉತ್ತಮ ವಾತಾವರಣ ಇರಲಿದೆ ಎಂಬ ಮುನ್ಸೂಚನೆ ಇದ್ದು, ಪಂದ್ಯ ಡ್ರಾ ಆಗುವ ಸಾಧ್ಯತೆ ಕಡಿಮೆ. ಕ್ರೀಡಾಂಗಣದ ಇತ್ತೀಚಿನ ಇತಿಹಾಸವನ್ನು ಗಮನಿಸಿದಾಗ ಫಲಿತಾಂಶ ಹೊರಬೀಳುವ ಸಾಧ್ಯತೆಯೇ ಹೆಚ್ಚು. ‘ಬಾಕ್ಸಿಂಗ್ ಡೇ’ ಟೆಸ್ಟ್‌ನಲ್ಲಿ ಏನೇ ಆದರೂ, ಎಂಸಿಜಿಯಲ್ಲಿ ಬೃಹತ್ ಪ್ರೇಕ್ಷಕರ ಮುಂದೆ ಆಗಲಿದೆ. ಮೊದಲ ದಿನವೇ ಕ್ರೀಡಾಂಗಣದಲ್ಲಿ ಬರೋಬ್ಬರಿ 90000 ಪ್ರೇಕ್ಷಕರು ಸೇರುವ ನಿರೀಕ್ಷೆ ಇದೆ.
ಬಾಕ್ಸಿಂಗ್ ಡೇ ಟೆಸ್ಟ್ ಅಂದ್ರೇನು? ಇದಕ್ಕಿದೆ ಒಂದು ಶತಮಾನದ ದೀರ್ಘ ಇತಿಹಾಸ!
ಬ್ರಿಸ್ಬೇನ್‌ನಲ್ಲಿ ಮಳೆಯಿಂದಾಗಿ ಭಾರತ ಸೋಲಿನಿಂದ ಪಾರಾಗಿ ಇನ್ನೂ ಒಂದು ವಾರವಾಗಿದೆ ಅಷ್ಟೇ. ಈ ಒಂದು ವಾರದಲ್ಲಿ ಹಲವು ಸನ್ನಿವೇಶಗಳಿಗೆ ತಂಡ ಸಾಕ್ಷಿಯಾಗಿದೆ. ಆರ್.ಅಶ್ವಿನ್ ದಿಢೀರ್ ನಿವೃತ್ತಿ, ಆಸ್ಟ್ರೇಲಿಯಾದ ಮಾಧ್ಯಮಗಳ ಜೊತೆ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ತಿಕ್ಕಾಟ, ಅಭ್ಯಾಸಕ್ಕೆ ಬಳಸಿದ ಪಿಚ್‌ಗಳನ್ನು ನೀಡಿದ್ದಕ್ಕೆ ಎಂಸಿಜಿ ಆಡಳಿತದ ಬಗ್ಗೆ ಭಾರತ ತಂಡ ಅಸಮಾಧಾನ ಹೀಗೆ ಹಲವು ಘಟನೆಗಳು ನಡೆದಿವೆ.
ಸೋತರೆ ಟೆಸ್ಟ್ ಚಾಂಪಿಯನ್ ಫೈನಲ್‌ನಿಂದ ಭಾರತ ಔಟ್?
ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದೃಷ್ಟಿಯಿಂದ ಎರಡೂ ತಂಡಗಳಿಗೆ ಇದು ಮಹತ್ವದ ಪಂದ್ಯ ಎನಿಸಿದೆ. ಭಾರತದ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಆಸ್ಟ್ರೇಲಿಯಾ ವಿರುದ್ಧ ಬಾಕಿ ಇರುವ ಎರಡೂ ಪಂದ್ಯಗಳಲ್ಲಿ ಗೆಲುವು ಅನಿವಾರ್ಯ. ಆಸ್ಟ್ರೇಲಿಯಾಕ್ಕೆ ಈ ಸರಣಿ ಬಳಿಕ ಶ್ರೀಲಂಕಾದಲ್ಲಿ 2 ಪಂದ್ಯ ಬಾಕಿ ಇದೆ. ಹೀಗಾಗಿ, ಫೈನಲ್ ರೇಸ್‌ನಲ್ಲಿ ಭಾರತಕ್ಕಿಂತ ಆಸ್ಟ್ರೇಲಿಯಾಕ್ಕೆ ಅನುಕೂಲ ಹೆಚ್ಚು. ಒಂದು ವೇಳೆ ಈ ಪಂದ್ಯ ಡ್ರಾಗೊಂಡರೂ, ಭಾರತದ ಹಾದಿ ಕಠಿಣಗೊಳ್ಳಲಿದೆ.
2014-15ರಲ್ಲಿ ಕೊನೆ ಬಾರಿ ಭಾರತ ವಿರುದ್ಧ ಸರಣಿ ಜಯ
ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧ ಟೆಸ್ಟ್ ಸರಣಿ ಗೆದ್ದು ಸುಮಾರು 10 ವರ್ಷವೇ ಆಗಿದೆ. 2014-15ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ 4 ಪಂದ್ಯಗಳ ಸರಣಿಯನ್ನು ಆಸೀಸ್ 2-0ಯಲ್ಲಿ ಜಯಿಸಿತ್ತು. ಆ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ನೆಲಗಳಲ್ಲಿ ಉಭಯ ತಂಡಗಳು ತಲಾ 2 ಸರಣಿಗಳನ್ನು ಆಡಿವೆ. ತಲಾ 4 ಟೆಸ್ಟ್‌ಗಳ ಈ ಸರಣಿಗಳಲ್ಲಿ ಪ್ರತಿ ಬಾರಿಯೂ ಭಾರತ 2-1ರಲ್ಲಿ ಸರಣಿ ವಶಪಡಿಸಿಕೊಂಡಿದೆ.
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ; ಟೀಂ ಇಂಡಿಯಾದಲ್ಲಿ ಮೇಜರ್ ಚೇಂಜ್!
2011ರ ಬಳಿಕ ಎಂಸಿಜಿಯಲ್ಲಿ ಸೋತಿಲ್ಲ ಟೀಂ ಇಂಡಿಯಾ!
ಕಳೆದ 10 ವರ್ಷದಲ್ಲಿ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ಭಾರತ ತಂಡದ ಪಾಲಿಗೆ ಅದೃಷ್ಟದ ತಾಣ ಎನಿಸಿದೆ. ಟೀಂ ಇಂಡಿಯಾ ಇಲ್ಲಿ ಕೊನೆಯ ಬಾರಿಗೆ ಪಂದ್ಯ ಸೋತಿದ್ದು 2011ರಲ್ಲಿ. ಆ ಬಳಿಕ 2014-15ರ ಪ್ರವಾಸದಲ್ಲಿ ಡ್ರಾ ಸಾಧಿಸಿದ್ದ ಭಾರತ, ಕಳೆದೆರಡು ಪ್ರವಾಸಗಳಲ್ಲಿ ಅಂದರೆ 2018-19ರಲ್ಲಿ 137 ರನ್, 2020-21ರಲ್ಲಿ 8 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು. ಇದೀಗ ಮತ್ತೊಮ್ಮೆ ಎಂಸಿಜಿಯಲ್ಲಿ ಗೆಲ್ಲುವ ಮೂಲಕ ಭಾರತ ತನ್ನ ದಾಖಲೆಯನ್ನು ಮುಂದುವರಿಸಿಕೊಂಡು ಹೋಗುವ ಗುರಿ ಹೊಂದಿದೆ.