ಬಾಕ್ಸಿಂಗ್ ಡೇ ಟೆಸ್ಟ್; 3ನೇ ದಿನ ಭಾರತದ ಬಿಗಿ ಹಿಡಿತ, ಸಂಕಷ್ಟದಲ್ಲಿ ಆಸೀಸ್ ಪಡೆ!

By Suvarna NewsFirst Published Dec 28, 2020, 3:50 PM IST
Highlights

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ 2ನೇ ಪಂದ್ಯದಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಟೀಂ ಇಂಡಿಯಾ ಪಂದ್ಯದ ಮೇಲಿನ ಹಿಡಿತ ಬಿಗಿಗೊಳಿಸಿದೆ. 3ನೇ ದಿನದಾಟದ ಹೈಲೈಟ್ಸ್ ಇಲ್ಲಿದೆ.

ಮೆಲ್ಬೊರ್ನ್(ಡಿ.28):  ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ದಿಟ್ಟ ಹೋರಾಟ ಮುಂದುವರಿಸಿದೆ. ಆಸೀಸ್ ತಂಡವನ್ನು ಎರಡನೇ ಬಾರಿಗೆ ಆಲೌಟ್ ಮಾಡಲು ಟೀಂ ಇಂಡಿಯಾ ಸಜ್ಜಾಗಿದೆ. 3ನೇ ದಿನದಾಟದಲ್ಲಿ ಆಸೀಸ್ 2 ರನ್‌ಗಳ ಮುನ್ನಡೆ ಪಡೆದುಕೊಂಡು ಸಮಾಧಾನ ಪಟ್ಟುಕೊಂಡಿದೆ. ಆದರೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ನಿಮ್ಮ ಟಿವಿ ಸ್ಕ್ರೀನ್ ಮೇಲೂ ಕಾಣುತ್ತಾ ಇಂತಹ ನಂಬರ್? ಕಡೆಗಣಿಸಬೇಡಿ, ಎಚ್ಚರ!..

3ನೇ ದಿನದಾಟ ಮುಂದುವರಿಸಿದ ಟೀಂ ಇಂಡಿಯಾ 326 ರನ್‌ಗೆ ಆಲೌಟ್ ಆಯಿತು. ಇನ್ನು 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾಗೆ ಆರಂಭದಲ್ಲೇ ಉಮೇಶ್ ಯಾದವ್ ಶಾಕ್ ನೀಡಿದರು. ಜೋ ಬರ್ನ್ಸ್ ಕೇವಲ 4 ರನ್‌ಗೆ ಔಟಾದರು. ಇನ್ನು ಆರ್ ಆಶ್ವಿನ್ ಸ್ಪಿನ್ ಮೋಡಿಗೆ  ಮಾರ್ನಸ್ ಲಬುಶಾನೆ ಬಲಿಯಾದರು. ಮಾಥ್ಯೂ ವೇಡ್ ಹೊರಾಟ ಮುಂದುವರಿಸಿದರು.

ಸ್ಟೀವ್ ಸ್ಮಿತ್ 8 ರನ್ ಸಿಡಿಸಿ ಔಟಾದರು. ಇತ್ತ ವೇಡ್ 40 ರನ್ ಕಾಣಿಕೆ ನೀಡಿದರು. ಟ್ರಾವಿಸ್ ಹೆಡ್ ಹಾಗೂ ನಾಯಕ ಟಿಮ್ ಪೈನ್ ಆಸರೆಯಾಗಲಿಲ್ಲ. ದಿಟ್ಟ ಬೌಲಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ ಆಸೀಸ್ ತಂಡವವನ್ನು ದಿನದಾಟದಲ್ಲಿ6 ವಿಕೆಟ್ ನಷ್ಟಕ್ಕ 133 ರನ್‌ಗಳಿಗೆ ನಿಯಂತ್ರಿಸಿತು. ಹೀಗಾಗಿ ಆಸೀಸ್ ಕೇವಲ 2 ರನ್ ಮನ್ನಡೆ ಪಡೆದುಕೊಂಡಿತು. ಸದ್ಯ ಕ್ಯಾಮರೂನ್ ಗ್ರೀನ್ ಹಾಗೂ ಪ್ಯಾಟ್ ಕಮಿನ್ಸ್ ಕ್ರೀಸ್ ಕಾಯ್ದುಕೊಂಡಿದ್ದಾರೆ. 

ನಾಲ್ಕನೇ ದಿನದಾಟ ಇದೀಗ ತೀವ್ರ ಕುತೂಹಲ ಕೆರಳಿಸಿದೆ. ಆಸೀಸ್ ತಂಡವನ್ನು ಬಹುಬೇಗನೆ ಆಲೌಟ್ ಮಾಡಿ, ಅಲ್ಪ ಮೊತ್ತ ಚೇಸ್ ಮಾಡಲು ಟೀಂ ಇಂಡಿಯಾ ಉತ್ಸುಕವಾಗಿದೆ. ಇಷ್ಟೇ ಅಲ್ಲ ಪಂದ್ಯವನ್ನು ನಾಲ್ಕೇ ದಿನಕ್ಕೆ ಮುಗಿಸುವ ಯತ್ನದಲ್ಲಿದೆ.

click me!